ರಾತ್ರಿ ಹೊತ್ತು ಸಂಚರಿಸುವ ಜೀವಿಗಳು, ಅಂದ್ರೆ ನಿಶಾಚರಿಗಳನ್ನು ದಾರಿದ್ರ್ಯದ ಸಂಕೇತ ಎಂದು ಹೇಳುತ್ತಾರೆ. ಸಾಮಾನ್ಯವಾಗಿ ಬಾವಲಿಯನ್ನು ಅವಶಕುನ, ದಾರಿದ್ರ್ಯದ ಸಂಕೇತವೆಂದು ಕರೆಯುತ್ತಾರೆ. ಆದರೆ, ಸಕ್ಕರೆನಾಡು ಮಂಡ್ಯದ ಜಟ್ಟಿನಹಳ್ಳಿ ಗ್ರಾಮದ ಜನ ಮಾತ್ರ ಇದೇ ಬಾವಲಿಯನ್ನು ದೇವರೆಂದು ಪೂಜಿಸುತ್ತಾರೆ.
ನಾಗಮಂಗಲ ತಾಲೂಕಿನ ಜುಟ್ಟನಹಳ್ಳಿ ಗ್ರಾಮದಲ್ಲಿ ನಿಶಾಚರ ಪಕ್ಷಿಗಳಿಗೆ ವಿಶೇಷವಾದ ಪೂಜೆ ಸಲ್ಲಿಸಲಾಗುತ್ತದೆ. ಆಶ್ಚರ್ಯವೆಂದರೆ ಬಾವಲಿಗಳಿಗೆ ದೇವಸ್ಥಾನ ಕಟ್ಟಿದ್ದಾರೆ! ಪ್ರತೀ ವರ್ಷ ಊರಹಬ್ಬದಂದು ದೇವರ ಮರದಲ್ಲಿರುವ ಬಾವಲಿಗಳಿಗೆ ಇಲ್ಲಿ ಪೂಜೆ ಮಾಡುತ್ತಾರೆ.
ಬಾವಲಿಗಳು ಈ ಭಾಗದಲ್ಲಿ ಕಾಣದಿದ್ದಾಗ ಊರಲ್ಲಿ ಅಶಾಂತಿ ನಿರ್ಮಾಣವಾಗುತ್ತದೆ. ಜಾನುವಾರುಗಳ ಸಾವು -ನೋವು ಸಂಭವಿಸುತ್ತದೆ ಎಂಬುದು ಗ್ರಾಮಸ್ಥರ ನಂಬಿಕೆ. ಬಾವಲಿಗಳು ಬೇರೆಡೆ ಹೋದಾಗ ಊರಿನ ನೆಮ್ಮದಿಯೇ ಹದಗೆಟ್ಟಿತ್ತಂತೆ! ಹೀಗಾಗಿ ಗ್ರಾಮದಲ್ಲಿ ಬಾವಲಿಗಳ ಪೂಜೆ ಮಾತ್ರ ನಿರಂತರವಾಗಿ ಮಾಡಿಕೊಂಡು ಬರ್ತಾರೆ.