2019ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ಏಕದಿನ ವಿಶ್ವಕಪ್ ಬಳಿಕ ಮಾಜಿ ಕ್ಯಾಪ್ಟನ್, ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ತಂಡದಿಂದ ದೂರ ಉಳಿದ ಮೇಲೆ ಖಾಯಂ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಮೂರೂ ಮಾದರಿಯ ಕ್ರಿಕೆಟ್ನಲ್ಲಿ ಸ್ಥಾನ ಪಡೆದವರು ಯುವ ಆಟಗಾರ ರಿಷಭ್ ಪಂತ್.
ಬ್ಯಾಟಿಂಗ್ನಲ್ಲಿ ಪದೇ ಪದೇ ವೈಪಲ್ಯ ಅನುಭವಿಸಿದ್ರೂ ಒಂದಿಷ್ಟು ಅವಕಾಶಗಳನ್ನು ಪಂತ್ಗೆ ಕಲ್ಪಿಸಲಾಗಿದೆ. ನಿನ್ನೆಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲೂ ಪಂತ್ ಆಡುವ 11ರ ಬಳಗದಲ್ಲಿದ್ರು. ಬ್ಯಾಟಿಂಗ್ ಕೂಡ ಮಾಡಿದ್ರು. ಆದರೆ, ವಿಕೆಟ್ ಕೀಪಿಂಗ್ ಮಾಡಿದ್ದು ಮಾತ್ರ ಕೆ.ಎಲ್ ರಾಹುಲ್!
ಬ್ಯಾಟಿಂಗ್ ಮಾಡುವಾಗ ಪ್ಯಾಟ್ ಕುಮಿನ್ಸ್ ಬೌಲಿಂಗ್ನಲ್ಲಿ ಬಲವಾದ ಹೊಡೆತಕ್ಕೆ ಮುಂದಾದಾಗ ಬಾಲ್ ಬ್ಯಾಟ್ಗೆ ವಂಚಿಸಿ ಬ್ಯಾಟಿನ ಮೇಲ್ಭಾಗಕ್ಕೆ ತಗುಲಿ ಹೆಲ್ಮೆಟ್ಗೆ ಬಡಿಯಿತು, ಆ ವೇಳೆ ಪಂತ್ ಗಾಯಗೊಂಡರು, ಬಳಿಕ ಬ್ಯಾಟಿಂಗ್ಗೆ ಇಳಿಯಲಿಲ್ಲ. ಪಂತ್ 28ರನ್ ಮಾಡಿ ಪೆವಿಲಿಯನ್ ಸೇರಿದರು. ಭಾರತ 225ರನ್ ಗಳಿಗೆ ಆಲೌಟ್ ಆಯ್ತು. 256 ರನ್ ಗುರಿಯನ್ನು ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೆ ತಲುಪಿತು.