ಅಂದು ತುತ್ತು ಅನ್ನಕ್ಕೆ ಪರದಾಟ, ಇಂದು ಹೆಸರಾಂತ ಉದ್ಯಮಿ..!

Date:

ಎಂಜಿಎಂ ಎಂಬ ಕಂಪನಿ ಇಂದು ದೇಶ-ವಿದೇಶದಲ್ಲೂ ಖ್ಯಾತಿ ಪಡೆದಿದೆ. ಆ ಕಂಪನಿ ಮುಖ್ಯಸ್ಥರು ಎಂ.ಜಿ. ಮುತ್ತು ಅವರು ಬಹಳಷ್ಟು ಜನರಿಗೆ ತಿಳಿದಿಲ್ಲ. ಅವರು ಇಂದು ಈ ಮಟ್ಟಕ್ಕೆ ಬರಲು ಎಷ್ಟೊಂದು ಕಷ್ಟಪಟ್ಟಿದ್ದಾರೆ ಎಂದು ನೋಡಿದರೆ, ಅದು ಭಯಾನಕ.
ಎಂ.ಜಿ. ಎಂ ಮುತ್ತು ಅವರ ಬದುಕಿನ ವಿಶ್ವಾಸ ಮತ್ತು ಗಟ್ಟಿ ಮನಸ್ಸು ಇಂದು ಅವರನ್ನು ಯಶಸ್ಸಿನ ಉತ್ತುಂಗಕ್ಕೆ ಏರಿಸಿದೆ. ಮುತ್ತು ಅವರಿಗೆ ಶಿಕ್ಷಣದ ಕೊರತೆ ಇರಬಹುದು, ಅಥವಾ ಹೈ-ಫೈ ಜೀವನದ ಬಗ್ಗೆ ಹೆಚ್ಚು ತಿಳಿಯದೇ ಇದ್ದಿರಬಹುದು, ಆದ್ರೆ ಯಶಸ್ಸಿಗಾಗಿ ಶ್ರಮಿಸುವ ಮನಸ್ಸು ಮಾತ್ರ ಯಾವತ್ತೂ ಚಂಚಲವಾಗಿರಲಿಲ್ಲ. ಕಷ್ಟ ಇದ್ರೂ ಶ್ರಮ ಮತ್ತು ಮನಸ್ಸು ಮುತ್ತು ಅವರನ್ನು ಶ್ರೇಷ್ಟರ ಸಾಲಿನಲ್ಲಿ ನಿಲ್ಲುವಂತೆ ಮಾಡಿದೆ.


ಎಂ.ಜಿ. ಮುತ್ತು ಅವರು ಹುಟ್ಟಿದ್ದು ಕಡು ಬಡತನದ ಕುಟುಂಬದಲ್ಲಿ. ಶಾಲೆ ಮತ್ತು ಶಿಕ್ಷಣ ಅನ್ನುವುದು ಮುತ್ತು ಪಾಲಿಗೆ ಕೇವಲ ಕನಸಾಗಿತ್ತು. ಹೀಗಾಗಿ ಮುತ್ತು 1957ರಲ್ಲಿ ಬಂದರು ಒಂದರಲ್ಲಿ ಗೂಡ್ಸ್ಗಳನ್ನು ಹಡಗುಗಳಿಂದ ಇಳಿಸುವ ಮತ್ತು ಹಡಗುಗಳಿಗೆ ಲೋಡ್ ಮಾಡುವ ಕೂಲಿ ಕಾರ್ಮಿಕನಾಗಿ ಕೆಲಸ ಮಾಡಲು ಆರಂಭಿಸಿದ್ರು. ಮುತ್ತು ಅವರ ತಂದೆ ಕೂಡ ಇದೇ ಕೆಲಸ ಮಾಡುತ್ತಿದ್ದರು. ಹೀಗಾಗಿ ಮುತ್ತು ಪಾಲಿಗೆ ಈ ಕೆಲಸವೇ ಮಹತ್ವದ್ದಾಗಿತ್ತು.
ಮುತ್ತು ಅವರ ಜೀವನ ಎಷ್ಟು ಕಷ್ಟ ಇತ್ತು ಅಂದ್ರೆ, ಮುತ್ತು ಅವರ ಕುಟುಂಬ ಒಂದು ಹೊತ್ತಿನ ಊಟವನ್ನು ಕೂಡ ಮಾಡದೇ, ಹಸಿದ ಹೊಟ್ಟೆಯಲ್ಲೇ ಮಲಗಿದ ದಿನಗಳು ಅದೆಷ್ಟೊ ಇದ್ವು. ಇಂತಹ ಬಡತನದ ನಡುವೆ ಮುತ್ತು ಅವರು ಶಾಲೆಯನ್ನು ಅರ್ಧಕ್ಕೆ ಕೈ ಬಿಟ್ರು. ಆಮೇಲೆ, ತಂದೆಯೊಂದಿಗೆ ಬಂದರಿನಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯಲು ಆರಂಭಿಸಿದ್ರು. ಆಗ ಮುತ್ತು ಕುಟುಂಬದ ಹೊಟ್ಟೆ ಹಸಿವು ಕಡಿಮೆ ಆಗುತ್ತಾ ಬಂದಿತ್ತು.
ಚೆನ್ನೈ ಬಂದರಿನಲ್ಲಿ ಕಠಿಣ ಕೆಲಸಗಳನ್ನು ಮಾಡಿ, ಹಡಗುಗಳಿಗೆ ಗೂಡ್ಸ್ ತುಂಬಿಸಿ, ಬೇರೆ ಕಡೆಯಿಂದ ಹಡಗಿನಲ್ಲಿ ಬಂದ ವಸ್ತುಗಳನ್ನು ಖಾಲಿ ಮಾಡಿ ಮುತ್ತು ಕೊಂಚ ಹಣವನ್ನು ಉಳಿತಾಯ ಮಾಡಿದರು. ಈ ಉಳಿದ ಹಣದಲ್ಲಿ ಮುತ್ತು ಚಿಕ್ಕದೊಂದು ಬಿಸಿನೆಸ್ ಮಾಡುವ ಕನಸು ಕಂಡಿದ್ದರು. ಲಾಜಿಸ್ಟಿಕ್ ಉದ್ಯಮದಲ್ಲಿ ಕೆಲವು ಗೆಳೆಯರು ಇದ್ದಿದ್ದರಿಂದ ಮುತ್ತು ಈ ಉದ್ಯಮವನ್ನು ಆರಂಭಿಸಿಯೇ ಬಿಟ್ರು.
ಆದ್ರೆ ಮುತ್ತು ಮೊದಲ ಉದ್ಯಮದಲ್ಲಿ ಹೆಚ್ಚು ಕೆಲಸಗಾರರು ಇಲ್ಲದೇ ಇದ್ರೂ, ಗ್ರಾಹಕರಿಗೆ ತೃಪ್ತಿ ನೀಡುವುದರಲ್ಲಿ ಮುತ್ತು ಹಿಂದೆ ಬೀಳಲಿಲ್ಲ. ಅವರ ಕಠಿಣ ಶ್ರಮ ಮುತ್ತು ಅವರನ್ನು ಇವತ್ತು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಇವತ್ತಿಗೂ ಮುತ್ತು ಅವರಿಗೆ ಗ್ರಾಹಕರ ಸಂತೃಪ್ತಿಯೇ ಮೊದಲ ಗುರಿ ಆಗಿದೆ. ಗ್ರಾಹಕರ ಬೇಡಿಕೆಗಳನ್ನು ಅವಧಿಗೂ ಮುನ್ನ ತಲುಪಿಸುವುದರ ಜೊತೆಗೆ ಉತ್ತಮ ಗ್ರಾಹಕ ಸೇವೆಯನ್ನು ಮಾಡಿ ಅವರ ಮನ ಗೆದ್ದಿದ್ದಾರೆ.
ನೋಡಿ, ಇಂದು ಇದೇ ಕಾರಣಕ್ಕಾಗಿ ಚೆನ್ನೈನಲ್ಲಿ ಇವತ್ತು ಮುತ್ತು ಹೆಸರು ಪ್ರಸಿದ್ಧಿ ಪಡೆದಿದೆ. ಉದ್ಯಮವನ್ನು ನಿಧಾನವಾಗಿ ಬೆಳೆಸಿಕೊಂಡು ಹೋದ ಮುತ್ತು ಇವತ್ತು ಎಂಜಿಎಂ ಕಂಪನಿಯ ಮಾಲೀಕ ಮತ್ತು ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸುವ ಉದ್ಯಮಿಯಾಗಿ ಬೆಳೆದಿದ್ದಾರೆ. ಮುತ್ತು ಅವರ ಜೀವನ ಕಥೆ ನಿಜಕ್ಕೂ ಸ್ಫೂರ್ತಿದಾಯಕ.
ಒಂದು ಕಾಲದಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡಿದ ಮುತ್ತು ಇವತ್ತು ಅದೆಷ್ಟೋ ಜನರಿಗೆ ಅನ್ನದಾತ. ಇದಕ್ಕೆಲ್ಲಾ ಕಾರಣವಾಗಿರುವುದು ಪರಿಶ್ರಮ ಮತ್ತು ಸರಳತೆ. ಉದ್ಯಮ ಆರಂಭಿಸುವ ಕನಸು ಕಾಣುತ್ತಿರುವವರಿಗೆ ಮುತ್ತು ಅವರ ಜೀವನ ಕಥೆ ಸ್ಪೂರ್ತಿದಾಯಕ ಅನ್ನುವುದರಲ್ಲಿ ಎರಡು ಮಾತಿಲ್ಲ.

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....