ಆಕೆ ಪ್ರೀತಿಸಿ ಮದುವೆಯಾದವಳು..! ಅವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿ ಇಬ್ಬರು ಮಕ್ಕಳಿದ್ದಾರೆ. ಆದರೆ ಮಕ್ಕಳು, ಗಂಡನನ್ನು ಬಿಟ್ಟು ಹೊಸ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ..!
ಇಂತಹದ್ದೊಂದು ಪ್ರೇಮ್ ಕಹಾನಿ ನಡೆದಿರುವುದು ಕಾರ್ಕಳದಲ್ಲಿ. ಇಬ್ಬರು ಮಕ್ಕಳ ತಾಯಿ ಪ್ರೀತಿಸಿ ಮದುವೆಯಾದ ಗಂಡನನ್ನು ಬಿಟ್ಟು ಪರಾರಿಯಾಗಿದ್ದು, ಪ್ರಿಯರಕರ ಜೊತೆ ಹೋಗಿರುವ ಶಂಕೆ ವ್ಯಕ್ತವಾಗಿದೆ.
ತಾಲೂಕಿನ ಸಾಣೂರು ಗ್ರಾಮದ ಚಿಕ್ಕಬೆಟ್ಟು ನಿವಾಸಿ ಪ್ರಶಾಂತ್ ಪೂಜಾರಿ ಪತ್ನಿ ಸಂಗೀತ (೩೦) ನಾಪತ್ತೆಯಾದ ಗೃಹಿಣಿ. ಕಳೆದ 10 ವರ್ಷದ ಹಿಂದೆ ಪ್ರಶಾಂತ್ ಮತ್ತು ಸಂಗೀತ ಪ್ರೀತಿಸಿ, ಕುಟುಂಬದವರ ವಿರೋಧದ ನಡುವೆಯೂ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಇತ್ತೀಚೆಗೆ ಪ್ರಶಾಂತ್ ಪತ್ನಿಯನ್ನು ಬಿಟ್ಟು ಉದ್ಯೋಗ ನಿಮಿತ್ತ ಬೆಂಗಳೂರಿಗೆ ತೆರಳಿದ್ದರು. ಪತಿ ಬೆಂಗಳೂರಿಗೆ ತೆರಳಿದ ನಂತರ ಸಂಗೀತಾಗೆ ಸ್ಥಳೀಯ ಯುವಕನೊಂದಿಗೆ ಸ್ನೇಹ ಬೆಳೆದಿತ್ತು. ಅದು ತೀರಾ ಸಲಿಗೆ, ಪ್ರೀತಿಗೂ ತಿರುಗಿ ಆತನ ಜೊತೆಯೇ ಪರಾರಿಯಾಗಿದ್ದಾಳೆ ಎನ್ನಲಾಗಿದೆ. ಕಾರ್ಕಳ ನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.
ಪ್ರೀತಿಸಿ ಮದುವೆಯಾದ ಗಂಡನನ್ನೇ ಬಿಟ್ಟು ಪ್ರಿಯಕರನೊಂದಿಗೆ ಪರಾರಿಯಾದಳು..!
Date: