ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾದ ಶಾಸಕರ ಪೈಕಿ 10 ಮಂದಿಗೆ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಕ್ಕಿದೆ. ಮೊನ್ನೆ ಮೊನ್ನೆಯಷ್ಟೇ ಆ ‘ಅರ್ಹ’ರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ರು. ಆದರೆ, ಖಾತೆ ಹಂಚಿಕೆಯಾಗಿರಲಿಲ್ಲ. ಇದೀಗ ಖಾತೆ ಹಂಚಿಕೆಯಾಗಿದೆ. ಅದರ ಬೆನ್ನಲ್ಲೇ ಕ್ಯಾತೆ ಕೂಡ ಹೆಚ್ಚಿದೆ..!
ರಮೇಶ್ ಜಾರಕಿಹೊಳಿಗೆ ಬಯಸಿದ್ದಂತೆ ಜಲಸಂಪನ್ಮೂಲ ಖಾತೆ ನೀಡಲಾಗಿದೆ. ಇನ್ನುಳಿದಂತೆ ಎಸ್ ಟಿ ಸೋಮಶೇಖರ್ಗೆ ಸಹಕಾರ, ಬಿ ಸಿ ಪಾಟೀಲ್ಗೆ ಅರಣ್ಯ ಇಲಾಖೆ, ಶಿವರಾಂ ಹೆಬ್ಬಾರ್ಗೆ ಕಾರ್ಮಿಕ, ಸುಧಾಕರ್ಗೆ ವೈದ್ಯಕೀಯ, ಶ್ರೀಮಂತ್ ಪಾಟೀಲ್ಗೆ ಜವಳಿ, ನಾರಾಯಣ ಗೌಡಗೆ ಪೌರಾಡಳಿತ ಮತ್ತು ತೋಟಗಾರಿಕೆ, ಆನಂದ್ ಸಿಂಗ್ಗೆ ಆಹಾಗರ ಮತ್ತು ನಾಗರಿಕ, ಗೋಪಾಲಯ್ಯಗೆ ಸಣ್ಣ ಕೈಗಾರಿಕೆ, ಭೈರತಿ ಬಸವರಾಜ್ಗೆ ನಗರಾಭಿವೃದ್ಧಿ ( ಬೆಂಗಳೂರು ಅಭಿವೃದ್ಧಿ ಹೊರತುಪಡಿಸಿ) ಖಾತೆ ದೊರೆತಿದೆ. ಆದರೆ, ಈ ಎಲ್ಲಾ ಸಚಿವರಿಗೂ ತಾವು ಬಯಸಿದ ಖಾತೆ ಸಿಕ್ಕಿಲ್ಲ. ಆದ್ದರಿಂದ ಬಹುತೇಕರು ಕ್ಯಾತೆ ತೆಗೆದಿದ್ದಾರೆ. ಅಸಮಾಧಾನ ವ್ಯಕ್ತಪಡಿಸಿದ್ದಾರೆ.
10 ನೂತನ ಸಚಿವರಿಗೆ ಖಾತೆ ಹಂಚಿಕೆಯಾದ್ರೂ ಮುಂದುವರೆದ ಕ್ಯಾತೆ..!
Date: