ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಗ್ರಾಮದ ಸ್ಟೋರಿ ಹೇಳಿದಾಕೆಯ ಬಗ್ಗೆ ಗೊತ್ತೇ?

Date:

ಪಶ್ಚಿಮ ಬಂಗಾಳದ ಸುಂದರ್ಬನ್ಸ್​​​ನ ಅನೊಯರಾ ಖತೂನ್ಳ ಬದುಕಿನ ಸಾಹಸಗಾಥೆ ಇದು. ಅನೊಯರಾ ಅವರಿಗೆ ಎರಡು ಬಾರಿ ವಿಶ್ವಸಂಸ್ಥೆಯಲ್ಲಿ ಮಾತನಾಡು ಅವಕಾಶ ಪಡೆದಿದ್ದವರು. ಖುದ್ದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಾನ್ ಕಿ ಮೂನ್, ಬಿಲ್ ಮತ್ತು ಮೆಲಿಂದಾ ಗೇಟ್ಸ್ ಅವರಿಂದ ಆಹ್ವಾನ ಸ್ವೀಕರಿಸಿದ್ದ ಅನೊಯರಾ ಈಗ ಪರಗಣ ಜಿಲ್ಲೆಯ ಸಂದೇಶ್ಖಲಿ ಗ್ರಾಮದ ಹೀರೋ ಅಂದ್ರೆ ತಪ್ಪಾಗಲಿಕ್ಕಿಲ್ಲ.
ಅಂತಾರಾಷ್ಟ್ರೀಯ ಪ್ರೇಕ್ಷಕರೆದುರು ತಮ್ಮ ಗ್ರಾಮದ ಕಥೆ ಹೇಳುವುದು ಮತ್ತು ಜಗತ್ತಿನ ಮೂಲೆ ಮೂಲೆಗಳಲ್ಲಿ ನಡೆಯುವ ಘಟನೆಗಳ ಬಗ್ಗೆ ಕೇಳುತ್ತ ಕೇಳುತ್ತ ತಾವು ಇನ್ನಷ್ಟು ಸ್ಟ್ರಾಂಗ್ ಕಾರ್ಯಕರ್ತೆ ಆಗಿದ್ದೇನೆ” ಎನ್ನುತ್ತಾರೆ ಅನೊಯರಾ ಅವರು. ಅಂತಾರಾಷ್ಟ್ರೀಯ ಮಟ್ಟದ ಎನ್ ಜಿಓ ವೊಂದರ ಸಲಹೆ ಮೇರೆಗೆ ಅನೊಯರಾ ಮಕ್ಕಳ ರಕ್ಷಣೆಗಾಗಿ ಹೋರಾಟ ನಡೆಸುತ್ತಿದ್ದಾರೆ.
ಅನೊಯರಾ ಈಗ ಮಕ್ಕಳ 80 ಗುಂಪುಗಳನ್ನವರು ಮುನ್ನಡೆಸುತ್ತಿದ್ದಾರೆ, ಪ್ರತಿ ಗುಂಪಿನಲ್ಲೂ 10ರಿಂದ12 ಮಕ್ಕಳಿದ್ದಾರೆ. ಬಾಲ್ಯವಿವಾಹ, ಮಾನವ ಕಳ್ಳಸಾಗಣೆ, ಬಾಲಕಾರ್ಮಿಕ ಪದ್ಧತಿ ವಿರುದ್ಧ ಇವರೆಲ್ಲ ಸಮರ ಸಾರಿದ್ದಾರೆ. ಅಷ್ಟೇ ಅಲ್ಲ ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕಾಗಿಯೂ ಹೋರಾಟ ಮಾಡುತ್ತಿದ್ದಾರೆ.
ನೋಡಿ, ಸಾಮಾಜಿಕ ದೌರ್ಜನ್ಯಗಳ ವಿರುದ್ಧ ಮೊದಮೊದಲು ಅನೊಯರಾ ಧ್ವನಿಯೆತ್ತಿದಾಗ ಗ್ರಾಮದಲ್ಲಿ ಯಾರೂ ಅವಳನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆಗ ಅವರು ಬಹಳಷ್ಟು ಟೀಕೆಗಳನ್ನು ಎದುರಿಸಬೇಕಾಯ್ತು. ಆದ್ರೆ ಈಗ ಪರಿಸ್ಥಿತಿ ಬದಲಾಗಿದೆ, ಜನರೀಗ ಅವರ ಮಾತುಗಳನ್ನು ಆಲಿಸುತ್ತಾರೆ.
2016ರಲ್ಲಿ ವಿಶ್ವಸಂಸ್ಥೆಯಲ್ಲಿ ನಡೆದ ಸಸ್ಟೇನೇಬಲ್ ಡೆವಲಪ್ಮೆಂಟ್ ಗೋಲ್ ಸಮಿಟ್’ನಲ್ಲಿ ಅನೊಯರಾ ಪಾಲ್ಗೊಂಡಿದ್ದರು. 2017ರಲ್ಲಿ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಭಾರತದ ಮಕ್ಕಳನ್ನು ಪ್ರತಿನಿಧಿಸಿದ್ದು ಅಲ್ಲಿ ಮಕ್ಕಳ ಹಕ್ಕುಗಳಿಗಾಗಿ ವಾದ ಮಾಡಿದರು. ಎಲ್ಲರಿಂದಲೂ ಶಭಾಷ್ ಗಿರಿ ಪಡೆದರು.
ವಿಶ್ವಸಂಸ್ಥೆಯಲ್ಲಿ ಅನೊಯರಾ, ಮುಖ್ಯವಾಗಿ ಕೆಲಸ ಹಾಗೂ ಮದುವೆ ಹೆಸರಲ್ಲಿ ನಡೆಸುತ್ತಿರುವ ಕಳ್ಳಸಾಗಣೆ ಬಹುದೊಡ್ಡ ಸಮಸ್ಯೆ. ತಾವು ಕೂಡ ಅಂತಹ ಸ್ಥಿತಿ ಎದುರಿಸಿರುವುದರಿಂದ ಅದು ಎಷ್ಟು ಭಯಾನಕ ಎಂಬುದರ ಅರಿವಿದೆ” ಎಂದು ಅನೊಯರಾ ಅವರು ಪ್ರತಿಪಾದಿಸಿ, ಸಾಮಾಜಿಕ ಪಿಡುಗಳ ವಿರುದ್ಧ ಹೋರಾಡುವ ದಿಟ್ಟ ನಾಯಕಿ ಎನ್ನುವುದನ್ನು ರುಜುವಾತುಪಡಿಸಿದರು.
ಅನೊಯರಾ ಅವರು, ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ರೂ ಅದನ್ನೆಲ್ಲ ಮೆಟ್ಟಿ ನಿಂತು ಸಮಾಜದ ಉದ್ಧಾರಕ್ಕಾಗಿ ಶ್ರಮಿಸುತ್ತಿರುವ ವಿಶ್ವದ ಅನೇಕ ನಾಯಕರನ್ನು ಅನೊಯರಾ ಭೇಟಿಯಾಗಿದ್ದಾರೆ. ಇರಾಕ್ನ 23 ವರ್ಷದ ಯುವತಿ ನಾದಿಯಾ ಮುರದ್ ಅವರ ಭೇಟಿ ಅನೊಯರಾ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತಿದೆ. ಐಸಿಸ್ ಕೈಗೆ ಸಿಕ್ಕು ನಲುಗಿದ್ದ ನಾದಿಯಾ ಈಗ ಗೌರವ ರಾಯಭಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಂತೆ ಅನೊಯರಾ ಕೂಡ ಮುನ್ನಡೆಯುತ್ತಿದ್ದಾರೆ.
ಏನೇ ಹೇಳಿ, ಅನೊಯರಾ ಅವರ ಹೋರಾಟ ನಿಜಕ್ಕೂ ಶ್ಲಾಘನೀಯ. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ವಿಶ್ವಸಂಸ್ಥೆಯನ್ನು ಪ್ತತಿನಿಧಿಸಿದ್ದ ಅವರ ಹೋರಾಟ ಮತ್ತು ಛಲವನ್ನು ಮೆಚ್ಚಲೇಬೇಕು. ಎಲ್ಲ ಸಾಮಾಜಿಕ ಹೋರಾಟಗಾರ್ತಿಯರಿಗೆ ಅನೊರಯಾ ಅವರು ಅತಿ ದೊಡ್ಡ ಪ್ರೇರಣೆಯೂ ಹೌದು.

Share post:

Subscribe

spot_imgspot_img

Popular

More like this
Related

ವಿಪಕ್ಷಗಳಿಗೆ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರಿಲೀಸ್ ಮಾಡಿದ ಸಿಎಂ ಸಿದ್ದರಾಮಯ್ಯ!

ವಿಪಕ್ಷಗಳಿಗೆ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರಿಲೀಸ್ ಮಾಡಿದ ಸಿಎಂ ಸಿದ್ದರಾಮಯ್ಯ! ಬೆಂಗಳೂರು:...

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ ಜಾಗತಿಕವಾಗಿ...

ತುಳಸಿ ಟೀ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು

ತುಳಸಿ ಟೀ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು ಭಾರತದಲ್ಲಿ ಪವಿತ್ರವೆಂದು ಪರಿಗಣಿಸಲ್ಪಡುವ ತುಳಸಿ...

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್!

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್! ಬೆಂಗಳೂರು:- ಆಟೋಗೆ ಕಸ...