ನೀರಿನ ಬದಲು ನಲ್ಲಿಯಲ್ಲಿ ಆಲ್ಕೋಲ್​ ಪೂರೈಕೆ..!

Date:

ಕುಡಿಯುವ ನೀರಿನ ಬದಲು ಯಾವಾಗಲೂ ಮದ್ಯೆ ಬಂದರೆ ಹೇಗಿರುತ್ತೆ! ನೀರು ಪೂರೈಕೆ ಆದಂತೆ ನಿತ್ಯ ಮದ್ಯ ಪೂರೈಕೆ ಯಾದರೆ ಹೇಗೆ? ಯಾರ್ರಿ ನೀರಿನ ಬದಲು ಮದ್ಯ ಪೂರೈಸ್ತಾರೆ ಅಂತಿದ್ದೀರಾ.? ಇಂತಹದ್ದೊಂದು ಪ್ರಮಾದ ನಡೆದಿರೋದು ಕೇರಳದಲ್ಲಿ
ಅಬಕಾರಿ ಅಧಿಕಾರಿಗಳ ಬೇಜವಾಬ್ದಾರಿ ಕಾರ್ಯದಿಂದಾಗಿ ತ್ರಿಶೂರ್ ಜಿಲ್ಲೆಯ ಸೊಲೋಮನ್ ಅವೆನ್ಯೂ ಅಪಾಟ್ಮೆಂಟ್ ನಿವಾಸಿಗಳು ಪ್ರತಿನಿತ್ಯ ನೀರಿನ ಬದಲು ಮದ್ಯ ಕುಡಿಯುವಂತಾಗಿದೆ. ನಲ್ಲಿಲ್ಲಿ ನೀರಿನ ಬದಲು ಮದ್ಯ ಪೂರೈಕೆಯಾಗುತ್ತಿದೆ. ಅರೆ, ಏನಿದು ..? ನೀರಿನ ಬದಲು ಎಣ್ಣೆ ಎಂದು ಅಚ್ಚರಿಯಾದರೂ ಕೂಡ ಇದು ಸತ್ಯ ಕೇರಳದ ತ್ರಿಶೂರ್ ಜಿಲ್ಲೆಯ ಸೊಲೋಮನ್ ಅವೆನ್ಯೂ ಅಪಾಟ್ಮೆಂಟ್​ನ 18 ಮನೆಗಳಿಗೆ ಆಲ್ಕೋಹಾಲ್​ ಮಿಶ್ರಿತ ನೀರು ಬರುತ್ತಿದೆ..! ನಲ್ಲಿ ತಿರುವಿದರೆ ನೀರಿನ ಬದಲು ಮದ್ಯ ಬರುತ್ತಿದೆ.
ಆರು ವರ್ಷಗಳ ಹಿಂದೆ ಇದೇ ಅವೆನ್ಯೂ ಅಪಾರ್ಟ್ಮೆಂಟ್​ ಸಮೀಪದಲ್ಲಿ ರಚನಾ ಎಂಬ ಬಾರಿತ್ತು. ಬಾರ್ ಮೇಲೆ ಅಬಕಾರಿ ಇಲಾಖೆ 6 ಸಾವಿರ ಲೀಟರ್ ಮದ್ಯವನ್ನು ಅಕ್ರಮವಾಗಿ ಸಂಗ್ರಹಿಸಿದ ಆರೋಪ ಹೊರಿಸಿ, ಅಕ್ರಮ ಮದ್ಯ ನಾಶಪಡಿಸಲು ಹೇಳಿತ್ತು. ಬಾರ್ ಪಕ್ಕದಲ್ಲೇ ಗುಂಡಿ ತೋಡಿ ಎಲ್ಲಾ ಮದ್ಯವನ್ನು ಚೆಲ್ಲಿ ಗುಂಡಿ ಮುಚ್ಚಿದ್ದರು. ಅಪಾರ್ಟ್ಮೆಂಟ್​ ಬಾವಿ ಪಕ್ಕದಲ್ಲೇ ಈ ಗುಂಡಿ ತೋಡಿದ ಪರಿಣಾಮ ಮದ್ಯವೆಲ್ಲವೂ ಬಾವಿ ಸೇರಿದೆ. ನೀರನ್ನು ಟ್ಯಾಂಕುಗಳಿಗೆ ಪಂಪ್ ಮಾಡಿದ ಪರಿಣಾಮ ನೀರಿನ ಬದಲು ಮದ್ಯ ಪೂರೈಕೆಯಾಗುತ್ತಿದೆ ಎಂದು ವರದಿಯಾಗಿದೆ.

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....