ನಮ್ ಸುತ್ತಮುತ್ತ ಪ್ರಾಣಿ ಪಕ್ಷಿಗಳ ಬಗ್ಗೆ ಪ್ರೀತಿ, ಕಾಳಜಿ ತೋರೋರು ಎಷ್ಟು ಜನ ಇದ್ದಾರೋ ಅಂತೆಯೇ ವಿಕೃತಿ ಮೆರೆಯೋ ಕೆಟ್ಟ ಮನಸ್ಥಿತಿಗಳೂ ಇದ್ದಾರೆ. ಕೆಲವರಿಗೆ ಪ್ರಾಣಿಗಳ ಮೇಲೆ ದೌರ್ಜನ್ಯ ಎಸಗೋದೇ ಕಯಾಲಿ! ಹಾಗೆಯೇ ಬೆಂಗಳೂರಿನಲ್ಲೊಬ್ಬ ಭೂಪ ಸುಖಾ ಸುಮ್ಮನೆ ನಾಯಿ ಮೇಲೆ ಕಲ್ಲೆತ್ತಾಕಿದ್ದ! ಆ ಭೂಪನ ವಿರುದ್ಧ ಇದೀಗ ಎಫ್ ಐ ಆರ್ ದಾಖಲಾಗಿದೆ.
ಹೌದು ಜಾಲಹಳ್ಳಿಯ ಪ್ರಸ್ಟೀಜ್ ಕೆನ್ಸಿಂಗ್ಟನ್ ಅಪಾಟ್ಮೆಂಟ್ ಗೇಟ್ ಬಳಿ ಮಲಗಿದ್ದ ನಾಯಿ ಮೇಲೆ ಕಲ್ಲು ಎತ್ತಿ ಹಾಕಿ ವಿಕೃತಿ ಮೆರೆದ ಪುಣ್ಯಾತ್ಮ ಈಗ ಸಂಕಷ್ಟಕ್ಕೆ ಸಿಲುಕಿದ್ದಾನೆ. ಕಾನೂನು ಹೋರಾಟ ಮಾಡಬೇಕಾದ ಸ್ಥಿತಿಗೆ ಬಂದಿದ್ದಾನೆ.
ಅಪಾರ್ಟ್ಮೆಂಟಿನ ನಿವಾಸಿ ವರುಣ್ ಆರೋಪಿ. ಶುಕ್ರವಾರ ಬೆಳಗ್ಗೆ ವಾಕಿಂಗ್ ಮುಗಿಸಿಕೊಂಡು ಹಿಂತಿರುಗುವಾಗ ನಾಯಿಯೊಂದು ಅಪಾಟ್ಮೆಂಟ್ ಗೇಟ್ ಬಳಿ ಮಲಗಿತ್ತು. ಅಷ್ಟಕ್ಕೇ ಕೋಪಗೊಂಡು ವರುಣ್ ಅದರ ಮೇಲೆ ಕಲ್ಲು ಹಾಕಿದ್ದಾನೆ. ಆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಾಣಿ ದಯಾ ಸಂಘದವರು ಜಾಹಳ್ಳಿ ಠಾಣೆಗೆ ದೂರು ನೀಡಿದ್ದು, ಎಫ್ ಐ ಆರ್ ದಾಖಲಾಗಿದ್ದು, ಸುಮ್ ಸುಮ್ನೆ ನಾಯಿ ಮೇಲೆ ಕಲ್ಲು ಎತ್ತಾಕಿ ಕಂಟಕ ಎದುರಿಸುವಂತಾಗಿದೆ!
ಸುಮ್ ಸುಮ್ನೆ ನಾಯಿ ಮೇಲೆ ಕಲ್ಲೆತ್ತಾಕಿದವನ ವಿರುದ್ಧ ಎಫ್ಐಆರ್!
Date: