ಗಿಡ- ಮರಕ್ಕೆ ನೀರು ಹಾಕಿ ಬೆಳೆಸುತ್ತಾರೆ. ಆದ್ರೆ, ಡ್ರಿಪ್ ಹಾಕಿ ಬೆಳೆಸುವುದು, ಉಳಿಸಿಕೊಳ್ಳೋದನ್ನು ಎಲ್ಲಾದರೂ ಕೇಳಿದ್ದೀರ? ನೋಡಿದ್ದೀರ?
ಮರಕ್ಕೆ ಡ್ರಿಪ್ ಹಾಕೋದು ಅಂದಾಗ ಇದೇನು? ಅಂತ ಆಶ್ಚರ್ಯ ಪಡೋದು ಸಹಜ . ಆದರೆ, ಇಲ್ಲೊಂದು ಮರಕ್ಕೆ ಡ್ರಿಪ್ಪೇ ನೀರು…!
ತೆಲಂಗಾಣದ ಮೆಹಬೂಬ್ ನಗರ ಜಿಲ್ಲೆಯ ಪಿಲ್ಲಾಮರ್ರಿಯಲ್ಲಿ ಸುಮಾರು 700 ವರ್ಷದ ಆಲದ ಮರವೊಂದಿದೆ. ಇದಕ್ಕೆ ನೀರಿನ ಬದಲು ಗ್ಲೋಕೋಸ್ ಹಾಕ್ತಾರೆ.
ತುಂಬಾ ಹಳೆಯದಾದ ಈ ಮರಕ್ಕೆ ಒಮ್ಮೆ ಗೆದ್ದಲು ತಾಕಿತ್ತು. ಇದ್ರಿಂದ ಮರ ಟೊಳ್ಳಾಗಲು ಶುರುವಾಗಿತ್ತು. ಟೊಳ್ಳಾಗಿ ತುಂಡಾಗಿ ರೆಂಬೆ ಕೊಂಬೆಗಳು ತುಂಡಾಗಿ ಬೀಳಲು ಆರಂಭಿಸಿವೆ.
ಆದ್ದರಿಂದ ಇದನ್ನು ತಪ್ಪಿಸಲು , ಗೆದ್ದಲು ನಿಯಂತ್ರಣಕ್ಕೆ ಇಂಜೆಕ್ಷನ್ ಡೆಲ್ಯೂಟೆಡ್ ಕೆಮಿಕಲ್ ನೀಡಲಾಗುತ್ತಿದೆ. ಗೆದ್ದಿಲು ಕಮ್ಮಿಯಾಗಿ ಮರ ಚೆನ್ನಾಗಿ ಬೆಳೆಯುತ್ತಿದೆ.
ಸುಮಾರು 3 ಎಕರೆ ಹರಡಿರೋ ಈ ಮರಕ್ಕೆ ಸಲೈನ್ ಬಾಟೆಲ್ ಮೂಲಕ ಪ್ರತಿನಿತ್ಯ ಕೆಮಿಕಲ್ ಇಂಡೆಕ್ಟ್ ಮಾಡಲಾಗುತ್ತಿದೆ.
ಹಿಂದೆ ಈ ಮರವನ್ನು ಪ್ರವಾಸಿಗರ ವೀರಕ್ಷಣೆಗೆ ಬಿಡಲಾಗಿತ್ತು. 2017 ರ ನಂತರ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಇಲ್ಲ. ವೀಕ್ಷಣೆ ಸ್ಥಗಿತಗೊಳಿಸಿದ್ದಾರೆ.