ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂಡಿಯನ್ ಪ್ರೀಮಿಯರ್ ಲೀಗ್ ನ ಅತ್ಯಂತ ಬಲಾಢ್ಯ ತಂಡಗಳಲ್ಲೊಂದು. ಟೀಮ್ ಇಂಡಿಯಾದ ನಾಯಕ , ರನ್ ಮಷಿನ್ ವಿರಾಟ್ ಕೊಹ್ಲಿ ಆರ್ ಸಿ ಬಿಯನ್ನು ಮುನ್ನಡೆಸುತ್ತಿರುವುದೇ ದೊಡ್ಡ ಬಲ..! ಎ ಬಿ ಡಿವಿಲಿಯರ್ಸ್ ಸೇರಿದಂತೆ ಸ್ಟಾರ್ ಆಟಗಾರರ ದಂಡೇ ನಮ್ಮ ಆರ್ ಸಿಬಿಯಲ್ಲಿದೆ. ಆದರೆ ಪ್ರತೀ ವರ್ಷ ಅಭಿಮಾನಿಗಳು ‘ಈ ಸಲ ಕಪ್ ನಮ್ದೆ’ ಎಂದು ಪ್ರೀತಿಯಿಂದ ಐಪಿಎಲ್ ಸೀಸನ್ ಅನ್ನು ಬರಮಾಡಿಕೊಳ್ಳುವುದು ಬಿಟ್ಟರೆ , ತಂಡದ ಪ್ರದರ್ಶನದಿಂದ ಬರೀ ನಿರಾಸೆಯೇ ಮೂಡಿದೆ.
ಕಳೆದ 12 ಸೀಸನ್ ಗಳಲ್ಲಿ ಒಮ್ಮೆಯೂ ಚಾಂಪಿಯನ್ ಆಗದ ಆರ್ ಸಿ ಬಿ ಈ ಬಾರಿ ಚಾಂಪಿಯನ್ ಆಗಲೇ ಬೇಕೆಂದು ಪಣತೊಟ್ಟಿದೆ.
ಈ ನಡುವೆ ದಿಢೀರ್ ಎಂಬಂತೆ ಮಹತ್ತರ ಬದಲಾವಣೆಯನ್ನು ಮಾಡಿದೆ. ಇದ್ದಕ್ಕಿದ್ದಂತೆ ಸೋಶಿಯಲ್ ಮೀಡಿಯಾದ ಹಳೆಯ ಪೋಸ್ಟ್ ಗಳನ್ನೆಲ್ಲಾ ಡಿಲೀಟ್ ಮಾಡಿದ್ದ ಆರ್ ಸಿಬಿ ಇಂದು ಹೊಸ ಲೋಗೋವನ್ನು ಪರಿಚಯಿಸಿದೆ. ಕಳೆದ ಬಾರಿ ಹೆಸರಿಂದ ತೆಗೆದಿದ್ದ ಬೆಂಗಳೂರು ಎಂಬ ಪದವನ್ನು ಮತ್ತೆ ಸೇರಿಸಲಾಗಿದೆ. ಹೀಗೆ ಹೊಸತನದೊಂದಿಗೆ ಈ ಸಲ ನಮ್ಮ ಆರ್ ಸಿ ಬಿ ಕಣಕ್ಕಿಳಿಯುತ್ತಿದೆ.
ಮಾರ್ಚ್ 29 ರಿಂದ ಐಪಿಎಲ್ ಹಬ್ಬ ಶುರುವಾಗಲಿದ್ದು, ಈ ಸಲ ಕಪ್ ನಮ್ಮದೇ ಆಗಲಿ ಎನ್ನುವುದು ಆರ್ ಸಿ ಬಿ ಅಭಿಮಾನಿಗಳ ಮಹದಾಸೆ ಹಾಗೂ ಹಾರೈಕೆ.