ಟೀಮ್ ಇಂಡಿಯಾದ ಉಪನಾಯಕ, ಹಿಟ್ ಮ್ಯಾನ್ ಎಂದೇ ಖ್ಯಾತರಾಗಿರೋ, ಡಬಲ್ ಸೆಂಚುರಿ ಸ್ಟಾರ್ ರೋಹಿತ್ ಶರ್ಮಾ ಮತ್ತೊಂದು ಮಹತ್ತರ ಮೈಲುಗಲ್ಲು ಸ್ಥಾಪಿಸಿದ್ದಾರೆ. ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಅಜರುದ್ದೀನ್, ವೀರೇಂದ್ರ ಸೆಹ್ವಾಗ್ ಅವರಲ್ಲದೆ, ಸಮಕಾಲೀನ ಕ್ರಿಕೆಟಿಗರಾದ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಹಾಲಿ ನಾಯಕ, ರನ್ ಮಷಿನ್ ವಿರಾಟ್ ಕೊಹ್ಲಿ ಸಾಲಿಗೆ ಸೇರಿದ್ದಾರೆ ರೋಹಿತ್ ಶರ್ಮಾ.
ನ್ಯೂಜಿಲೆಂಡ್ ವಿರುದ್ಧ ಅವರ ತವರಲ್ಲಿ ನಡೆದ ಟಿ20 ಸರಣಿಯ 5 ಮತ್ತು ಕೊನೆಯ ಪಂದ್ಯದಲ್ಲಿ 60 ರನ್ ಬಾರಿಸಿ, ಗಾಯಗೊಂಡು ಪೆವಿಲಿಯನ್ ಸೇರುವ ಮುನ್ನ ಅಂತಾರಾಷ್ಟ್ರೀಯ ಕ್ರಿಕೆಟಲ್ಲಿ 14 ಸಾವಿರ ರನ್ ಬಾರಿಸಿದ ಭಾರತೀಯ ಆಟಗಾರರ ಎಲೈಟ್ ಪಟ್ಟಿ ಸೇರಿದರು, ಈ ಸಾಧನೆಗೆ ರೋಹಿತ್ಗೆ 31ರನ್ ಬೇಕಿತ್ತು. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ರೋಹಿತ್ ಶರ್ಮಾ ಲೀಲಾಜಾಲವಾಗಿ ಬ್ಯಾಟ್ ಬೀಸಿ ಹೊಸ ದಾಖಲೆ ಬರೆದರು.
ಸಚಿನ್, ದ್ರಾವಿಡ್, ಗಂಗೂಲಿ ಎಲೈಟ್ ಪಟ್ಟಿಗೆ ರೋಹಿತ್ ಶರ್ಮಾ..!
Date: