ಪತ್ರಿಕೋದ್ಯಮಕ್ಕೆ ಗುಡ್​ ಬೈ ಹೇಳಿ ಬಡವರಿಗಾಗಿ ರೊಟ್ಟಿ ಬ್ಯಾಂಕ್ ತೆರೆದ ಪಾಟ್ಕರ್..!

Date:

ಇವರ ಹೆಸರು ತಾರಾ ಪಾಟ್ಕರ್ . ಉತ್ತರ ಪ್ರದೇಶದವರು. ಮೂಲತಃ ಇವರು ಪತ್ರಿಕೋದ್ಯಮಿ, 2014ರಲ್ಲಿ ಪತ್ರಿಕೋದ್ಯಮಕ್ಕೆ ಗುಡ್ ಬೈ ಹೇಳಿ ಬಡವರಿಗಾಗಿ ರೊಟ್ಟಿ ಬ್ಯಾಂಕ್ ಒಂದನ್ನು ಆರಂಭಿಸಿದ್ಧಾರೆ.
ಇವರು, ಉತ್ತರ ಪ್ರದೇಶದಲ್ಲಿ ಬರದಿಂದ ಕಂಗೆಟ್ಟಿರುವ ಬುಂದೇಲ್ಖಂಡದ ಮಹೋಬಾ ಜಿಲ್ಲೆಯ ಬಡವರಿಗೆ, ಅನಾಥರಿಗೆ, ಮನೆಮಠ ಇಲ್ಲದೇ ಬೀದಿಯಲ್ಲಿ ಆಶ್ರಯ ಪಡೆದಿರುವವರಿಗೆ ಉಚಿತವಾಗಿ ಆಹಾರ ಪೂರೈಸುವ ಕಾಯಕ ಮಾಡಿಕೊಂಡು ಬರುತ್ತಿದ್ದಾರೆ.
ಬಡವರ ಬಗ್ಗೆ ಇವರಿಗೆ ಕಾಳಜಿ ಜಾಸ್ತಿ. ತಾರಾ ಪಾಟ್ಕರ್ ಮತ್ತು ಇತರ ಸ್ವಯಂ ಸೇವಕರು ಪ್ರತಿನಿತ್ಯ ಮನೆ ಮನೆಗೆ ಹೋಗಿ ತರಕಾರಿ ಮತ್ತು ರೊಟ್ಟಿಯನ್ನು ಸಂಗ್ರಹಿಸ್ತಾರೆ. ಇದನ್ನು ಒಂದು ಸಾವಿರಕ್ಕೂ ಹೆಚ್ಚು ನಿರ್ಗತಿಕರು ಮತ್ತು ಬಡವರಿಗೆ ಉಣಬಡಿಸ್ತಾರೆ. ಕಳೆದ ನಾಲ್ಕೂವರೆ ವರ್ಷಗಳಿಂದ ನಿರಂತರವಾಗಿ ಈ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ.
ಮಹೋಬಾ ಜಿಲ್ಲೆಯಲ್ಲಿ ಯಾರೊಬ್ಬರ ಸ್ಥಿತಿಯೂ ಹಸಿದ ಹೊಟ್ಟೆಗೆ ತಣ್ಣೀರು ಬಟ್ಟೆ ಎಂಬಂತಾಗಬಾರದು, ಯಾರೂ ಹಸಿದುಕೊಂಡು ಮಲಗಬಾರದು ಅನ್ನೋದೇ ತಾರಾ ಪಾಟ್ಕರ್ ಅವರ ಕಳಕಳಿ. ಇದೇ ಉದ್ದೇಶದಿಂದ 46ರ ಹರೆಯದ ತಾರಾ ಪಾಟ್ಕರ್ ಇತರ 12 ಸದಸ್ಯರೊಂದಿಗೆ ಸೇರಿ ಬುಂದೇಲಿ ಸಮಾಜ್’ ಎಂಬ ಎನ್ಜಿಓ ಒಂದನ್ನು ಸ್ಥಾಪಿಸಿದ್ದಾರೆ.
ತಾರಾ ಪಾಟ್ಲರ್ ಅವರ ರೊಟ್ಟಿ ಬ್ಯಾಂಕ್ ಸೇವೆ ಚಿಕ್ಹಾರಾ ಮತ್ತು ಮುಲ್ಹಾ ಕೋಡಾಗೂ ವಿಸ್ತರಿಸಿದೆ. ಇವರ ಸಂಸ್ಥೆಯಲ್ಲಿ ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ರೊಟ್ಟಿ ಬ್ಯಾಂಕ್ ಸಂಪೂರ್ಣವಾಗಿ ಜನರ ದಾನ, ಧರ್ಮದ ಮೇಲೆ ಅವಲಂಬಿತವಾಗಿದೆ.
ಫುಡ್ ಬ್ಯಾಂಕ್ ಗೆ ತರಕಾರಿ, ರೊಟ್ಟಿ ಕೊಡಲಿಚ್ಛಿಸುವವರು ಸ್ವತಃ ಈ ಸೇವೆಯಲ್ಲಿ ಕೈಜೋಡಿಸಬಹುದು.ಇದರಲ್ಲಿ ಯಾವುದೇ ರೀತಿಯ ಹಣದ ವ್ಯವಹಾರವಿಲ್ಲ. ಬಡವರ ಆರೋಗ್ಯ ತಪಾಸಣೆಗಾಗಿ ಕೆಲ ವೈದ್ಯರು ತೊಡಗಿಸಿಕೊಂಡಿದ್ದಾರೆ. ಅವರು ಕೂಡ ಹಣ ಪಡೆಯುವುದಿಲ್ಲವಂತೆ. ರೋಟ್ಟಿ ಬ್ಯಾಂಕ್ ಅನ್ನು ಬುಂದೇಲ್ಖಂಡದ ಇತರ 13 ಜಿಲ್ಲೆಗಳಿಗೂ ವಿಸ್ತರಿಸಲು ಯೋಜನೆ ಹಾಕಿಕೊಳ್ಳಲಾಗಿದೆ.


ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದ ಬಡವರಿಗೂ ನೆರವಾಗಬೇಕೆಂಬ ಹೆಬ್ಬಯಕೆ ತಾರಾ ಪಾಟ್ಕರ್ ಅವರದು. ಬಂದಾ, ಅತ್ತರ, ಲಲಿತ್ಪುರ್, ಮತ್ತು ಒರೈಗೆ ಭೇಟಿ ನೀಡಿರುವ ತಾರಾ ಅಲ್ಲಿನ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಉಳಿದ ಗ್ರಾಮಗಳತ್ತಲೂ ಗಮನಹರಿಸಿದ್ದಾರೆ.
ಬಡವರಿಗೆ ಅನ್ನ ಹಾಕುವುದು ಅದಕ್ಕಿಂತ ದೊಡ್ಡ ಕೆಲಸ ಮತ್ತೊಂದಿಲ್ಲ ಎನ್ನುವುದು ಪಾಟ್ಕರ್ ಅವರ ವಾದ. ಬಡಜನರಿಗೆ ಅನ್ನದ ಜೊತೆಗೆ ಆರೋಗ್ಯ ಸೇವೆ ಕೊಡಬೇಕೆನ್ನುವುದು ಅವರ ಆಶಯ. ಅದಕ್ಕಾಗಿ ತಾರಾ ಪಾಟ್ಕರ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾಡಿದ್ದಾರೆ. ಸ್ಥಳೀಯರೊಂದಿಗೆ ಸೇರಿ ಅವರು 80 ದಿನಗಳ ಕಾಲ ಉಪವಾಸ ಕೂಡ ಮಾಡಿದ್ದಾರೆ.
ಏನೇ ಹೇಳಿ, ಬಡವರು, ನಿರ್ಗತಿಕರಿಗೆ ಪ್ರತಿನಿತ್ಯ ಅನ್ನ ದಾಸೋಹ ದೊರೆಕಿಸುತ್ತಿರುವ ತಾರಾ ಪಾಟ್ಕರ್ ಅವರು ಸಮಾಜಸೇವೆ ಇತರರಿಗೆ ಮಾದರಿಯಾಗಿದೆ.

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....