2020ರಲ್ಲಿ ನಡೆಯಲಿರೋ ಪ್ರಮುಖ ವಿದ್ಯಾಮಾನಗಳು..!

Date:

ಕಳೆದ 2019 ಕ್ಕೆ ಬೈ ಬೈ ಹೇಳಿ 2020 ಭರ್ಜರಿಯಾಗಿ ಬರಮಾಡಿಕೊಂಡಿದ್ದೇವೆ. ಸಿಹಿ-ಕಹಿ ನೆನಪುಗಳ ಮಿಶ್ರಿಣದಲ್ಲಿ 2019 ಕಳೆದು ಹೋಗಿದೆ.ಅದೆಷ್ಟೋ ಘಟನೆಗಳು ನಡೆದು ಹೋಗಿವೆ. ಹಳೆಯದನೆಲ್ಲ ಮರೆತು ಹೊಸ ವರ್ಷದಲ್ಲಿ ಹೊಸತನ್ನು ಕಾಣುವ ಹಂಬಲದಲ್ಲಿದ್ದೇವೆ. ಈ ವರ್ಷ ನಡೆಯುವ ಪ್ರಮುಖ ವಿದ್ಯಮಾನಗಳ ಬಗ್ಗೆ ಮಾಹಿತಿ ನಾವ್ ಕೊಡ್ತೀವಿ ಮುಂದೆ ಓದಿ.
ಈ ಹೊಸ ವರ್ಷ ಪ್ರಪಂಚದ ಎಲ್ಲ ಕಡೆ ಅನೇಕ ಪ್ರಮುಖ ಘಟನೆಗಳು ನಡೆಯಲಿವೆ. ದೇಶ, ರಾಜ್ಯ, ಹಳ್ಳಿಯಿಂದ ಮೆಟ್ರೋ ಸಿಟಿಗಳ ತನಕ ಅನೇಕ ಘಟನೆಗಳು ಪೂರ್ವ ನಿಗಧಿಯಾಗಿವೆ. ಯಾವ ಯಾವ ಘಟನೆಗಳು ಎಲ್ಲಿ ನಡೆಯುತ್ತವೆ ಎಂಬ ಕೂತುಹಲ ನಿಮಗೂ ಇದೆ ಅಲ್ವಾ? ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಜಪಾನ್ ವಹಿಸಲಿದೆ ಒಲಂಪಿಕ್ ಅತಿಥ್ಯ
ಕಳೆದ ಬಾರಿ ಬ್ರೆಜಿಲ್ನಲ್ಲಿ ನಡೆದಿದ್ದ ವಿಶ್ವ ಕ್ರೀಡೆಯಾದ ಒಲಂಪಿಕ್, ಈ ವರ್ಷ ಜಪಾನ್ ರಾಜಧಾನಿ ಟೊಕಿಯೋದಲ್ಲಿ ನಡೆಯಲಿದೆ . 2020ಯನ್ನು ಒಲಂಪಿಕ್ ವರ್ಷವೆಂದೇ ಕರೆಯಲಾಗಿತ್ತಿದೆ. ಜುಲೈ 24 ರಿಂದ ಆಗಸ್ಟ್ 9 ರವರೆಗೆ ನಡೆಯಲಿರುವ ಕ್ರೀಡಾಕೂಟದಲ್ಲಿ 200ಕ್ಕೂ ಹೆಚ್ಚು ದೇಶಗಳು ಭಾಗವಹಿಸಲಿವೆ.
ಅಮೆರಿಕದಲ್ಲಿ ನಡೆಯಲಿದೆ ಅಧ್ಯಕ್ಷೀಯ ಚುನಾವಣೆ
ಅಮೆರಿಕದ ಅಧ್ಯಕ್ಷ ಸ್ಥಾನದ ಚುನಾವಣೆ 2020 ನವೆಂಬರ್ 3 ರಂದು ನಡೆಯಲಿದ್ದು ಇದು ಜಾಗತಿಕ ವಿದ್ಯಮಾನವಾಗಿ ಪರಿಗಣಿಸಲಾಗುತ್ತದೆ. ಅಮೆರಿಕದಲ್ಲಿ ಬಹುಪಾರ್ಟಿ ವ್ಯವಸ್ಥೆ ಇಲ್ಲದ ಕಾರಣ ಅಧ್ಯಕ್ಷೀಯ ಸ್ಥಾನಕ್ಕೆ ರಿಪಬ್ಲಿಕ್ ಹಾಗೂ ಡೆಮಾಕ್ರಟಿಕ್ ಪಕ್ಷಗಳ ನಡುವೆ ಚುನಾವಣೆ ನಡೆಯಲಿದೆ.
2020ಯಲ್ಲಿ ಐಸಿಸಿ ಟಿ20 ವಿಶ್ವಕಪ್
ಈ ಬಾರಿಯ ಟಿ20 ವಿಶ್ವಕಪ್ ಕ್ರಿಕೆಟ್ ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ಆಸ್ಟೇಲಿಯದಲ್ಲಿ ನಡೆಯಲಿದೆ. ಟೀಮ್ ಇಂಡಿಯಾ ಸೇರಿದಂತೆ ಒಟ್ಟು 16 ತಂಡಗಳು ಟೂರ್ನಿಯಲ್ಲಿ ಭಾಗಿಯಾಗಲಿವೆ.
ವಿಶ್ವದ ಜನಸಂಖ್ಯೆ 775 ಕೋಟಿ !
ವಿಶ್ವದ ಜನಸಂಖ್ಯೆ ಈ ವರ್ಷ 775 ಕೋಟಿ ತಲುಪಲಿದೆ ಎಂದು ಅಂದಾಜು ಮಾಡಲಾಗಿದೆ. 700 ಕೋಟಿ ಇರುವ ಜನಸಂಖ್ಯೆ, ಈ ವರ್ಷ 75 ಕೋಟಿ ಹೆಚ್ಚಿಗೆಯಾಗಲಿದೆ. ಭಾರತದ ಜನಸಂಖ್ಯೆ 135 ಕೋಟಿ ತಲುಪುವ ಸಾಧ್ಯತೆಯಿದೆ. ಆದರೆ ಚೀನಾ ತನ್ನ ಜನಸಂಖ್ಯೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲಿದೆ.
ಬಿಬಿಎಂಪಿ ಚುನಾವಣೆ ಸಮರ
ಕರ್ನಾಟಕದ ರಾಜಧಾನಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ರಸ್ತುತ ಅವಧಿ ಆಗಸ್ಟ್ನಲ್ಲಿ ಮುಕ್ತಾಯವಾಗಲಿದೆ. ಅಲ್ಲದೆ ಆ ತಿಂಗಳಲ್ಲೆ ಚುನಾವಣೆಯು ಸಹ ನಡೆಯಲಿದ್ದು. ಒಟ್ಟು 198 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.ಕಳೆದ ಭಾರಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದರು ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಲಿಲ್ಲ.

ಅತಿದೊಡ್ಡ ಕಟ್ಟಡ ಆರಂಭ
ಜಗತ್ತಿನಲ್ಲೆ ಅತಿದೊಡ್ಡ ಕಟ್ಟಡ ನಿರ್ಮಾಣ ಈ ವರ್ಷ ಆರಂಭವಾಗಲಿದೆ. ಆ ಕಟ್ಟಡವೇ ಜೆಡ್ಡಾ ಟವರ್. 126 ಎಕರೆ ಪ್ರದೇಶದಲ್ಲಿ ಒಂದು ಕಿಲೋ ಮೀಟರ್ ಕಟ್ಟಡ ನಿರ್ಮಾಣವಾಗಲಿದೆ. ಇದು ಪ್ರಪಂಚದ ಎತ್ತರದ ದುಬೈನ ಬುರ್ಜ್ ಖಲೀಪಾ ಕಟ್ಟಡವನ್ನು ಮೀರಿಸಿ ಅತೀ ಎತ್ತರದ ಕಟ್ಟಡ ಎನಿಸಿಕೊಳ್ಳಲಿದೆ.
ಕನ್ನಡ ಸಾಹಿತ್ಯ ಸಮ್ಮೇಳನ
85 ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನ ಕಲುಬುರಗಿಯಲ್ಲಿ ಫೆಬ್ರವರಿ 6 ಹಾಗೂ 7 ರ ವರೆಗೆ ನಡೆಯಲಿದೆ. ಹಿರಿಯ ಸಾಹಿತಿ ಎಚ್.ಎಸ್. ವೆಂಕಟೇಶ್ಮೂರ್ತಿ ಅವರು ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಳೆದ ಬಾರಿ ಸಮ್ಮೇಳನವು ಧಾರವಾಡದಲ್ಲಿ ಯಶಸ್ವಿಯಾಗಿ ನಡೆದಿತ್ತು.

ಚಂದ್ರಯಾನ -3 ಫಿಕ್ಸ್
ಇಸ್ರೋದ ಚಂದ್ರಯಾನ-2 ವಿಫಲವಾದ ಬಳಿಕ ಮತ್ತೆ ಫಿನಿಕ್ಸ್ನಂತೆ ಮತ್ತೊಂದು ಕಾರ್ಯಕ್ಕೆ ಕೈ ಹಾಕಿದೆ . ಚಂದ್ರಯಾನ -3 ಈ ವರ್ಷವೇ ನಡೆಸುತ್ತೇವೆ ಎಂದು ಘೋಷಿಸಿದೆ. ಭಾರತದ ಮಹತ್ವದ ಯೋಜನೆಯಾಗಿರುವ ಚಂದ್ರಯಾನ -3 ನವೆಂಬರ್ 2020ಕ್ಕೆ ನಭಕ್ಕೆ ಹಾರಲಿದೆ.
ಇಸ್ರೋದಿಂದ ಮತ್ತೊಂದು ಹೆಜ್ಜೆಯಾಗಿ ಆದಿತ್ಯ
ಇಸ್ರೋವನ್ನು ಭಾರತದ ಹೆಮ್ಮೆ ಎಂದು ಹೇಳಬಹುದು. ಈ ವರ್ಷ ಇಸ್ರೋದಿಂದ ಮತ್ತೊಂದು ಮಹತ್ವದ ಸಾಧನೆಗೆ ಮುನ್ನುಡಿ ಬರೆಯಲಿದೆ. ಸೂರ್ಯನ ಹೊರ ಭಾಗ ಕರೋನಾದ ಅಧ್ಯಯನಕ್ಕೆ ನೌಕೆಯನ್ನು ಕಳುಹಿಸಲಿದೆ. ಅಲ್ಲದೆ ಈ ಯೋಜನೆಗೆ ಆದಿತ್ಯ-1 ಎಂದು ಹೆಸರಿಡಲಾಗಿದೆ. ಅಂದುಕೊಂಡಂತೆ ಆದರೆ ಏಪ್ರಿಲ್ನಲ್ಲಿ ರಾಕೆಟ್ ನಭಕ್ಕೆ ಹಾರಲಿದೆ.
ಬಿಹಾರ , ದೆಹಲಿ ವಿಧಾನಸಭೆ ಚುನಾವಣೆ
ದೇಶದ ರಾಜಧಾನಿ ದೆಹಲಿ ಹಾಗೂ ಬಿಹಾರ್ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಫೆಬ್ರವರಿಯಲ್ಲಿ ದೆಹಲಿ ಹಾಗೂ ಅಕ್ಟೋಬರ್ನಲ್ಲಿ ಬಿಹಾರ್ನಲ್ಲಿ ಚುನಾವಣೆ ನಡೆಯಲಿದ್ದು, ಪ್ರಸ್ತುತ ಮುಖ್ಯಮಂತ್ರಿಗಳಾದ ಅರವಿಂದ್ ಕೇಜ್ರಿವಾಲ್ ಹಾಗೂ ನಿತೀಶ್ ಕುಮಾರ್ ಇಬ್ಬರಿಗೂ ಅಗ್ನಿ ಪರೀಕ್ಷೆ ಕಾದಿದೆ.

Share post:

Subscribe

spot_imgspot_img

Popular

More like this
Related

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್!

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್! ಬೆಂಗಳೂರು:- ಆಟೋಗೆ ಕಸ...

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್!

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್! ನೆಲಮಂಗಲ: ನೆಲಮಂಗಲದ ಅಪಾರ್ಟ್ಮೆಂಟ್‌ವೊಂದರಲ್ಲಿ 24ನೇ ಮಹಡಿಯಿಂದ...

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...