ಪತ್ನಿಗೆ ಜೀವನಾಂಶ ಕೊಡೋದನ್ನು ತಪ್ಪಿಸಲು 5 ಕೋಟಿ ಸುಟ್ಟ ಭೂಪ.. ಈಗ ದಿನಾ 1 ಲಕ್ಷ ಕೊಡ್ಬೇಕು..!

Date:

ಕೆನಡಾ : ಪತಿ -ಪತ್ನಿಯರ ನಡುವೆ ಮನಸ್ತಾಪ ಮೂಡಿ, ಜೊತೆ ಜೊತೆಯಲಿ ಬಾಳುವುದು ಸಾಧ್ಯವೇ ಇಲ್ಲ ಎಂಬ ನಿರ್ಧಾರಕ್ಕೆ ಇಬ್ಬರೂ ಬಂದಮೇಲೆ ಕಾನೂನು ಬದ್ಧವಾಗಿ ದೂರವಾಗಲು ಮುಂದಾಗುತ್ತಾರೆ. ವಿಚ್ಛೇದನ ಪಡೆದು ತಮ್ಮ ದಾಂಪತ್ಯವನ್ನು ಅಧಿಕೃತವಾಗಿ ಮುರಿದುಕೊಳ್ಳುತ್ತಾರೆ. ಹೀಗೆ ಡಿವೋರ್ಸ್ ಕೊಟ್ಟು ದೂರವಾಗುವಾಗ ಪತಿ ಪತ್ನಿಗೆ ಇಂತಿಷ್ಟು ಅಂತ ಜೀವನಾಂಶವನ್ನು ಕೊಡಬೇಕು. ಈ ದುಡ್ಡಿನ ವಿಚಾರದಲ್ಲೂ ಕಿರಿಕ್ ಆಗುವುದಿದೆ. ಆದರೆ,ಇಲ್ಲೊಬ್ಬ ಪುಣ್ಯಾತ್ಮ ಹೆಂಡತಿಗೆ ದುಡ್ಡು ಕೊಡಲು ಒಲ್ಲೆ ಎಂದು ಬರೋಬ್ಬರಿ 5 ಕೋಟಿ ರೂ ಸುಟ್ಟು ಹಾಕಿದ್ದಾನೆ.. ಆದರೆ ಈಗ ದಿನಾ 1 ಲಕ್ಷ ರೂ ನೀಡಬೇಕಾದ ಸಂಕಷ್ಟದಲ್ಲಿದ್ದಾನೆ..!
ಹೌದು ಕೆನಡಾದ 55 ವರ್ಷದ ಉದ್ಯಮಿ ಬ್ರೂಸ್​ ಮ್ಯಾಕ್​ ಕಾನ್ವಿಲ್ಲೆ ತನ್ನ ಪತ್ನಿಗೆ ಡೈವರ್ಸ್ ಕೊಟ್ಟಿದ್ದಾನೆ. ಆಗ ಆತನ 1 ಮಿಲಿಯನ್ ಕೆನಡಿಯನ್ ಡಾಲರ್ಸ್ ( ಅಂದಾಜು 5 ಕೋಟಿ ರೂ) ಜೀವನಾಂಶ ನೀಡಬೇಕೆಂದು ಓಟ್ಟಾವಾ ಸುಪೀರಿಯರ್ ಕೋರ್ಟ್ ಆದೇಶಿಸಿತ್ತು. ಆದರೆ, ಮ್ಯಾಕ್​ ಕಾನ್ವಿಲ್ಲೆ ಆ 5 ಕೋಟಿ ರೂಗಳನ್ನು ತಂದು ಸುಟ್ಟು ಹಾಕಿದ್ದಾನೆ. ನಂತರ ಕೋರ್ಟ್​ಗೆ ಹೋಗಿ 6 ಬ್ಯಾಂಕ್ ಗಳಿಂದ 25 ಸಲ ದುಡ್ಡು ತೆಗೆದಿದ್ದೀನಿ. ಆ ದುಡ್ಡನ್ನೆಲ್ಲಾ ಸುಟ್ಟು ಹಾಕಿದ್ದೀನಿ. ದುಡ್ಡು ವಿತ್ ಡ್ರಾ ಮಾಡಿದ್ದಕ್ಕೆ ರಶೀದಿ ಇದೆ. ಆದ್ರೆ ಹಣ ಸುಟ್ಟಿದ್ದನ್ನು ವಿಡಿಯೋ ಮಾಡಿಲ್ಲ. ಅದಕ್ಕೆ ಯಾರೂ ಕೂಡ ಸಾಕ್ಷಿ ಇಲ್ಲ ಎಂದಿದ್ದಾನೆ. ಈ ಮಹಾನುಭಾವನ ಕೆಲಸಕ್ಕೆ ನ್ಯಾಯಾಧೀಶರೇ ಶಾಕ್ ಆಗಿದ್ದಾರೆ.
ಇದೀಗ ಕೋರ್ಟ್ ಕಾನ್ವಿಲ್ಲೆ ತನ್ನ ಎಲ್ಲಾ ಹಣಕಾಸು ವ್ಯವಹಾರದ ಸಂಪೂರ್ಣ ಮಾಹಿತಿಯನ್ನು ಕೋರ್ಟ್​ಗೆ ಸಲ್ಲಿಸುವರೆಗೂ ದಿನಕ್ಕೆ 1 ಲಕ್ಷ ರೂನಂತೆ ಪತ್ನಿಗೆ ಜೀವನಾಂಶ ಕೊಡ್ಬೇಕು ಅಂತ ಆದೇಶಿಸಿದ್ದಾರೆ. ಅಲ್ಲದೆ 30 ದಿನಗಳ ಜೈಲು ಶಿಕ್ಷೆಗೂ ಗುರಿಪಡಿಸಿದೆ.

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....