ನೀವು ಬೋಂಡ ಪ್ರಿಯರೇ? ಯಾರಿಗೆ ತಾನೆ ಬೋಂಡ ಅಂದ್ರೆ ಇಷ್ಟಇಲ್ಲ! ಈಗಂತೂ ಚಳಿಗಾಲ.. ಚುಮು ಚುಮು ಚಳಿಯಲ್ಲಿ ಕಾಫಿ ಅಥವಾ ಟೀ ಜೊತೆ ಒಂದ್ ಪ್ಲೇಟ್ ಬಿಸಿಬಿಟಿ ಬೋಂಡ ಇದ್ರೆ ವಾವ್ಹ್ ಅದರ ಮಜಾನೇ ಬೇರೆ! ಆದ್ರೆ, ಇಲ್ಲೊಬ್ಬ ಮಹಿಳೆ ಬೊಂಡ ತಿಂದು ಮೃತಪಟ್ಟಿದ್ದಾರೆ. ಗ್ರಹಚಾರ ಎಂದರೆ ಹಾಗೆ .. ಯಾರೂ, ಯಾವಗ ಏನಾಗ್ತಾರೆ.. ಯಾವಗ ಸಾವು ಬರುತ್ತೆ ಅನ್ನೋದನ್ನು ಹೇಳಕ್ಕಾಗಲ್ಲ. ಹಾಗೆಯೇ ಈ ನತದೃಷ್ಟ ಮಹಿಳೆಗೆ ಬೋಂಡ ಮುಳುವಾಗಿದೆ.
ಈ ಘಟನೆ ನಡೆದಿರೋದು ಚೆನ್ನೈನ ಚುಲೈಮೇಡು ಪ್ರದೇಶದಲ್ಲಿ. 45 ವರ್ಷದ ಪದ್ಮಾವತಿ ಎಂಬ ಮಹಿಳೆ ತನ್ನ ತಾಯಿ ಜೊತೆ ಮನೆ ಪಕ್ಕದ ಹೋಟೆಲ್ಗೆ ಹೋಗಿದ್ದರು. ಅಲ್ಲಿ ಬಿಸಿ ಬಿಸಿ ಆಲೂ ಬೋಂಡ ತಿನ್ನುತ್ತಿರುವಾಗ ಬೋಂಡದ ಚೂರು ಗಂಟಲಲ್ಲಿ ಸಿಕ್ಕಿಕೊಂಡಿದೆ. ಆಗ ಉಸಿರಾಟದ ಸಮಸ್ಯೆ ಎದುರಾಗಿದೆ. ಕೂಡಲೇ ಕಿಲ್ಪಾಕ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.