ಎಲ್ಲರನ್ನು ದೇಶದ ಬಗ್ಗೆ ಪ್ರಶ್ನಿಸುತ್ತಿದ್ದ ಮೋದಿ ಸರಕಾರ ಈಗ ಭಾರತೀಯರನ್ನೇ ನಿಮ್ಮ ದೇಶ ಯಾವುದೆಂದು ಪ್ರಶ್ನಿಸುತ್ತಿದ್ದಾರೆ. ಇಲ್ಲೇ ಅವರು ತಪ್ಪು ಮಾಡಿರುವುದು. ದೇಶವನ್ನು ವಿಂಗಡಣೆ ಮಾಡಲು ಹೊರಟಿದ್ದಾರೆ. ಸಾವಿರ ವರ್ಷವಾದರೂ ನಿಮಗೆ ಹಿಂದೂ ರಾಷ್ಟç ಮಾಡಲು ಸಾಧ್ಯವಿಲ್ಲವೆಂದು ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾಗೆ ಸವಾಲೆಸೆದರು.
ಉಳ್ಳಾಲ ಮುಸ್ಲಿಂ ಒಕ್ಕೂಟ ಭಾನುವಾರ ಉಳ್ಳಾಲ ಹಝ್ರತ್ ಶಾಲೆ ಬಳಿಯ ಮೈದಾನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹಮ್ಮಿಕೊಂಡಿದ್ದ ಸಮಾನ ಮನಸ್ಕರ ಸಭೆಯಲ್ಲಿ ಮಾತನಾಡಿದರು. ಇದುವರೆಗೆ ದೇಶದ ಬಗ್ಗೆ ಮಾತನಾಡುವವರು ಇದೀಗ ಪಾಕಿಸ್ತಾನದ ಕುರಿತು ಮಾತನಾಡುತ್ತಿದ್ದಾರೆ. ಎನ್ ಆರ್ ಸಿ ಬೇಕೆಂದು ಯಾರೂ ಕೇಳಿಲ್ಲ. ದೇಶದ ಹೆಸರು ಹೇಳಿಕೊಂಡು ಚುನಾವಣೆಯಲ್ಲಿ ಗೆದ್ದು ಜನಸಾಮಾನ್ಯರ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಪ್ರಜಾಪ್ರಭುತ್ವವೆಂದರೆ ಜನರೇ ತೋರಿಸಿಕೊಟ್ಟಿದ್ದಾರೆ ಎಂದು ಗುಡುಗಿದರು.
ಎನ್ ಆರ್ ಸಿ, ಸಿ ಎ ಎ ಮೂಲಕ ಜನರ ಮೇಲೆ ಸವಾರಿ ಮಾಡಲು ಸರಕಾರ ಚಿಂತನೆ ನಡೆಸಿರಬಹುದು. ಆದರೆ ಜನರನ್ನು ವಿಂಗಡಿಸಿ ಸಂಘರ್ಷ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಎನ್ ಆರ್ ಸಿಗೆ ಬದ್ಧರಾಗಲು ತಯಾರಿಲ್ಲ. ಇದರಲ್ಲಿ ಯಶಸ್ವಿ ಆಗಲು ಸಾಧ್ಯವಿಲ್ಲ. ನನ್ನನ್ನು ಜೈಲಿಗೆ ಕಳುಹಿಸುವುದಾದರೆ ಮೊದಲು ಮಾಹಿತಿ ನೀಡಿ ಕಳುಹಿಸಲಿ. ಗೃಹಸಚಿವರಿಗೆ ಪತ್ರವನ್ನೂ ಬರೆದಿದ್ದೇನೆ ಎಂದಿದ್ದಾರೆ.
ಮೋದಿ, ಅಮಿತ್ ಶಾಗೆ ನೇರಾನೇರ ಸವಾಲೆಸೆದ ಮಾಜಿ ಜಿಲ್ಲಾಧಿಕಾರಿ!
Date: