ಮಂಗಳೂರು : ಅನಾರೋಗ್ಯಪೀಡಿತರಾಗಿ ದೆಹಲಿಯ ಆಸ್ಪತ್ರೆಗೆ ದಾಖಲಾಗಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶೀಘ್ರ ಗುಣಮುಖರಾಲಿ ಎಂದು ಮಾಜಿ ಕೇಂದ್ರ ಸಚಿವ ಬಿ ಜನಾರ್ದನ ಪೂಜಾರಿ ಸೋಮವಾರ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪೂಜೆ ಸಲ್ಲಿಸಿದ್ದು ಮಾತ್ರವಲ್ಲದೆ ಇನ್ನು ಮುಂದಿನ ಮೂರು ದಿನಗಳೊಳಗೆ ಗುಣಮುಖರಾಗದಿದ್ದಲ್ಲೆ ಮುಂದೆ ಕುದ್ರೋಳಿ ದೇವಸ್ಥಾನ ಪ್ರವೇಶಿಸಲ್ಲ ಎಂದು ಶಪಥ ಮಾಡಿದ್ದಾರೆ.
ಪೂಜೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸೋನಿಯಾಗಾಂಧಿ ಕುಟುಂಬ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಭಕ್ತರು. ಮಂಗಳೂರಿಗೆ ಬಂದಾಗ ಇಲ್ಲಿಗೆ ಭೇಟಿ ನೀಡುತ್ತಾರೆ. ಅವರ ಆರೋಗ್ಯಕ್ಕಾಗಿ ದೇವರಿಗೆ ವಿಶೇಷ ಪ್ರಾರ್ಥನೆ ಮಾಡಿದ್ದೇನೆ. ಮೂರು ದಿನಗಳ ಒಳಗೆ ಅವರು ಗುಣಮುಖರಾಗದೇ ಇದ್ದಲ್ಲಿ ನಾನು ದೇವಸ್ಥಾನಕ್ಕೆ ಪ್ರವೇಶಿಸುವುದಿಲ್ಲ’’ ಎಂದು ಹೇಳಿದರು.
ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಮಿಥುನ್ ರೈ ಗೆಲ್ಲದೇ ಇದ್ದರೆ ನಾನು ಕುದ್ರೋಳಿ ಕ್ಷೇತ್ರ ಮಾತ್ರ ಅಲ್ಲ, ಚರ್ಚ್, ಮಸೀದಿಗೂ ಪ್ರವೇಶ ಮಾಡುವುದಿಲ್ಲ ಎಂದು ಪೂಜಾರಿ ಶಪಥ ಮಾಡಿದ್ದರು. ಬಳಿಕ ಶಪಥ ಮುರಿದು ದೇವಸ್ಥಾನದೊಳಕ್ಕೆ ಪ್ರವೇಶ ಮಾಡಿದ್ದರು. ಈಗ ಸೋನಿಯಾಗಾಂಧಿ ಆರೋಗ್ಯಕ್ಕಾಗಿ ಅದೇ ಹಳೇ ಪ್ರತಿಜ್ಞೆ ಮಾಡಿದ್ದಾರೆ.
ಮಿಥುನ್ ರೈ ಗೆಲ್ದೆ ಇದ್ರೆ ದೇವಾಲಯ ಪ್ರವೇಶಿಸಲ್ಲ ಅಂದಿದ್ದ ಪೂಜಾರಿ ಸೋನಿಯಾಗಾಗಿಯೂ ಅದೇ ಶಪಥ..!
Date: