ಸ್ಟೇಟಸ್ ನೋಡಿ ಲವ್ ಆಯ್ತು; ಆದರೆ ಅವಳು ಸಿಗಲ್ಲ ಅನ್ನೋದು ಸಹ ಕನ್ಫರ್ಮ್…!

Date:

ಲವ್ ಅನ್ನೋದೇ ಹಾಗೆ…ಎಲ್ಲಿ? ಯಾವಾಗ? ಹೆಂಗೆ? ಯಾರ್ ಮೇಲೆ ಆಗುತ್ತೆ ಅಂತ ಹೇಳೋಕೆ ಆಗಲ್ಲ. ಪ್ರೀತಿ ಮೊದಲ ನೋಟದಲ್ಲೇ ಹುಟ್ಟಬಹುದು ಅಥವಾ ಒಡನಾಟ ಬೆಳೀತಾ ಬೆಳೀತಾ ಆಮೇಲೆ ಚಿಗುರೊಡೆಯ ಬಹುದು. ಆದರೆ, ಇದು ಸ್ಟೇಟಸ್ ನೋಡಿ ಹುಟ್ಟಿದ ಪ್ರೀತಿ ಕಥೆ…!

ಅವನು ಹರ್ಷ, ಸಿಕ್ಕಾಪಟ್ಟೆ ಅಲ್ಲ ಅಂತಾದ್ರು ಒಂದ್ ಸ್ವಲ್ಪ ಮಟ್ಟಿಗೆ ತುಂಬಾ ಪಾಪದ ಹುಡುಗ. ಹುಡುಗಿಯರ ಜೊತೆಯಂತೂ ಮಾತಾಡೋದು ತುಂಬಾ ಕಮ್ಮಿ. ಪ್ರೀತಿಸಿದ್ದ ಹುಡ್ಗಿ ಕೈಕೊಟ್ಟ ಮೇಲೆ ಹುಡ್ಗೀರನ್ನ ತುಂಬಾನೇ ದೂರ ಇಟ್ಟಿದ್ದ ಆಸಾಮಿ…!
ಹೀಗಿದ್ದ ಇವನು ಯಾರ ಮೆಸೇಜ್ ಗಳಿಗೂ ಹೆಚ್ಚು ರಿಪ್ಲೆ ಮಾಡ್ತಿರ್ಲಿಲ್ಲ. ಒಂದು ದಿನ ಡಿಗ್ರಿ ಕ್ಲಾಸ್ ಮೇಟ್ ಪವಿತ್ರಾಳ ವಾಟ್ಸಪ್ ಸ್ಟೇಟಸ್ ನೋಡಿದ. ಪವಿತ್ರ ತನ್ನ ಇಬ್ಬರು ಗೆಳತಿಯರೊಡನೆ ಇದ್ದ ಫೋಟೋವನ್ನು ಸ್ಟೇಟಸ್ ನಲ್ಲಿ ಅಪ್ಲೋಡ್ ಮಾಡಿದ್ದಳು. ಅದರಲ್ಲಿದ್ದ ಒಬ್ಬಾಕೆ ಇವನ ಕಣ್ಣು ಕುಕ್ಕಿ, ಕ್ಷಣಾರ್ಧದಲ್ಲಿ ಹೃದಯ ತಟ್ಟಿ ಎಬ್ಬಿಸಿಯೇ ಬಿಟ್ಟಳು…!

ಹರ್ಷ ತಡಮಾಡದೇ ಆ ಸ್ಟೇಟಸ್ ನಲ್ಲಿರುವ ಹಳದಿ ಬಣ್ಣದ ಡ್ರೆಸ್ ಹಾಕಿಕೊಂಡಿರುವ ಹುಡುಗಿ ಯಾರು? ಎಂದು ಪವಿತ್ರಾಗೆ ಕೇಳಿದ…!
ಪವಿತ್ರ , ‘ಏನೋ ಇವತ್ತು ನಾನು ನೆನಪಾದ್ನೋ? ಫ್ರೆಂಡ್ ಅಂತ ಒಂದ್ ಟೆಕ್ಸ್ಟ್ ಇಲ್ಲ, ಮೆಸೇಜ್ ಇಲ್ಲ ಅಂತ ರಿಪ್ಲೆ ಮಾಡಿದ್ಲು…!
ಅಯ್ಯೋ, ನೀವೆಲ್ಲಾ ಚೆನ್ನಾಗಿ ನೆನಪಿದ್ದೀರಿ. ನಾನು ಸಾಮಾನ್ಯವಾಗಿ ಯಾರಿಗೂ ಟೆಕ್ಸ್ಟ್ ಮಾಡಲ್ಲ ಕಣೇ…ಕ್ಷಮಿಸು, ಆ ಹುಡ್ಗಿ ಯಾರು ಅಂತ ಹೇಳೇ ಪ್ಲೀಸ್ ಅಂತ ಮನವಿ ಮಾಡಿಕೊಂಡ.
‘ ಅವಳ? ನನ್ ಫ್ರೆಂಡ್ ಕಣೋ…ಹೆಸರು, ಸಿಂಧು’ ಅಂತ ಎಂದಳು.

ಓಹೋ, ಹೌದ? ಥ್ಯಾಂಕ್ಸ್ ಕಣೇ…ಚೆನ್ನಾಗಿದ್ದಾರೆ, ನಂಗೆ ಇಷ್ಟ ಆದ್ರು ಅಂತ ಹರ್ಷ ಮತ್ತೊಂದು ಮೆಸೇಜ್ ಹಾಕಿದ.
ಅಯ್ಯೋ…ಹರ್ಷ , ಅವಳಿಗೆ ಎರಡು ತಿಂಗಳ ಹಿಂದಷ್ಟೇ ಮದ್ವೆ ಆಯ್ತು ಕಣೋ…! ಎಂಬ ರಿಪ್ಲೆ ಪವಿತ್ರಾ ಕಡೆಯಿಂದ ಬಂತು.
ಹರ್ಷ ಕೂಡಲೇ ಆ ಸ್ಟೇಟಸ್ ನಲ್ಲಿನ ಫೋಟೋ ಮತ್ತೊಮ್ಮೆ ನೋಡಿದ. ಕತ್ತಲ್ಲಿ ತಾಳಿ, ಕಾಲ್ಬೆರಳಲ್ಲಿ ಕಾಲುಂಗುರ ಇರದಿರೋದನ್ನು ಗಮನಿಸಿ, ಸುಳ್ ಹೇಳ್ಬೇಡ ಪವಿ, ಅವಳಿಗೆ ಮದ್ವೆ ಆಗಿಲ್ಲ. ಕಾಲುಂಗುರ , ತಾಳಿ ಇಲ್ಲ ಅಲ ಅಂದ…!
ಸುಳ್ ಯಾಕೆ ಹೇಳಲಿ ಹರ್ಷ? ಅದು ಮದುವೆಗೂ ಮೊದಲೇ ತೆಗೆಸಿಕೊಂಡಿದ್ದ ಫೋಟೋ ಕಣೋ ನಿಜಕ್ಕೂ ಮದುವೆಯಾಗಿದೆ ಎಂದು ಪವಿತ್ರ ಹೇಳಿದಾಗ ಹರ್ಷನ ಹೃದಯ ಅಕ್ಷರಶಃ ಛಿದ್ರವಾಯ್ತು.

ಕೂಡಲೇ ಪವಿತ್ರಗೆ ಕಾಲ್ ಮಾಡಿದ. ಕ್ಷಮಿಸು ಅವಳು ಇಷ್ಟ ಆದಳು. ಮದ್ವೆ ಆಗಿದೆ ಅಂತ ಗೊತ್ತಿದ್ದರೆ ನಾನು ಹೀಗೆ ಕೇಳ್ತಾ ಇರ್ಲಿಲ್ಲ ಎಂದ.
ಅದಕ್ಕೆಲ್ಲ ಸಾರಿ ಯಾಕೆ? ನಿಂದು ಮದ್ವೆ ಏಜು…ನೀನು ಮದ್ವೆ ಆಗೋಕೆ ಕೇಳಿದ್ದಲ್ವಾ? ಜೋಡಿನೂ ಸಖತ್ತಾಗಿರ್ತಿತ್ತು. ಅವಳು ನನ್ ಬೆಸ್ಟ್ ಫ್ರೆಂಡ್,ನೀನೂ ಸಹ ನಂಗೆ ಫ್ರೆಂಡ್ ಅವಳನ್ನು ನೀನು ಮದ್ವೆ ಆಗಿದ್ದಿದ್ರೆ ನಂಗೂ ತುಂಬಾ ಖುಷಿ ಇರ್ತಿತ್ತು. ಆದರೆ ಈಗ ಏನ್ ಮಾಡೋದು ಎಂದಳು ಪವಿತ್ರ.
ಹರ್ಷ, ಹೆಚ್ಚು ಕಮ್ಮಿ ಒಂದ್ ವರ್ಷದ ಹಿಂದೆ ನಿಂಗೆ ಮೆಸೇಜ್ ಮಾಡಿದ್ದೆ ನೆನಪಿದ್ಯಾ? ನನ್ ಎಫ್ ಬಿನ ನೋಡ್ತಾ ನನ್ ಫ್ರೆಂಡ್ ಒಬ್ಳು ನಿನ್ನ ಕಂಡು , ನಿನ್ನ ಬಗ್ಗೆ ನನ್ನತ್ರ ವಿಚಾರಿಸಿದಳು ಅಂದಿದ್ದೆ ನಾನು. ಆ ಹುಡುಗಿಯೇ ಇವಳೇ ಕಣೋ..! ಅವತ್ತು ನನ್ ಫ್ರೆಂಡ್ ಗೆ ನೀನು ಏನೋ ಒಂಥರ ಇಷ್ಟ ಆದ್ಯಂತೆ ಅಂತ ನಾನು ಹೇಳಿದಾಗ, ನೀನು ‘ಥ್ಯಾಂಕ್ಸ್’ ಅಂತ ಹೇಳಿದ್ದೆ ಅಷ್ಟೇ… ಆಮೇಲೆ ನಾನು ನಿನ್ನ ಕಾಂಟೆಕ್ಟ್ ಮಾಡಿ , ಅವಳಿಗೆ ಪರಿಚಯ ಮಾಡಿಸಿಕೊಡೋಣ ಅಂತ ಟ್ರೈ ಮಾಡಿದ್ರೂ ನೀನು ಸಿಗಲಿಲ್ಲ.

ಆಗ ಸ್ವತಃ ಅವಳು ಕೂಡ ತುಂಬಾ ಬೇಜಾರಾಗಿದ್ಲು. ಅವಳಾಗಿಯೇ ನಂಬರ್ ಕಲೆಕ್ಟ್ ಮಾಡ್ಕೊಂಡು ನಿನ್ನತ್ರ ಮಾತಾಡ್ಬಹುದಿತ್ತು. ಮೆಸೇಜ್ ಮಾಡ್ಬಹುದಿತ್ತು. ಬಟ್, ನಿನ್ನ ಆ್ಯಟಿಟ್ಯೂಡ್ ಅವಳನ್ನ ಭಯ ಪಡಿಸಿತ್ತು. ಫ್ರೆಂಡ್ ಆದ ನಿನ್ನ ಮೆಸೇಜ್ ಗೇ ಸರಿಯಾಗಿ ರೆಸ್ಪಾನ್ಸ್ ಮಾಡದ ಅವನು, ನಾನು ಗುರುತು ಪರಿಚಯ ಇಲ್ಲದವಳು ಮೆಸೇಜ್ ಮಾಡಿದ್ರೆ ಏನ್ ತಿಳ್ಕೋತ್ತಾನ ಎಂದು ಹೇಳಿ ಸುಮ್ಮನಾಗಿದ್ಲು ಕಣೋ. ಅಷ್ಟೇ ಅಲ್ಲ, ಮೆಸೇಜ್ ಗಿಸೇಜ್ ಮಾಡದ ನಿನ್ನ ಬಗ್ಗೆ, ಅದಕ್ಕಿಂತ ಹುಡ್ಗೀ ಮಾತಾಡ್ತಿದ್ದಾಳೆ ಅಂತ ಫ್ಲರ್ಟ್ ಮಾಡದ ನಿನ್ನ ಮೇಲೆ ತುಂಬಾ ಗೌರ ಇಟ್ಕೊಂಡಿದ್ದಾಳೆ ಇವತ್ತಿಗೂ ಎಂದು ಪವಿತ್ರ ಹೇಳಿದಾಗ…ಛೇ..ಎಂದು ಹರ್ಷ ತುಂಬಾ ನೊಂದುಕೊಂಡ.
ಮಾತು ಮುಂದುವರೆಸಿದ ಪವಿತ್ರ, ನಿಮ್ಗೆ ಜಾತಿ ಪ್ರಾಬ್ಲಮ್ ಆಗ್ತಿತ್ತೇನೋ..? ಅವಳು ನೀನು ಭೇಟಿ ಆಗದೇ ಇದ್ದಿದ್ದೇ ಒಳ್ಳೇದಾಯ್ತು ಅಂದಾಗ, ಇಲ್ಲ ಪವಿ,ನಂಗೆ ಜಾತಿ ಮ್ಯಾಟ್ರು ಅಲ್ಲ ಕಣೇ. ಈಗ ಏನ್ ಹೇಳಿದ್ರೂ ಅವಳು ಸಿಗಲ್ಲ ಬಿಡು, ಬೇರೆ ಏನಾದ್ರು ಮಾತಾಡು ಎಂದ ಹರ್ಷ.
ಹರ್ಷ, ಇನ್ನೂ ಒಂದು ವಿಚಾರ ಹೇಳ್ತೀನಿ. ಅವಳು ತನ್ನ ಮದುವೆ ದಿನ ಸಹ ನಿನ್ನ ನೆನೆಸಿಕೊಂಡಿದ್ಲು. ನಿನ್ ಫ್ರೆಂಡ್ ಹರ್ಷನ ಕಟ್ಕೋಳೋ ಹುಡ್ಗಿ ಪುಣ್ಯ ಮಾಡಿರ್ತಾಳೆ. ನಂಗೆ ಇಷ್ಟವಾಗಿದ್ದ ಕಣೇ..ಈಗಲೂ ಅವನು ಇಷ್ಟ ಎಂದಿದ್ದಳು ಎಂದು ಪವಿತ್ರ ಹೇಳಿದಾಗಲಂತೂ ಹರ್ಷನ ಕಣ್ಣಾಲೆಗಳು ತೇವಗೊಂಡವು. ಮಾತಾಡಲಾಗದೆ ಕಾಲ್ ಡಿಸ್ ಕನೆಕ್ಟ್ ಮಾಡಿದ.

ಋಣಾನುಬಂಧ…ಅವತ್ತು ಸಿಂಧು ಪವಿತ್ರಾಳ ಬಳಿ ಮಾತಾಡಿದಾಗ ಹರ್ಷ ಪವಿತ್ರಳ ಜೊತೆ ಸರಿಯಾಗಿ ಮಾತಾಡಿದ್ದರೆ, ಕನಿಷ್ಟ ಒಮ್ಮೆ ಅವಳನ್ನು ಮೀಟ್ ಆಗಿದ್ದರೆ ಅಥವಾ ಒಂದೇ ಒಂದು ಸಲ ಕಾಲ್ ಮಾಡಿ , ಕಾಲ್ ಪಿಕ್ ಮಾಡಿ ಮಾತಾಡಿದ್ದರೂ ಸಾಕಿತ್ತೇನೋ? ಸಿಂಧು ಬಾಳಸಂಗಾತಿಯಾಗಿ ಸಿಕ್ತಿದ್ಲೇನೋ? ಆದರೆ ಈಗ?
ಅದಕ್ಕೆ ಯಾವುದನ್ನೇ , ಯಾರನ್ನೇ , ಯಾರ ಮಾತನ್ನೇ ಆಗಲಿ ಸಮಧಾನದಿಂದ ಕೇಳಬೇಕು. ಮಾತಾಡಲು ಬಯಸಿದವರತ್ರ ಮಾತಾಡ್ಬೇಕು. ಸ್ನೇಹಿತರನ್ನು ಮಿಸ್ ಮಾಡ್ಕೋ ಬಾರ್ದು. ಇದು ರಿಯಲ್ ಸ್ಟೋರಿ…ನಿಮ್ಮ ಅಭಿಪ್ರಾಯ ತಿಳಿಸಿ.

Share post:

Subscribe

spot_imgspot_img

Popular

More like this
Related

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...