ನ್ಯೂಜಿಲೆಂಡ್ ವಿರುದ್ಧ ಮೌಂಟ್ ಮಾಂಗ್ನುಯಿಯಲ್ಲಿ ನಡೆಯುತ್ತಿರೋ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಕನ್ನಡಿಗರಾದ ಕೆ.ಎಲ್ ರಾಹುಲ್ ಮತ್ತು ಮನೀಷ್ ಪಾಂಡೆ ಪರಸ್ಪರ ಕನ್ನಡದಲ್ಲೇ ಮಾತನಾಡಿ ಗಮನ ಸೆಳೆದಿದ್ದಾರೆ.
46ನೇ ಓವರ್ನಲ್ಲಿ ರನ್ ಓಡುವಾಗ ರಾಹುಲ್ ಮತ್ತು ಮನೀಷ್ ಪಾಂಡೆ ಓಡು.. ಓಡು ಮಗ, ಮತ್ತು ಬೇಡ ಬೇಡ ಎಂಬ ಎರಡು ಕನ್ನಡ ಪದಗಳನ್ನು ಬಳಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನ್ಯೂಜಿಲೆಂಡ್ ನೆಲದಲ್ಲಿ ಸ್ಟಾರ್ ಕ್ರಿಕೆಟಿಗರು ಕನ್ನಡದಲ್ಲಿ ಮಾತನಾಡಿದ ವಿಡಿಯೋ ವೈರಲ್ ಆಗಿದ್ದು, ಎಲ್ಲರ ವಾಟ್ಸ್ಆ್ಯಪ್ ಸ್ಟೇಟಸ್ಗಳಲ್ಲಿ ಸದ್ಯ ಈ ವಿಡಿಯೋವೇ!
ನ್ಯೂಜಿಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ರಾಹುಲ್ 112 ರನ್ ಹಾಗೂ ಮನೀಷ್ ಪಾಂಡೆ 42 ರನ್ ಮಾಡಿ ಮಿಂಚಿದ್ದಾರೆ. ಅತಿಥೇಯ ತಂಡಕ್ಕೆ ಭಾರತ 297ರನ್ ಗುರಿ ನೀಡಿದೆ. ಮೊದಲ ಎರಡೂ ಪಂದ್ಯಗಳನ್ನು ಸೋತು ಸರಣಿ ಕಳೆದುಕೊಂಡಿರುವ ಭಾರತ ಈ ಪಂದ್ಯ ಗೆಲ್ಲಲೇ ಬೇಕೆಂಬ ಛಲದಲ್ಲಿದೆ. ಟಿ20 ಸರಣಿಯ ಕ್ಲೀನ್ ಸ್ವೀಪ್ ಮುಖಭಂಗಕ್ಕೆ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ ನ್ಯೂಜಿಲೆಂಡ್ ಕೆಚ್ಚೆದೆಯ ಪ್ರದರ್ಶನ ನೀಡುತ್ತಿದೆ.
https://twitter.com/NagaNagaraj16/status/1227112841225760769?s=19