ಕೆ.ಎಲ್ ರಾಹುಲ್… ಟೀಮ್ ಇಂಡಿಯಾದ ಭರವಸೆಯ ಆಟಗಾರ.. ಬ್ಯಾಟಿಂಗ್ನಲ್ಲಿ ಯಾವ್ದೇ ಕ್ರಮಾಂಕದಲ್ಲೂ ಆಪತ್ಬಾಂಧವರಾಗಿ ತಂಡಕ್ಕೆ ನೆರವಾಗಲ್ಲ ಕ್ಲಾಸಿಕ್ ಪ್ಲೇಯರ್…! ವಿಕೆಟ್ ಕೀಪರ್ ಆಗಿಯೂ ಸಾಥ್ ನೀಡಿರುವ ಯುವ ಕ್ರಿಕೆಟ್ ತಾರೆ… ಭಾರತ ತಂಡದ ಮುಂದಿನ ನಾಯಕ ಎಂದೇ ಬಿಂಬಿತವಾಗಿರುವ ಇವರು ಕನ್ನಡಿಗರು ಎನ್ನುವುದು ಮತ್ತೊಂದು ಹೆಮ್ಮೆ.
ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳ ಟಿ20 ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದ ಅವರು, 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಸೋತರೂ ವೈಯಕ್ತಿಕವಾಗಿ ಮೊದಲ ಮತ್ತು ಮೂರನೇ ಪಂದ್ಯದಲ್ಲಿ ಸಾಲೀಡ್ ಆಟ ಆಡಿದರು. 5 ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಅವರು ಮೊದಲ ಪಂದ್ಯದಲ್ಲಿ ಅಜೇಯ 88ರನ್, 3ನೇ ಮ್ಯಾಚಲ್ಲಿ 112ರನ್ ಮಾಡಿದರು. ಇನ್ನು ಮೂರನೇ ಮ್ಯಾಚಲ್ಲೂ ಭಾರತ ಸೋತರು ರಾಹುಲ್ ಮೂರು ದಾಖಲೆಗಳನ್ನು ಮಾಡಿದರು.
21 ವರ್ಷದ ಹಿಂದೆ ದ್ರಾವಿಡ್ ಸೃಷ್ಟಿಸಿದ ಇತಿಹಾಸ : ದಿ ವಾಲ್ ಖ್ಯಾತಿಯ ಕ್ರಿಕೆಟಿಗ, ಟೀಮ್ ಇಂಡಿಯಾದ ಮಾಜಿ ನಾಯಕ ಕನ್ನಡಿಗ ರಾಹುಲ್ ದ್ರಾವಿಡ್ 21 ವರ್ಷದ ಹಿಂದೆ ಸಾಧಿಸಿದ್ದನ್ನು ಕನ್ನಡಿಗರೇ ಆದ ರಾಹುಲ್ ಸಾಧಿಸಿದ್ದಾರೆ. 1999ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ವಿಶ್ವಕಪ್ನಲ್ಲಿ ಟೌಂಟೋನ್ನಲ್ಲಿ ಶ್ರೀಲಂಕಾ ವಿರುದ್ಧ ದ್ರಾವಿಡ್ ಶತಕ (145) ಸಿಡಿಸಿದ್ದರು. ಅದು ಏಷ್ಯಾದಿಂದ ಹೊರಗಡೆ ಭಾರತೀಯ ವಿಕೆಟ್ ಕೀಪರ್ – ಬ್ಯಾಟ್ಸ್ ಮನ್ ಬಾರಿಸಿದ ಮೊದಲ ಶತಕವಾಗಿತ್ತು. ದ್ರಾವಿಡ್ಗೂ ಮೊದಲು ಹಾಗೂ ದ್ರಾವಿಡ್ ನಂತರ ಕೂಡ ಏಷ್ಯಾದಿಂದ ಆಚೆಗೆ ಯಾವೊಬ್ಬ ಭಾರತೀಯ ವಿಕೆಟ್ ಕೀಪರ್ ಕೂಡ ಶತಕ ಬಾರಿಸಿರಲಿಲ್ಲ. ಇದೀಗ ನ್ಯೂಜಿಲೆಂಡ್ನಲ್ಲಿ ಕೆ.ಎಲ್ ರಾಹುಲ್ ಆ ಸಾಧನೆಯನ್ನು ಮಾಡಿದ್ದಾರೆ.
ನ್ಯೂಜಿಲೆಂಡ್ನಲ್ಲಿ 5ನೇ ಕ್ರಮಾಂಕದಲ್ಲಿ ಶತಕ : ನ್ಯೂಜಿಲೆಂಡ್ ಅಂಗಳದಲ್ಲಿ 5ನೇ ಹಾಗೂ ಅದಕ್ಕಿಂತ ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದು ಶತಕ ಸಿಡಿಸಿದ 2ನೇ ಭಾರತೀಯ ಆಟಗಾರ ಎಂಬ ಕೀರ್ತಿಗೂ ರಾಹುಲ್ ಪಾತ್ರರಾಗಿದ್ದಾರೆ. 2015ರ ವಿಶ್ವಕಪ್ನಲ್ಲಿ ಸುರೇಶ್ ರೈನಾ ಜಿಂಬಾಬ್ವೆ ವಿರುದ್ಧ ಶತಕ ಸಿಡಿಸಿದ್ದರು.
ಏಕೈಕ ಬ್ಯಾಟ್ಸ್ಮನ್ : ಇನ್ನು ನ್ಯೂಜಿಲೆಂಡ್ ವಿರುದ್ಧ 5ನೇ ಅಥವಾ ಅದಕ್ಕಿಂತ ಕೆಳಕ್ರಮಾಂಕದಲ್ಲಿ ಕ್ರೀಸಿಗಿಳಿದು ಸೆಂಚುರಿ ಸಿಡಿಸಿದ ಏಕೈಕ ಆಟಗಾರ ಎಂಬ ದಾಖಲೆಯೂ ಇದೀಗ ಕನ್ನಡ ಕೆ.ಎಲ್ ರಾಹುಲ್ ಅವರದ್ದಾಗಿದೆ.
ದ್ರಾವಿಡ್ ಸಾಧಿಸಿದ್ದನ್ನು, ಧೋನಿ ಮಾಡದ್ದನ್ನು ಮಾಡಿದ ರಾಹುಲ್..! ಅಷ್ಟೇ ಅಲ್ಲ ಮತ್ತೂ ಎರಡು ರೆಕಾರ್ಡ್..!
Date: