ವಿಶ್ವದಲ್ಲಿ ಅನೇಕ ನಿಗೂಢ ಸ್ಥಳಗಳಿವೆ. ನೀವು ಕೆಲವು ಸ್ಥಳಗಳನ್ನು ಬಹುಶಃ ನೋಡಿರಲ್ಲ. ಅಂತಾ ಕೆಲವು ಸ್ಥಳಗಳು ನಮ್ಮ ಗೋವಾದಲ್ಲೇ ಇವೆ..! ಅವುಗಳ ಕಿರು ಪರಿಚಯ ಇಲ್ಲಿದೆ.
ಇಗೋರ್‌ಶೆಮ್ ಬಾಂದ್ : ಗೋವಾದ ಈ ಪ್ರೇದೇಶದಲ್ಲೊಂದು ಹಳೆಯದಾದ ಚರ್ಚ್ ಇದೆ. ಆ ಚರ್ಚ್ ಹಿಂಬದಿ ರಸ್ತೆಯಲ್ಲಿ ಮಧ್ಯಾಹ್ನ 2 ರಿಂದ 3 ಗಂಟೆ ವೇಳೆ ಹೆಚ್ಚಾಗಿ ದೆವ್ವಗಳು ಓಡಾಡುವುದು ಕಾಣುತ್ತವಂತೆ..! ಈ ರಸ್ತೆಯಲ್ಲಿ ಸಂಚಾರ ಮಾಡುವವರೂ ಇದ್ದಕ್ಕಿದ್ದಂತೆ ಮೈ ಮೇಲೆ ದೆವ್ವ ಬಂದವರಂತೆ ಮಾಡುತ್ತಾರೆ. ಆಡುತ್ತಾರೆ ಎಂದು ಅಲ್ಲಿನ ಸ್ಥಳೀಯರು ಹೇಳುತ್ತಾರೆ… ಇನ್ನು ಹೀಗಿರುವಾಗ ರಾತ್ರಿ ಕಥೆಯನ್ನು ನೀವೇ ಊಹಿಸಿಕೊಳ್ಳಿ.
ಬೆತಕೋಲ್ ರಸ್ತೆ : ಈ ರಸ್ತೆ ಸದಾ ತಂಪಾಗಿರುತ್ತದೆ. ಈ ರಸ್ತೆಯಲ್ಲಿಯಲ್ಲಿಯೂ ಅಗೋಚರವೊಂದು ನಡೆಯುತಗ್ತದೆಯಂತೆ…! ಇಲ್ಲೊಬ್ಬ ಪುಟ್ಟ ಬಾಲಕ ರಸ್ತೆಯ ನಡುವೆಯೇ ನಿಂತು ಕಿರುಚುತ್ತಾ, ಅಳುತ್ತಿರುತ್ತಾನಂತೆ! ಅಯ್ಯೋ ಏನಾಯಿತು ಎಂದು ವಿಚಾರಿಸುವ ವೇಳೆಗೆ ಹೋದವರಿಗೆ ಆ್ಯಕ್ಸಿಡೆಂಟ್ ಆಗುತ್ತದೆಯಂತೆ. ಈಗಲೂ ಈ ಬಗ್ಗೆ ತನಿಖೆ ನಡೆಯುತ್ತಲೇ ಇದ್ದು, ನಿಗೂಢವಾಗಿದೆಯಂತೆ..!
ಸಲಿಗೋ ವಿಲೇಜ್ : ಚರ್ಚ್‌ಗಳಿಗೆ ಫೇಮಸ್ ಆಗಿರುವ ಜಾಗವಿದು. ಈ ಪ್ರದೇಶದಲ್ಲಿ ದೊಡ್ಡ ಆಲದ ಮರವಿದ್ದು, ಅದರ ಬಳಿ ಕ್ರಿಸ್ಟಲಿನಾ ಎಂಬ ಆತ್ಮ ಇಡೀ ಗ್ರಾಮವನ್ನೇ ಕಾಡುತ್ತದೆಯಂತೆ. ಅಷ್ಟೇ ಅಲ್ಲದೇ ರಾತ್ರಿ ಹೊತ್ತಿನಲ್ಲಿ ಮರದ ಸುತ್ತ ಇದನ್ನು ಯಾರೇ ನೋಡಿದರೂ ಅವರಿಗೆ ಗಾಯಗಳಾಗೋದು ಸಾಮಾನ್ಯವಂತೆ.
NH-17 ಮುಂಬೈ- ಗೋವಾ ಹೆದ್ದಾರಿ : ರಾಷ್ಟ್ರದಲ್ಲಿ ಅತೀ ಹೆಚ್ಚು ಅಪಘಾತಗಳಾಗುವ ಹೆದ್ದಾರಿಯಲ್ಲಿ NH-17 ಮುಂಬೈ- ಗೋವಾ ಹೆದ್ದಾರಿ ಕೂಡ ಒಂದು. ಈ ದಾರಿಯಲ್ಲಿ ಮಧ್ಯಾಹ್ನ 12 ಗಂಟೆ ನಂತರ ಮಾಂಸವನ್ನು ಕೊಂಡೊಯ್ಯುವಂತಿಲ್ಲವಂತೆ..! ಅಪ್ಪಿ ತಪ್ಪಿ ಈ ರಸ್ತೆಯಲ್ಲಿ ಆ ವೇಳೆಯಲ್ಲಿ ಮಾಂಸವನ್ನು ಕೊಂಡೋಯ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಮಾತು ಅಲ್ಲಿನ ಜನರದ್ದು..!
ಡಿ ಮೆಲ್ಲೋ ಮನೆ: ಸ್ಯಾಂಟೆಮಾಲ್ ಪ್ರದೇಶದಲ್ಲಿರುವ ಹಳೆ ಬಂಗಲೆಡಿ ಮೆಲ್ಲೋ ಮನೆ. ಇಲ್ಲಿ ರಾತ್ರಿ ಸಮಯದಲ್ಲಿ ಮನೆಯಿಂದ ಮಹಿಳೆಯೊಬ್ಬಳು ಕಿರುಚಾಡುವುದು ಹಾಗೂ ಕಿಟಕಿ ಬಾಗಿಲು ಬಡಿಯುವ ಶಬ್ಧ ಕೇಳಿಸುತ್ತದೆ. ಈ ಬಂಗಲೆಯಲ್ಲಿ ಸಹೋದರರಿಬ್ಬರು ವಾಸವಿದ್ದು, ಆಸ್ತಿ ವಿಷಯಕ್ಕೆ ಜಗಳವಾಡಿ ಸತ್ತಿದ್ದಾರೆ. ಈ ಮನೆ ಮಾರಾಟ ಮಾಡುವ ಯತ್ನವೂ ವಿಫಲವಾಗಿದೆ ಎನ್ನುವುದು ಜನರ ಮಾತು..!