ಬಿಗ್ 3 ಖ್ಯಾತಿಯ ಜಯಪ್ರಕಾಶ್ ಶೆಟ್ಟಿ ಹಿರಿಮೆಗೆ ಮತ್ತೊಂದು ಗರಿ..!

Date:

ಜಯಪ್ರಕಾಶ್ ಶೆಟ್ಟಿ …ಕನ್ನಡ ಪತ್ರಿಕೋದ್ಯಮದ ಹೆಸರಾಂತ ಹೆಸರು.‌ ಕಂಚಿನ ಕಂಠದ ನಿರೂಪಕ..ಸದ್ಯ ಸುವರ್ಣ – 24*7 ಸುದ್ದಿವಾಹಿನಿಯಲ್ಲಿ ಪ್ರಸಕ್ತ ವಿದ್ಯಮಾನಗಳ ವಿಭಾಗದ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿರುವ ಕೆಚ್ಚಿದೆಯ ಪತ್ರಕರ್ತ.‌ಕರ್ನಾಟಕದ ಮನೆ-‌ಮನೆಗಳಿಗೂ ಪರಿಚಿತರಾಗಿರು ಜಯಪ್ರಕಾಶ್ ಶೆಟ್ಟಿಯವರು…ಜೆಪಿ ಎಂದೇ ಖ್ಯಾತರು. 

ಬಿಗ್ 3 ಎಂಬ ಕಾರ್ಯಕ್ರಮದ ‌ಮೂಲಕ ಜನಪರ ಧ್ವನಿಯಾಗಿ , ಭ್ರಷ್ಟರಿಗೆ ನಡುಕ ಹುಟ್ಟಿಸುವ ಶೆಟ್ರು ಸ್ಕ್ರೀನ್ ನಲ್ಲಿದ್ದಾರೆ ಎಂದರೆ ಟಿವಿ ರಿಮೋರ್ಟ್ ಗೆ ಕೆಲಸ ಇರಲ್ಲ! ಅಷ್ಟೊಂದು ಇಷ್ಟಪಟ್ಟು ಜನ ಜೆಪಿ ಅವರ ವಾರ್ತಾವಾಚನ, ಕಾರ್ಯಕ್ರಮಗಳನ್ನು ನೋಡುತ್ತಾರೆ.
ಕನ್ನಡ ದೃಶ್ಯ ಮಾಧ್ಯಮ ಲೋಕದ ಈ ದಿಗ್ಗಜ ಪತ್ರಕರ್ತರ ಹಿರಿಮೆಗೆ ಮತ್ತೊಂದು ಗರಿ ಅಲಂಕರಿಸಿದೆ. ಬೆಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಕೊಡಮಾಡುವ ಪ್ರತಿಷ್ಠಿತ ‘ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ – 2019’ ಜಯಪ್ರಕಾಶ್ ಶೆಟ್ಟಿಯವರನ್ನು ಹರಸಿ ಬಂದಿದೆ.

ಮುಖ್ಯಮಂತ್ರಿ ಯಡಿಯೂರಪ್ಪ, ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಶೆಟ್ರು ಇಂದು ಗೌರವ ಸ್ವೀಕರಿಸಿದ್ರು.
ಇನ್ನು ಜಯಪ್ರಕಾಶ್ ಶೆಟ್ಟಿಯವರಿಗೆ ನಿಮ್ಮ ದಿ ನ್ಯೂ ಇಂಡಿಯನ್ ಟೈಮ್ಸ್ ವೆಬ್ ಪೋರ್ಟಲ್‌ ಕೊಡ ಮಾಡುವ ಟಿಎನ್ ಐಟಿ ಮೀಡಿಯಾ ಅವಾರ್ಡ್ 2018 – 2019 ಸಾಲಿನಲ್ಲಿ ಆಲ್ ರೌಂಡರ್ ಇನ್ ಎಲೆಕ್ಟ್ರಾನಿಕ್ ಮೀಡಿಯಾ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಹೀಗೆ ಸಾಕಷ್ಟು ಪ್ರಶಸ್ತಿಗೆ ಭಾಜನರಾಗಿರುವ ಶೆಟ್ಟರ ಬತ್ತಳಿಕೆಗೆ ಅರ್ಹವಾಗಿ ಮತ್ತೊಂದು ಪ್ರಶಸ್ತಿ ಸಂದಿದಂತಾಗಿದೆ.

ವರ್ಷದ ವ್ಯಕ್ತಿ, ಯುಗದ ಸಾಧಕ : ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರಿಗೆ ‘ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ’ ಮತ್ತು ಪ್ರೊ.ವೆಂಕಟ ಸುಬ್ಬಯ್ಯ ಅವರಿಗೆ ‘ಯುಗದ ಸಾಧಕ’ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

ಜಯಪ್ರಕಾಶ್ ಶೆಟ್ಟಿ ಅವರಲ್ಲದೆ, ಎಂ.ಸಿದ್ದರಾಜು, ಕೆ.ಸುನೀಲ್‌ ಪ್ರಸಾದ್‌, ಕೆ.ಎಚ್‌.ಸಾವಿತ್ರಿ, ಬಿ.ವಿ.ನಾಗರಾಜು, ರವೀಂದ್ರ ಜಿ.ಭಟ್‌, ಕೆ.ಎನ್‌.ಚನ್ನೇಗೌಡ, ಹರಿಶ್ಚಂದ್ರ ಭಟ್‌ ಬಿ., ಅಬ್ದುಲ್‌ ಹಮೀದ್‌ ಎಂ., ಇಮ್ರಾನ್‌ ಖುರೇಶಿ, ಜಿ.ಕೆ.ಸತ್ಯ, ಲಕ್ಷ್ಮಣ ಕೊಡಸೆ, ಜೋಸೆಫ್‌ ಹೂವರ್‌, ಎನ್‌.ಎಸ್‌.ಶಂಕರ್‌, ಬಿ.ಕೆ.ರವಿ, ರು.ಬಸಪ್ಪ ಅವರನ್ನು ಪ್ರೆಸ್‌ ಕ್ಲಬ್‌ ವಾರ್ಷಿಕ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

Share post:

Subscribe

spot_imgspot_img

Popular

More like this
Related

ಪರಪ್ಪನ ಅಗ್ರಹಾರ ಜೈಲಲ್ಲಿ ಬಿಂದಾಸ್ ಲೈಫ್: ಇಬ್ಬರು ಅಧಿಕಾರಿಗಳ ತಲೆದಂಡ

ಪರಪ್ಪನ ಅಗ್ರಹಾರ ಜೈಲಲ್ಲಿ ಬಿಂದಾಸ್ ಲೈಫ್: ಇಬ್ಬರು ಅಧಿಕಾರಿಗಳ ತಲೆದಂಡ ಬೆಂಗಳೂರು: ಪರಪ್ಪನ...

ಜೈಲಿನ ರಾಜಾತಿಥ್ಯದ ವಿಡಿಯೋ ರಿಲೀಸ್: ದರ್ಶನ್ ಆಪ್ತ ಧನ್ವೀರ್ ಸಿಸಿಬಿ ವಶಕ್ಕೆ!

ಜೈಲಿನ ರಾಜಾತಿಥ್ಯದ ವಿಡಿಯೋ ರಿಲೀಸ್: ದರ್ಶನ್ ಆಪ್ತ ಧನ್ವೀರ್ ಸಿಸಿಬಿ ವಶಕ್ಕೆ! ರೇಣುಕಾಸ್ವಾಮಿ...

ಡಿ ಗ್ಯಾಂಗ್​ ದೋಷಾರೋಪ ನಿರಾಕರಣೆ: ಇಂದು ಸಾಕ್ಷ್ಯ ವಿಚಾರಣೆಗೆ ದಿನಾಂಕ ನಿಗದಿಪಡಿಸುವ ಸಾಧ್ಯತೆ!

ಡಿ ಗ್ಯಾಂಗ್​ ದೋಷಾರೋಪ ನಿರಾಕರಣೆ: ಇಂದು ಸಾಕ್ಷ್ಯ ವಿಚಾರಣೆಗೆ ದಿನಾಂಕ ನಿಗದಿಪಡಿಸುವ...

ಯಾವಾಗಲೂ ಯಂಗ್ ಆಗಿ ಕಾಣ್ಬೇಕಾ!? ಹಾಗಿದ್ರೆ ಈ ಆಹಾರ ತಪ್ಪದೇ ಸೇವಿಸಿ!

ಯಾವಾಗಲೂ ಯಂಗ್ ಆಗಿ ಕಾಣ್ಬೇಕಾ!? ಹಾಗಿದ್ರೆ ಈ ಆಹಾರ ತಪ್ಪದೇ ಸೇವಿಸಿ! ಜನರು...