ಕಾಂಗ್ರೆಸ್ ನಾಯಕರು ಕೆಲಸವಿಲ್ಲದೆ ನಿರೋದ್ಯೋಗಿಗಳು. ಹೀಗಾಗಿ ಅವರು ಮನಬಂದಂತೆ ಮಾತಾಡ್ತಾರೆ ಎಂದು ಸಚಿವ ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೇರವಾಗಿ ಸಿದ್ದರಾಮಯ್ಯ ಅವರ ಹೆಸರನ್ನು ಪ್ರಸ್ತಾಪಿಸಿದ ಅವರು, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದಲ್ಲಿರುವ ಬಹುತೇಕ ಎಲ್ಲಾ ನಾಯಕರು ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಸಿದ್ದರಾಮಯ್ಯಗೆ ಮಾಡೋಕೆ ಬೇರೆ ಕೆಲಸವಿಲ್ಲ ಎಂದು ಪದೇ ಪದೇ ನಿರುದ್ಯೋಗಿಗಳು ಎಂಬ ಪದ ಬಳಸಿ ಟೀಕಿಸಿದರು.
ನೂತನ ಸಚಿವರು ಅನರ್ಹರಲ್ಲ, ಅವರು ಅರ್ಹರು ಎಂದು ಗುರುತಿಸಿ ಜನ ಅವರನ್ನ ಮತ್ತೆ ಕಳುಹಿಸಿದ್ದಾರೆ. ಅವರೆಲ್ಲಾ ಕಮಲದ ಚಿಹ್ನೆ ಮೇಲೆ ಗೆದ್ದು ಬಂದಿದ್ದಾರೆ. ಕಾಂಗ್ರೆಸ್‌ನವರು ನಿರುದ್ಯೋಗಿಗಳಾಗಿರೋದ್ರಿಂದ ಇದೀಗ ಅವರಿಗೆ ಏನೆಲ್ಲ ಹೇಳಿಕೆಗಳನ್ನು ನೀಡಬೇಕೋ ಅದನ್ನೆಲ್ಲಾ ಹೇಳುವ ಮೂಲಕ ತಮ್ಮ ಅಸಲಿ ಬಣ್ಣ ತೋರಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ನಾಯಕರು ನಿರುದ್ಯೋಗಿಗಳು ಎಂದ ಶ್ರೀರಾಮುಲು!
Date: