ಅದೃಷ್ಟವಿದ್ದರೆ ಯಾರು ಏನ್ ಬೇಕಾದ್ರು ಆಗಬಹುದು. ಇಂದು ಏನೂ ಅಲ್ಲದವರು ನಾಳೆ ಬೆಳಗ್ಗಾಗುವುದರಲ್ಲಿ ದೊಡ್ಡ ಸ್ಟಾರ್ ಆಗಬಹುದು..! ಆಗರ್ಭ ಶ್ರೀಮಂತನಾಗಿ ಮೆರೆಯಬಹುದು. ಅದೃಷ್ಟ ಲಕ್ಷ್ಮಿ ಒಂದ್ಸಲ ಕೈ ಹಿಡಿಯುವ ಮನಸ್ಸು ಮಾಡಿದ್ರೆ ಹೊತ್ತುಗೊತ್ತು ಇಲ್ಲದೆ ಒಲಿಯುತ್ತಾಳೆ. ಹಾಗೆಯೇ ಸಾಲದ ಶೂಲಕ್ಕೆ ಸಿಲುಕಿ ನಲುಗಿದ್ದ ಕೂಲಿಕಾರ್ಮಿಕ ಈಗ 12 ಕೋಟಿ ಒಡೆಯನಾಗಿದ್ದಾನೆ..! ಅದೂ ರಾತ್ರೋ ರಾತ್ರಿ..!
ಹೌದು, ಕೂತುಪರಂಬದ ನಿವಾಸಿ ಕಣ್ಣೂರಿನ ಪೊರುಣ್ಣನ್ ರಾಜನ್ ಹೀಗೆ ರಾತ್ರೋ ಬೆಳಗಾಗುವುದರಲ್ಲಿ ಕೋಟಿ ಒಡೆಯನಾದವರು. ಬ್ಯಾಂಕಿಗೆ ಸಾಲ ಪಡೆದುಕೊಳ್ಳಲು ಹೋಗಿದ್ದ ರಾಜನ್ ಬ್ಯಾಂಕಿನಿಂದ ವಾಪಾಸ್ ಬರುವಾಗ ಪಡೆದುಕೊಂಡ ಕೇರಳ ರಾಜ್ಯದ ಲಾಟರಿ ಟಿಕ್ಕೆಟ್ಟೊಂದು ರಾಜನ್ ಜೀವನದ ಚಿತ್ರಣವನ್ನೇ ಬದಲಿಸಿದೆ. ರಾಜನ್ ಪಡೆದ ಆ ಟಿಕೆಟಿಗೆ ಬರೋಬ್ಬರಿ 12 ಕೋಟಿ ರೂ ಬಂಪರ್ ಲಾಟರಿಯೇ ಹೊಡೆದಿದೆ.
ಒಂದಲ್ಲ ಒಂದು ದಿನ ಅದೃಷ್ಟ ಲಕ್ಷ್ಮಿ ಕೈಹಿಡಿಯುತ್ತಾಳೆಂದು ದೃಢಮನಸ್ಸಿನಲ್ಲಿದ್ದ ರಾಜನ್ ಲಾಟರಿ ಟಿಕೆಟ್ ಖರೀದಿಸುತ್ತಲೇ ಇದ್ದರು. ಈ ಚಟಕ್ಕೆ ಮನೆಯವರು ದಿನನಿತ್ಯ ನಿಂದಿಸುತ್ತಿದ್ದರು. ಯಾರ ಗಮನಕ್ಕೂ ಬಾರದಂತೆ ಟಿಕೆಟ್ ತೆಗೆದುಕೊಳ್ಳುತ್ತಿದ್ದರು. ಸೋಮವಾರ ಪೇಪರ್ ಹಿಡಿದು ಲಾಟರಿ ನಂಬರ್ ಹುಡುಕಾಡುತ್ತಿದ್ದ ರಾಜನ್ನಿಗೆ ಶಾಕ್ ಆಗಿದೆ…! ತಾನು ಪಡೆದ ಲಾಟರಿ ಟಿಕೆಟಿಗೆ ಅದೃಷ್ಟ ಖುಲಾಯಿಸಿದ್ದು, ಬರೋಬ್ಬರು 12 ಕೋಟಿ ರೂ ಒಡೆಯರಾಗಿದ್ದರು.
300 ರೂ ಟಿಕೆಟ್ ಖರೀದಿಸಿ ಕೋಟ್ಯಾಧಿಪತಿಯಾಗಿರುವ ಸುದ್ದಿ ತಿಳಿದು ರಾಜನ್, `ನಮಗೆ ಹೀಗೆ ಬಂಪರ್ ಲಾಟರಿಯಲ್ಲಿ ಕೋಟ್ಯಂತರ ರೂ ಬರುತ್ತದೆ ಎಂದು ನಾನು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಇದೀಗ ನನಗೆ ತುಂಬಾ ಖುಷಿಯಾಗುತ್ತಿದೆ. ನಾವೀಗ ನಮ್ಮೆಲ್ಲ ಸಾಲವನ್ನೂ ತೀರಿಸಿ, ಮನೆ ಕಟ್ಟಿಕೊಂಡು, ಮಕ್ಕಳನ್ನು ಚೆನ್ನಾಗಿ ಓದಿಸಬಹುದು. ದುಡ್ಡಿಲ್ಲದಿದ್ದರೂ ಲಾಟರಿ ಟಿಕೆಟ್ ಕೊಳ್ಳುವ ಅಭ್ಯಾಸವಿದ್ದ ನನಗೆ ನನ್ನ ಹೆಂಡತಿ ಬೈಯುತ್ತಿದ್ದಳು. ಈಗ ಆಕೆಯೂ ಖುಷಿಯಾಗಿದ್ದಾಳೆ’ ಎಂದು ಸಂತಸ ಹಂಚಿಕೊಂಡಿದ್ದಾರೆ.
ರಾತ್ರೋ ರಾತ್ರಿ ಕೂಲಿ ಕಾರ್ಮಿಕ 12 ಕೋಟಿ ಒಡೆಯನಾದ ರಿಯಲ್ ಸ್ಟೋರಿ!
Date: