ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ದಾಖಲೆಗಳ ಸರದಾರ. ರನ್ ಮಷಿನ್ ಕೊಹ್ಲಿ ಕ್ರೀಸ್ನಲ್ಲಿ ಗಟ್ಟಿಯಾಗಿ ನಿಂತ್ರು ಅಂದ್ರೆ ಮುಗೀತು ದಾಖಲೆಗಳು ನಿರ್ಮಾಣ ಆಗುವುದು ಕನ್ಫರ್ಮ್. ಅಂತೆಯೇ ಇಂದು ರಾಜ್ಕೋಟ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಸೆಂಚುರಿ ಸಿಡಿಸಿದರೆ ವಿಶ್ವಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯೊಂದನ್ನು ಸಮಗಟ್ಟಲಿದ್ದಾರೆ.
ಭಾರತದಲ್ಲಿ ಕ್ರಿಕೆಟ್ ದೇವರು ಸಚಿನ್ 20 ಶತಕ ಮಾಡಿದ್ದರು. ವಿರಾಟ್ ಕೊಹ್ಲಿ ಈಗಾಗಲೇ 19 ಶತಕ ಬಾರಿಸಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ಶತಕ ಬಾರಿಸಿ ಈ ದಾಖಲೆ ಮಾಡುತ್ತಾರೆಂಬ ನಿರೀಕ್ಷೆಯಿತ್ತು. ಆದರೆ ಅದು ಹುಸಿಯಾಯಿತು. ಮೊದಲ ಪಂದ್ಯದಲ್ಲಿ ಸೋಲನುಭವಿಸಿದ್ದರಿಂದ ಭಾರತ 3 ಪಂದ್ಯಗಳ ಸರಣಿಯ ಇಂದಿನ ಎರಡನೇ ಪಂದ್ಯವನ್ನು ಗೆಲ್ಲಲೇ ಬೇಕಾಗಿದೆ. ಈ ಪಂದ್ಯದಲ್ಲಿ ವಿರಾಟ್ ವೈಭವ ಮೆರೆದು ಸಚಿನ್ ದಾಖಲೆ ಸಮಗಟ್ಟಲಿದ್ದಾರೆ ಎಂಬು ನಿರೀಕ್ಷೆ ದುಪಟ್ಟಾಗಿದೆ.