ಎಷ್ಟೋ ಜನರಿಗೆ ಗೊತ್ತೇ ಇಲ್ಲದ ದೀಪಿಕಾ ಇನ್ನೊಂದು ಮುಖ..!

Date:

ಬಾಲಿವುಡ್ನಲ್ಲಿ ಕನ್ನಡದ ಹುಡುಗಿ ದೀಪಿಕಾ ಪಡುಕೋಣೆ ಅವರಿಗೆ ದೊಡ್ಡ ಹೆಸರು. ನಟನೆಯಲ್ಲಂತೂ ದೀಪಿಕಾಗೆ ಭಾರಿ ಆಫರ್ಗಳಿವೆ. ಆದ್ರೆ ದೀಪಿಕಾ ಈಗ ಬೆಂಗಳೂರಿನ ಇಂದಿರಾ ನಗರದಲ್ಲಿ ‘ದಿ ಲೀವ್ ಲವ್ ಲಾಫ್’ ಫೌಂಡೇಷನ್ ಸ್ಥಾಪಿಸಿದ್ದಾರೆ. ಬೆಂಗಳೂರು ಈ ಫೌಂಡೇಷನ್ಗೆ ಮೈನ್ ಬ್ರಾಂಚ್ ಕೂಡ ಆಗಿದೆ . ದೀಪಿಕಾ ಫೌಂಡೇಷನ್ಗೆ ಮುಖ್ಯಸ್ಥೆ ಅನ್ನಾ ಚಾಂಡಿ ಅವರು.
ಅನ್ನಾ ಚಾಂಡಿ ಅವರು ಅಂತಾರಾಷ್ಟ್ರೀಯ ಟ್ರಾನ್ಸ್ ಆ್ಯಕ್ಷನಲ್ ಅನಾಲಿಸಿಸ್ ಅಸೋಸಿಯೇಶನ್ನಿಂದ ಮಾನ್ಯತೆ ಪಡೆದ ವ್ಯವಹಾರ ವಿಶ್ಲೇಷಕಿ. ಆದ್ರೆ ಕೌನ್ಸೆಲಿಂಗ್ನಲ್ಲಿ ಪಾಂಡಿತ್ಯವನ್ನು ಪಡೆದಿದ್ದಾರೆ. ಆರ್ಟ್ ಥೆರಪಿ ಮತ್ತು ನ್ಯೂರೋ ಲಿಂಗ್ವಿಸ್ಟಿಕ್ ಪ್ರೋಗ್ರಾಂನಲ್ಲೂ ಪಾಂಡಿತ್ಯ ಸಾಧಿಸಿದ್ದಾರೆ. ಅನ್ನಾ ಚೆನ್ನೈ ಮೂಲದವರಾದ್ರೂ ಬೆಂಗಳೂರಿನಲ್ಲೀಗ ನೆಲೆಕಂಡಿದ್ದಾರೆ. ತನ್ನ ಫೀಲ್ಡ್ನಲ್ಲಿ ಅನ್ನಾ ಅವರಿಗೆ 30 ವರ್ಷಗಳ ಅನುಭವ ಇದೆ. ವಿವಿಧ ರೀತಿಯ ಜನರನ್ನು ಭೇಟಿ ಮಾಡಿದ್ದಾರೆ. ಅಷ್ಟೇ ಅಲ್ಲ ಅವರಿಗೆ ಪರಿಹಾರವನ್ನೂ ಸೂಚಿಸಿದ್ದಾರೆ.

ಅನ್ನಾ ಹುಟ್ಟಿದ್ದು ಅಪ್ಪಟ ದಕ್ಷಿಣ ಭಾರತೀಯ ಸಂಸ್ಕೃತಿ ಹೊಂದಿದ್ದ ಕುಟುಂಬದಲ್ಲಿ. ಬೆಂಗಳೂರಿನ ಬಿಷಪ್ ಕಾಟನ್ ಗರ್ಲ್ಸ್ ಸ್ಕೂಲ್ನಲ್ಲಿ ವಿದ್ಯಾರ್ಥಿ ಜೀವನ ಆರಂಭಿಸಿದ್ದರು. ಮೌಂಟ್ ಕಾರ್ಮೆಲ್ ಕಾಲೇಜ್ನಿಂದ ಪದವಿ ಪಡೆದುಕೊಂಡಿದ್ದರು. ಇಷ್ಟಪಟ್ಟವರ ಜೊತೆ ಮದುವೆ ಕೂಡ ಆಯಿತು. ಮದುವೆ ಆದ ಕೆಲವೇ ತಿಂಗಳಲ್ಲಿ ತನ್ನ ಗಂಡನ ಸಹೋದರ ಸ್ಕಿಜೋಫ್ರೇನಿಯಾದಿಂದ ಬಳಲುತ್ತಿರುವುದು ಗೊತ್ತಾಗಿತ್ತು. ಆಗಲೇ ತಮ್ಮ ವೃತ್ತಿ ಆರಂಭಿಸಿದ್ರು.
ಅನ್ನಾ ತನ್ನ ವೃತ್ತಿ ಜೀವನವನ್ನು ವಿಶ್ವಾಸ್ ಅನ್ನುವ ಎನ್ಜಿಒ ಒಂದರಲ್ಲಿ ಫ್ರೀಲಾನ್ಸ್ ಕೌನ್ಸೆಲರ್ ಆಗಿ ಆರಂಭಿಸಿದ್ದರು. ಈ ಕೆಲಸಕ್ಕೆ ಸೇರುವಾಗ ಅನ್ನಾ ವಯಸ್ಸು ಸರಿಸುಮಾರು 30ರ ಗಡಿ ದಾಟಿತ್ತು. ಅಂಗವೈಕಲ್ಯ ಮತ್ತು ಅವರ ಅಭಿವೃದ್ಧಿಯ ಬಗ್ಗೆ ಕೆಲಸ ಮಾಡುತ್ತಿರುವ ಈ ಎನ್ಜಿಒ ಈಗ ವಿಶ್ವಾಸ, ವಿವೇಕ ಮತ್ತು ಸ್ನೇಹ ಅನ್ನುವ ಮೂರು ಬ್ರಾಂಚ್ಗಳನ್ನು ಹೊಂದಿದೆ. ಅನ್ನಾ ಕೆಲಸದ ವೈಖರಿಯನ್ನು ನೋಡಿ ವಿಶ್ವಾಸ್ ಸಂಸ್ಥೆ ಅವರನ್ನು ಬೋರ್ಡ್ ಮೆಂಬರ್ ಆಗಿ ಬಡ್ತಿ ಮಾಡಿದೆ. ಅಲ್ಲಿ ಅನ್ನಾ ಅವರು ಸೂಪರ್ ವಿಷನ್ ಮಾಡೆಲ್ ಅನ್ನುವ ಪ್ರಾಜೆಕ್ಟ್ ಅನ್ನು ಡ್ರಾಫ್ಟ್ ಮಾಡಿದ್ದರೂ ಭಾರತದಲ್ಲಿ ಅದನ್ನು ದೊಡ್ಡ ಮಟ್ಟದಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಿಲ್ಲ.
ಅನ್ನಾ ಅವರು ಫಸ್ಟ್ ಸೋರ್ಸ್ ಮತ್ತು 24/7 ಸೇರಿದಂತೆ ಹಲವು ಬಿಪಿಒಗಳಲ್ಲಿ ಕೆಲಸ ಮಾಡಿದ್ದರು. ಇವತ್ತಿಗೂ ಜನರ ಕಷ್ಟಗಳಿಗೆ ಕಿವಿಯಾಗುತ್ತಾರೆ. ಅವರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾರೆ. ಅವರಿಗೆ ಹೊಸ ಬದುಕಿನ ಬಗ್ಗೆ ಕನಸುಗಳನ್ನು ಕಟ್ಟಿಕೊಡುತ್ತಾರೆ. ಈ ಎಲ್ಲಾ ಕೆಲಸಗಳ ನಡುವೆಯೂ ಅನ್ನಾ ತನ್ನ ಕುಟುಂಬಕ್ಕೆ ಸಾಕಷ್ಟು ಸಮಯವನ್ನೂ ನೀಡುತ್ತಾರೆ.
ಪ್ರತಿಯೊಂದು ಭಾರತೀಯ ಕುಟುಂಬದಲ್ಲಿ ಇರುವಂತೆ ಅನ್ನಾ ಕುಟುಂಬದಲ್ಲೂ ಅವರ ಭವಿಷ್ಯದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಆದ್ರೆ ಅನ್ನಾ ಮಾತ್ರ ತನ್ನ ಕನಸುಗಳನ್ನು ನನಸು ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದರು. ತನ್ನ ಕೆಲಸದಿಂದ ಅನ್ನಾಗೆ ಒಂದು ಪೈಸೆ ಆದಾಯವೂ ಹುಟ್ಟುತ್ತಿರಲಿಲ್ಲ. ಆದ್ರೆ ಕನಸುಗಳನ್ನು ಮಾತ್ರ ಬಿಟ್ಟಿರಲಿಲ್ಲ. ಅದೇ ಪ್ರಯತ್ನ ಅನ್ನಾರವರನ್ನು ಈಗ ಉನ್ನತ ಸ್ಥಾನಕ್ಕೆ ತಂದು ನಿಲ್ಲಿಸಿದೆ.
ಅನ್ನಾ ಅವರು ಕೌನ್ಸಲಿಂಗ್ ವೃತ್ತಿ ಆರಂಭಿಸಿ ಈಗ 30 ವರ್ಷಗಳು ಮುಗಿದಿವೆ. ಆದ್ರೆ ಅನ್ನಾ ಅವರು ಇನ್ನೊಬ್ಬರಿಗೆ ಸಹಾಯ ಮಾಡಲು ಇವತ್ತಿಗೂ ಹಿಂದೆಮುಂದೆ ನೋಡುತ್ತಿಲ್ಲ. ನೋವುಂಡವರ ಕಷ್ಟಗಳಿಗೆ ಕಿವಿಯಾಗುತ್ತಿದ್ದಾರೆ. ಅವರಿಗೆ ಪ್ರೀತಿ ನೀಡುತ್ತಿದ್ದಾರೆ. ತನ್ನದೇ ಶೈಲಿಯಲ್ಲಿ ಅವರ ಬದುಕಿನ ದಾರಿಯನ್ನು ಬದಲಿಸುವ ಪ್ರಯತ್ನ ಮಾಡುತ್ತಿದ್ದಾರೆ.


ಲೀವ್ ಲವ್ ಲಾಫ್ ಪೌಂಡೇಷನ್ ಆರಂಭವಾದ ಮೇಲೆ ದುಬಾರಾ ಪೂಚೋ ಕ್ಯಾಂಪೇನ್ ಮೂಲಕ, ನಾಲ್ಕು ವ್ಯಕ್ತಿಗಳ ಕತೆ ಕೇಳಿಸುವಂತಹ ಕೆಲಸ ಮಾಡಿಸಿದ್ದೆವು. ಇದು ಇವತ್ತು 140 ವ್ಯಕ್ತಿಗಳ ಕಥೆಯ ತನಕ ವಿಸ್ತಾರಗೊಂಡಿದೆ. ಈ ಕಥೆಗಳೆಲ್ಲವೂ ಅನುಭವದ ಮಾತುಗಳೇ ಆಗಿವೆ. ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಸ್ಫೂರ್ತಿದಾಯಕವಾಗಿದೆ ಎನ್ನುತ್ತಾರೆ ಲೀವ್ ಲವ್ ಲಾಫ್ ಫೌಂಡೇಷನ್ನ ಮುಖ್ಯಸ್ಥೆ ಅನ್ನಾ ಅವರು.
ಏನೇ ಹೇಳಿ, ಬದುಕಿನಲ್ಲಿ ಹಲವು ಏರಿಳಿತಗಳನ್ನು ಕಂಡಿರುವ ಅನ್ನಾ ಅದ್ಯಾವುದಕ್ಕೂ ತಲೆ ಕೆಡಸಿಕೊಂಡಿಲ್ಲ. ಹೊಸ ಬದುಕಿನ ಬಗ್ಗೆ ಪ್ರತಿದಿನ ಹೊಸ ಹೊಸ ಕನಸುಗಳನ್ನು ಕಾಣುತ್ತಿದ್ದಾರೆ. ಅನ್ನಾ ಚಾಂಡಿ ವೃತ್ತಿ, ಕೆಲಸ ಮತ್ತು ಕನಸುಗಳು ನಿಜಕ್ಕೂ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ.

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....