IBM ಬಿಟ್ಟು ಬ್ರಶ್ ಹಿಡಿದ ವಿಲಾಸ್​ ನಾಯಕ್​ ಲೈಫ್ ಕಹಾನಿ..!

Date:

ವಿಲಾಸ್ ನಾಯಕ್. ಈ ಹೆಸರು ಕೇಳಿದಾಕ್ಷಣ ಕಣ್ಣಿಗೆ ಬರುವುದು ಅವರು ರಚಿಸುವ ವೇಗದ ಚಿತ್ರಗಳು. ಕಣ್ಮುಚ್ಚಿ ಕಣ್ಣು ಬಿಡುವುದರೊಳಗಾಗಿ ವೇದಿಕೆಯಲ್ಲಿರುವ ಗಣ್ಯರ ಚಿತ್ರಗಳನ್ನು ಬಿಡಿಸು ಅವರೊಳಗಿನ ಕಲಾವಿದ..! ಯಾವುದೇ ಫೈನ್ ಆರ್ಟ್ಸ್ ತರಬೇತಿ ಪಡೆಯದ ವಿಲಾಸ್ ನಾಯಕ್ ಪ್ರಪಂಚದ ಸಾಕಷ್ಟು ದೇಶಗಳಲ್ಲಿ ತಮ್ಮ ಕಲಾ ಪ್ರತಿಭೆ ಅನಾವರಣಗೊಳಿಸಿದ್ದಾರೆ.
ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಚಿತ್ರ ಬಿಡಿಸಲು ದಿನಗಟ್ಟಲೆ ತೆಗೆದುಕೊಳ್ಳುತ್ತಾರೆ. ಆದರೆ, ವಿಲಾಸ್ ನಾಯಕ್ ಅವರದು ಬಣ್ಣಗಳೊಂದಿಗೆ ನಿಮಿಷಗಳ ಆಟ. ಭಾರತದ ಕೆಲವೇ ಕೆಲವು ‘ವೇಗದ ಚಿತ್ರಕಾರರಲ್ಲಿ ಇವರು ಒಬ್ಬರು. ವೇಗವಾಗಿ ಚಿತ್ರ ಬಿಡಿಸುವುದು ಬಹಳ ಕಷ್ಟ. ಕೆಲವೊಮ್ಮೆ 2 ನಿಮಿಷದಲ್ಲಿ ಚಿತ್ರ ಬಿಡಿಸಬೇಕಾಗಿರುತ್ತದೆ. ಅದನ್ನೂ ವಿಲಾಸ್ ನಾಯಕ್ ಸಮರ್ಥವಾಗಿ ನಿಭಾಯಿಸಿದ್ದಾರೆ. ಕೆಲವೊಮ್ಮೆ ಗಾಯಕರು ಹಾಡನ್ನು ಹಾಡುತ್ತಿದ್ದರೆ ಆ ಹಾಡು ಮುಗಿಯುವುದರೊಳಗಾಗಿ ಚಿತ್ರ ಬಿಡಿಸಿದ್ದಾರೆ. ಅವರಿಗೆ ಇಷ್ಟವಾಗುವ ಹಾಗೇ ಚಿತ್ರಗಳನ್ನು ಬರೆದುಕೊಟ್ಟ ಖ್ಯಾತಿ ವಿಲಾಸ್ ನಾಯಕ್ ಅವರದು.
ಸುಮಾರು 3 ವರ್ಷದವನಿದ್ದಾಗಿನಿಂದಲೆ ಬ್ರೆಶ್ ಎತ್ತಿಕೊಂಡ ವಿಲಾಸ್ ನಾಯಕ್ ಇಲ್ಲಿಯವರೆಗೂ ಹಿಂತಿರುಗಿ ನೋಡೆ ಇಲ್ಲ. ಕಲೆ, ಒಂದು ರೀತಿಯಲ್ಲಿ ಚಿಕ್ಕ ವಯಸ್ಸಿನಿಂದ ಬಂದ ಬಳುವಳಿ. ಯಾವುದೇ ಫೈನ್ ಆರ್ಟ್ಸ್ ಶಾಲೆಯಿಂದ ತರಬೇತಿ ಪಡೆಯದೆ ವಿಲಾಸ್ ನಾಯಕ್ ಈ ಮಟ್ಟಕ್ಕೇರಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬಿಎ ಪದವಿಯಲ್ಲಿ RANK ಪಡೆದ ಇವರು, ಮೈಸೂರು ವಿವಿಯಿಂದ
ಆರಂಭದಲ್ಲಿ ಜೀವನ ಭದ್ರತೆಗಾಗಿ ಐಬಿಎಂನಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ನಿರ್ವಹಿಸಿದರು. ಐದು ವರ್ಷಗಳ ಐಬಿಎಂನಲ್ಲಿ ಕೆಲಸ ಮಾಡುತ್ತಲೇ ಕುಂಚ ಗಳೊಂದಿಗಿನ ಸಂಬಂಧವನ್ನು ಮುಂದುವರೆಸುತ್ತಿದ್ದರು. ಆದರೆ ಒಂದು ಹಂತದಲ್ಲಿ ವೃತ್ತಿಗೆ ತಿಲಾಂಜಲಿ ನೀಡಿ ಸಂಪೂರ್ಣ ಕಲೆಗೆ ಸೀಮಿತವಾಗಿಬಿಟ್ಟರು. ಸಾವಿರಾರು ರೂಪಾಯಿಯ ಸಂಬಳದ ಕೆಲಸ ಬಿಟ್ಟು ಐಬಿಎಂನಿಂದ ಹೊರಬಂದ ವಿಲಾಸ್ ನಾಯಕ್ಗೆ ಬ್ರಶ್ ಕೈಹಿಡಿಯಿತು.

ಬ್ರಶ್ ಹಿಡಿದ ಪರಿಣಾಮ ಇಂದು ಜಗತ್ತಿನ ವಿವಿಧ ದೇಶಗಳಲ್ಲಿ ತಮ್ಮ ಚಿತ್ರಕಲೆಯನ್ನು ಅನಾವರಣಗೊಳಿಸಿದ್ದಾರೆ. ಅನೇಕ ಖಾಸಗಿ ವಾಹಿನಿಗಳ ರಿಯಾಲಿಟಿ ಶೋ, ವಿಲಾಸ್ ಅವರನ್ನು ವೇದಿಕೆಗೆ ಪರಿಚಯಿಸಿದ್ದು, ಅಲ್ಲಿಂದ ಇಲ್ಲಿಯವರಗೂ ಕನ್ನಡ, ಹಿಂದಿ, ಬೆಂಗಾಲಿ, ತೆಲುಗು, ಹಿಂದಿ, ಇಂಗ್ಲೀಷ್ನ ಖಾಸಗಿ ಚಾನೆಲ್ಗಳಲ್ಲಿ ಪ್ರದರ್ಶನ ನೀಡಿದ್ದಾರೆ. ವಿಲಾಸ್ ಅವರ ಚಿತ್ರಕಲೆಯ ವಿಶೇಷವೆಂದರೆ ಕೇವಲ ಎರಡು ಮೂರು ನಿಮಿಷಗಳಲ್ಲಿ ಚಿತ್ರ ಬಿಡಿಸುವುದು.


ಡಾ. ಎಪಿಜೆ ಅಬ್ದುಲ್ ಕಲಾಂ, ಸಚಿನ್ ತೆಂಡೂಲ್ಕರ್, ಫುಟ್ಬಾಲ್ ದಂತಕಥೆ ಪೀಲೆ ಅವರ ಚಿತ್ರಗಳನ್ನು ಅವರ ಮುಂದೆಯೇ ಅತಿ ವೇಗವಾಗಿ ಚಿತ್ರಿಸಿ ಅವರುಗಳಿಂದ ಮೆಚ್ಚುಗೆ ಗಳಿಸಿದ್ದಾರೆ. ಅಷ್ಟೇ ಅಲ್ಲದೆ ಬಾಲಿವುಡ್ ಬಾದ್ಷಾ ಶಾರೂಕ್ ಖಾನ್ ಆಯೋಜಿಸಿದ್ದ ಇಂಡಿಯಾ ಗಾಟ್ ಟ್ಯಾಲೆಂಟ್ ಎಂಬ ಕಾರ್ಯಕ್ರಮದಲ್ಲಿ ಕಿಂಗ್ ಖಾನ್ ಅವರಿಂದ ಶಹಬ್ಬಾಸ್ ಎನಿಸಿಕೊಂಡಿದ್ದಾರೆ.


ವಿಲಾಸ್ ನಾಯಕ್ ಒಂದು ರೀತಿ ಸಮಾಜಮುಖಿ. ಚಿತ್ರಗಳನ್ನು ರಚಿಸಿ ಅವುಗಳನ್ನು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಸಮಾಜದಲ್ಲಿ ನೊಂದವರಿಗಾಗಿ ನೀಡಿದ್ದಾರೆ. ಉತ್ತರಾಖಂಡ್ ಪ್ರವಾಹಕ್ಕಾಗಿ ಕೇವಲ ಎರಡೂವರೆ ನಿಮಿಷದಲ್ಲಿ ಚಿತ್ರ ಬಿಡಿಸಿ ಅದನ್ನು ಮಾರಾಟ ಮಾಡಿದ್ದಾರೆ. ಸುಮಾರು 20 ಮಿಲಿಯನ್ ಅಮೆರಿಕನ್ ಡಾಲರ್ನಷ್ಟು ಹಣ ಇವರ ಚಿತ್ರಕಲೆಗಳಿಂದ ಸಂಗ್ರಹಿತವಾಗಿ ಸಮಾಜ ಸೇವೆಗೆ ಬಳಕೆಯಾಗಿದೆ. ಈ ರೀತಿ ತಮ್ಮ ಕಲೆಯ ಮೂಲಕ ಸಮಾಜದ ವಿವಿಧ ಸಮಸ್ಯೆಗಳಿಗೆ ವಿನೂತನ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ.
ವಿಲಾಸ್ ನಾಯಕ್ ಎಂದರೆ ವೇಗವಾಗಿ ಚಿತ್ರ ಬಿಡಿಸುವ ಕಲಾವಿದ ಅಷ್ಟೇ ಅಲ್ಲ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಒಬ್ಬ ಕಲಾವಿದ ಎನ್ನುಂತಾಗಬೇಕು ಅನ್ನೋದು ಅವರ ಮನದಾಳದ ಮಾತು. ಇದು ಪ್ರತಿಯೊಬ್ಬರಿಗೂ ಸ್ಫೂರ್ತಿ.

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....