ಐಎಎಸ್, ಐಪಿಎಸ್ ಅಧಿಕಾರಿಗಳು ಕಾನೂನನ್ನು ರಕ್ಷಿಸುವವರು. ಅವರು ಜನಸಾಮಾನ್ಯರಿಗೆ ರಕ್ಷಣೆ ನೀಡುತ್ತಾರೆ. ಅನ್ಯಾಯದ ವಿರುದ್ಧದ ಧ್ವನಿ ಅವರಾಗಬೇಕು. ಆಗ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಆದರೆ ಇಲ್ಲೊಬ್ಬ ಐಪಿಎಸ್ ಅಧಿಕಾರಿ ತನ್ನ ಸಹೋದ್ಯಗಿಯ ಅಪ್ರಾಪ್ತ ಮಗಳಿಗೆ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.
ಅಸ್ಸಾಂನ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು ತಮ್ಮ ಸಹೋದ್ಯೋಗಿಯ 13 ವರ್ಷದ ಮಗಳಿಗೆ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದ್ದು, ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಡಿಸೆಂಬರ್ ೧೩ರಂದು ಆರೋಪಿ ಐಪಿಎಸ್ ಅಧಿಕಾರಿ ಪಾರ್ಟಿಯೊಂದಕ್ಕೆ ತೆರಳಿದ್ದಾಗ ತಮ್ಮ ಸಹೋದ್ಯೋಗಿಯೊಬ್ಬರ ಅಪ್ರಾಪ್ತ ಮಗಳಿಗೆ ಕಿರುಕುಳ ನೀಡಿದ್ದಾರೆನ್ನಲಾಗಿದೆ. ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇಲೆ ಜನವರಿ 3 ನೇ ತಾರೀಖು ಗುವಾಹಟಿಯಲ್ಲಿ ಪ್ರಕರಣ ದಾಖಲಾಗಿದೆ. ‘ಈ ಬಗ್ಗೆ ಮಾತಾಡಿರುವ ಅಸ್ಸಾಂ ಡಿ ಜಿ ಪಿ ಬಿ ಜೆ ಮಹಂತಾ, ಕಾನೂನಿನ ಪ್ರಕಾರ ಸೂಕ್ತ ತನಿಖೆ ನಡೆಸಲಾಗುವುದು ಎಂದಿದ್ದಾರೆ.
ಸಹೋದ್ಯೋಗಿಯ ಮಗಳಿಗೆ ಐಪಿಎಸ್ ಅಧಿಕಾರಿಯಿಂದ ಕಿರುಕುಳ?
Date: