ಇದು ಇಡೀ ದೇಶವನ್ನೇ ಬೆರಗುಗೊಳಿಸುವ ಶಾಲೆ..! ನೀವು ನೋಡಿದ್ದೀರಾ?

Date:

ಬಿಹಾರ ರಾಜ್ಯದಲ್ಲಿರೋ ಬೋಧ ಗಯಾ ಸಮೀಪ ಸುಜಾತ ಅನ್ನೋ ಪುಟ್ಟ ಹಳ್ಳಿಯಿದೆ. ಅಲ್ಲಿ ದೇಶವನ್ನೇ ಬೆರಗುಗೊಳಿಸೋ ಶಾಲೆಯಿದೆ. ನಿರಂಜನ ಪಬ್ಲಿಕ್ ವೆಲ್ಫೇರ್ ಸ್ಕೂಲ್. ಈ ಶಾಲೆಯಲ್ಲಿ ಓದೋ ಮಕ್ಕಳಿಗೆ ಕಲಾದೇವಿಯ ಮಡಿಲಲ್ಲಿ ಅಕ್ಷರ ಕಲಿಯೋ ಅವಕಾಶ ಸಿಕ್ಕಿದೆ. ಕಲೆಗೆ ಹಾಗೂ ಕುಂಚಕಾರರಿಗೆ ಪ್ರಸಿದ್ದಿಯಾಗಿರೋ ಜಪಾನಿಯರು ಹಾಗೂ ಭಾರತೀಯರ ಕಲಾಕಾರರ ಕೈಯಲ್ಲಿ ಶಾಲೆಯ ಗೋಡೆಗಳು ಸುಂದರವಾಗಿ ಅಲಂಕೃತಗೊಂಡಿವೆ.
ಬಡರಾಜ್ಯದಲ್ಲಿ ಮಕ್ಕಳನ್ನ ಶಾಲೆಗಳತ್ತ ಸೆಳೆಯೋದಕ್ಕೆ ಹರಸಾಹಸ ಮಾಡಬೇಕಾಗುತ್ತೆ. ಮಕ್ಕಳು ಕೆಲಸಕ್ಕೆ ಹೋದರೆ ಒಂದಿಷ್ಟು ಹಣ ಬರುತ್ತೆ ಅನ್ನೋ ಯೋಚನೆಯಲ್ಲಿರೋ ಪೋಷಕರ ಮನ ಒಲಿಸೋ ಜೊತೆಯಲ್ಲಿ ಮಕ್ಕಳಿಗೆ ಶಾಲೆಯಲ್ಲಿ ಏನೋ ವಿಶೇಷತೆ ಇದೆ ಅನ್ನಿಸೋ ಥರ ಮಾಡಬೇಕು. ಇದಕ್ಕಾಗಿ ಬಿಹಾರದ ನಿರಂಜನ ಪಬ್ಲಿಕ್ ವೆಲ್ಫೇರ್ ಶಾಲೆ ಶಿಕ್ಷಕರು ಹಾಗೂ ಎನ್ಜಿಓ ನವರು ಸೇರಿ, ಈ ಕಲಾದೇವಿಯನ್ನ ಆಸರೆಯಾಗಿ ಮಾಡಿಕೊಂಡಿದ್ದಾರೆ. ಪ್ರತಿಗೋಡೆಗಳು ಬಣ್ಣಗಳಿಂದ ತುಂಬಿವೆ. ಮಕ್ಕಳಿಗಂತೂ ಶಾಲೆಯ ಕೊಠಡಿಗೆ ಬಂದ್ರೆ ಈ ಬಣ್ಣದ ಲೋಕ ಬೇರಯದ್ದೇ ಪ್ರಪಂಚಕ್ಕೆ ಕರೆದೊಯ್ಯುತ್ತದೆ.


2010ರಲ್ಲಿ ಆರಂಭವಾದ ಈ ಶಾಲೆ 400 ಮಕ್ಕಳಿಂದ ಪ್ರಾರಂಭವಾಯ್ತು. ಅಲ್ಲಿಯ ಶಿಕ್ಷಕರು , ಕೆಲವು ಎನ್ ಜಿ ಓ ಹಾಗೂ ಸ್ವಯಂ ಸೇವಕರಿಂದ ಈ ಶಾಲೆ 8 ವರ್ಷ ಯಶಸ್ವಿಯಾಗಿ ಪೂರೈಸಿದೆ. ಮಕ್ಕಳಿಗೆ ಕೇವಲ ಪಾಠ ಮಾತ್ರ ಸಾಲದು ಪುಸ್ತಕದ ಪಾಠವನ್ನು ಹೊರತು ಪಡಿಸಿ ಅವ್ರನ್ನ ಬೆಳೆಸಬೇಕು ಅನ್ನೋ ಉದ್ದೇಶದಿಂದ ಪ್ರತಿ ವರ್ಷವೂ ಆರ್ಟ್ ಫೆಸ್ಟಿವಲ್ ಆಯೋಜಿಸಲಾಗುತ್ತಿದೆ. ಈ ಕಲಾ ಹಬ್ಬದಲ್ಲಿ ಇಂಡಿಯಾ ಹಾಗೂ ಜಪಾನಿನಿ ಪ್ರಸಿದ್ದ ಹಾಗೂ ಆಸಕ್ತ ಕಲಾವಿದರು ಶಾಲೆಯ ಗೋಡೆಗಳ ಮೇಲೆ ಚಿತ್ತಾರಗಳನ್ನ ಮೂಡಿಸುತ್ತಾರೆ.
ಶಾಲೆಯ ಅಕ್ಕ ಪಕ್ಕದಲ್ಲಿರೋ ವಸ್ತುಗಳನ್ನ ಬಳಸಿಕೊಂಡು ಇಡೀ ಶಾಲೆಯ ಒಳಾಂಗಣವನ್ನ ಕಲರ್ ಫುಲ್ ಆಗಿ ಮಾಡುತ್ತಾರೆ. ಇನ್ನೂ ವಿಶೇಷ ಅಂದ್ರೆ ಮಕ್ಕಳನ್ನೂ ಕೂಡ ಇದರಲ್ಲಿ ಬಳಸಿಕೊಳ್ಳಲಾಗುತ್ತದೆ. ಮಕ್ಕಳು ತಾವೇ ಮಾಡಿದ ಚಿತ್ತಾರವನ್ನ ಎಂದಿಗೂ ಹಾಳು ಮಾಡಲ್ಲ. ಇಂತಹ ಕೆಲಸಗಳು ಮಕ್ಕಳಿಗೆ ಇಷ್ಟವಾಗಿ ಹೆಚ್ಚಾಗಿ ಶಾಲೆ ಕಡೆಗೆ ಒಲವು ತೋರುತ್ತಾರೆ ಅನ್ನೋದು ಅಲ್ಲಿಯ ಶಿಕ್ಷಕರ ಉದ್ದೇಶ.


ನಿರಂಜನ ಪಬ್ಲಿಕ್ ವೆಲ್ಫೇರ್ ಶಾಲೆಯಲ್ಲಿ ಇಡೀ ಶಾಲಾ ಒಳಾಂಗಣದ ಗೋಡೆಗಳ ಮೇಲೆ ಬಣ್ಣ ಬಣ್ಣದ ಚಿತ್ತಾರ ಮೂಡಿಸೋದಕ್ಕೆ ಮತ್ತೊಂದು ಮುಖ್ಯ ಕಾರಣ ಬಿಹಾರದ ಪರಂಪರೆ ಸಾರೋ ಉದ್ದೇಶ. ಕಾಲ ಬದಲಾದಂತೆ ಜೀವನ ಶೈಲಿಗಳು ಕೂಡ ಬದಲಾಗುತ್ತವೆ. ಇದರಿಂದ ಈಗಿನ ಯುವಜನರು ಹಿಂದಿನ ಪರಂಪರೆ ಹಾಗೂ ಸಂಸ್ಕೃತಿಯನ್ನ ಮರೆತು ಬಿಡ್ತಿದ್ದಾರೆ. ಅದ್ರಿಂದ ಈಗಿನ ಮಕ್ಕಳಿಗೆ ಬಿಹಾರದ ಪರಂಪರೆಯನ್ನ ತಿಳಿಸೋ ಹಿನ್ನಲೆಯಲ್ಲಿ ಅನೇಕ ಗೋಡೆಗಳ ಮೇಲೆ ಬಿಹಾರ ಸಂಸ್ಕೃತಿಯ ಚಿತ್ತಾರವನ್ನ ಮೂಡಿಸಲಾಗಿದೆ.
ಈ ಶಾಲೆಯಲ್ಲಿ ಅಭ್ಯಾಸ ಮಾಡೋ ವಿದ್ಯಾರ್ಥಿಗಳು ಕೇವಲ ಪುಸ್ತಕದಲ್ಲಿರೋ ವಿದ್ಯೆ ಮಾತ್ರವಲ್ಲದೆ ತಮ್ಮ ಸಂಸ್ಕೃತಿಯನ್ನು ಕೂಡ ಕಲಿಯೋದಕ್ಕೆ ಸಾಧ್ಯವಾಗ್ತಿದೆ. ಶಾಲೆಗಳಿರೋದು ಕೇವಲ ವಿದ್ಯಾಭ್ಯಾಸಕ್ಕೆ ಮಾತ್ರವಲ್ಲ ಪರಿಶ್ರಮ ಹಾಗೂ ಆಸಕ್ತಿ ಇದ್ರೆ ಮಕ್ಕಳಿಗೆ ಎಲ್ಲಾ ರೀತಿ ವಿದ್ಯೆಯನ್ನ ಕಲಿಸಬಹುದು ಅನ್ನೋದಕ್ಕೆ ಈ ಶಾಲೆಯೆ ಉದಾಹರಣೆ.

Share post:

Subscribe

spot_imgspot_img

Popular

More like this
Related

ನಿಮ್ಮದು ಲೂಟಿ ಮಾಡುವ ಚಪಲ, ನನ್ನದು ಜನರ ಜೊತೆ ನಿಲ್ಲುವ ಚಪಲ: ಹೆಚ್.ಡಿ.ಕುಮಾರಸ್ವಾಮಿ ಟಾಂಗ್

ನಿಮ್ಮದು ಲೂಟಿ ಮಾಡುವ ಚಪಲ, ನನ್ನದು ಜನರ ಜೊತೆ ನಿಲ್ಲುವ ಚಪಲ:...

ಒಕ್ಕೂಟ ವ್ಯವಸ್ಥೆ ಹಾಳು ಮಾಡುವ ಕುತಂತ್ರ ನಡೆಸಿದ ಸಿಎಂ: ಬಿ.ವೈ.ವಿಜಯೇಂದ್ರ ವಾಗ್ದಾಳಿ

ಒಕ್ಕೂಟ ವ್ಯವಸ್ಥೆ ಹಾಳು ಮಾಡುವ ಕುತಂತ್ರ ನಡೆಸಿದ ಸಿಎಂ: ಬಿ.ವೈ.ವಿಜಯೇಂದ್ರ ವಾಗ್ದಾಳಿ ಬೆಳಗಾವಿ:...

ಮತ್ತೊಮ್ಮೆ ಹದಗೆಟ್ಟ ಬೆಂಗಳೂರಿನ ಗಾಳಿ: ಏರ್ ಕ್ವಾಲಿಟಿ ಇನ್ನೂ ಅನಾರೋಗ್ಯಕರ ಹಂತದಲ್ಲೇ

ಮತ್ತೊಮ್ಮೆ ಹದಗೆಟ್ಟ ಬೆಂಗಳೂರಿನ ಗಾಳಿ: ಏರ್ ಕ್ವಾಲಿಟಿ ಇನ್ನೂ ಅನಾರೋಗ್ಯಕರ ಹಂತದಲ್ಲೇ ಬೆಂಗಳೂರು:...

ಪತಿ-ಪತ್ನಿ ಕಲಹ: ನಾಲ್ಕು ವರ್ಷದ ಮಗಳೊಂದಿಗೆ ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆ

ಪತಿ-ಪತ್ನಿ ಕಲಹ: ನಾಲ್ಕು ವರ್ಷದ ಮಗಳೊಂದಿಗೆ ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆ ಬೆಂಗಳೂರು:...