ಸೋತು ಗೆದ್ದ ಉದ್ಯಮಿಯ ಸ್ಫೂರ್ತಿದಾಯಕ ಸ್ಟೋರಿ.!

Date:

ಹ್ರಿತೇಶ್ ಲೋಹಿಯಾ. ಬದುಕಿನಲ್ಲಿ ಸೋತು ಗೆದ್ದ ಉದ್ಯಮಿ. ಈಗ್ಗೆ 10 ವರ್ಷಗಳ ಹಿಂದೆ ಯಾವ ಕೆಲಸ ಮಾಡಿದ್ರು ಬರೀ ಸೋಲೇ ಇವರದ್ದಾಗಿತ್ತು. ಆದರೂ ಇವರು ಛಲಬಿಡದೆ ಆತ್ಮವಿಶ್ವಾಸದಿಂದ ಗುಜರಿ ವಸ್ತುಗಳ ಮರುಬಳಕೆಗೆ ಕೈ ಹಾಕಿ ಇಂದು ಅತಿ ಹೆಚ್ಚು ಪ್ರಮಾಣದಲ್ಲಿ ರಫ್ತು ಮಾಡುತ್ತಿರುವ ಕಂಪನಿಯ ಮಾಲೀಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶತಕೋಟಿ ವೀರ ಎನಿಸಿಕೊಂಡಿದ್ದಾರೆ.

ಹ್ರಿತೇಶ್ ಜೀವನಗಾಥೆ ನೋಡುವುದಾದರೆ, ಮೊದಲು ಟೆಕ್ಸ್ಟೈಲ್ ಕೆಮಿಕಲ್ ಫ್ಯಾಕ್ಟರಿ ಆರಂಭಿಸಿ ನಷ್ಟ ಅನುಭವಿಸಿದ್ರು. ಅದಾದ್ಮೇಲೆ ಹರಳು ಕತ್ತರಿಸುವ ಉದ್ಯಮ, ವಾಶಿಂಗ್ ಪೌಡರ್ ಉತ್ಪಾದನೆ ಹಾಗೂ ಮಾರಾಟದಲ್ಲಿ ತೊಡಗಿಕೊಂಡ್ರು. ಅದು ಕೂಡ ಅವರ ಕೈಹಿಡಿಯಲಿಲ್ಲ. ನಂತರ ಷೇರು ವ್ಯವಹಾರದಲ್ಲೂ ಅವರು ಕೋಟ್ಯಾಂತರ ರೂಪಾಯಿ ಕಳೆದುಕೊಳ್ಳಬೇಕಾಯ್ತು. ಕೊನೆಗೆ ತುತ್ತು ಅನ್ನಕ್ಕೂ ಪರದಾಡುವಂಥ ಸ್ಥಿತಿ ನಿರ್ಮಾಣವಾಗಿತ್ತು.
ನೋಡಿ, ಹ್ರಿತೇಶ್ ಬಳಿ ತಾವು ಆರಂಭಿಸಿದ ಎಲ್ಲಾ ಉದ್ದಿಮೆಗಳಿಗೆ ಬಳಸಿದ ಕಚ್ಚಾ ವಸ್ತುಗಳ ತ್ಯಾಜ್ಯ ಬಿಟ್ರೆ ಅವರ ಬಳಿ ಬೇರೆ ಏನೂ ಇರಲಿಲ್ಲ. ಹೊಟ್ಟೆ ಪಾಡಿಗಾಗಿ ಅದನ್ನೇ ಮಾರಿಬಿಡೋಣ ಎಂದ್ರೆ ಕೊಂಡುಕೊಳ್ಳುವವರೇ ಇರಲಿಲ್ಲ. ಆಗಲೇ ಅವರಿಗೆ ಹೊಳೆದಿದ್ದು ತ್ಯಾಜ್ಯ ಮರುಬಳಕೆಯ ಐಡಿಯಾ. ಬಂಡವಾಳ ಹೂಡಲು ನಯಾಪೈಸೆ ಕೈಯಲ್ಲಿ ಇಲ್ಲದೇ ಇದ್ದಿದ್ರಿಂದ ಇದೊಂದೇ ಅವರಿಗಿದ್ದಿದ್ದ ಕೊನೆಯ ಅವಕಾಶ.
ಹಾಗಾಗಿ, ಹ್ರಿತೇಶ್, ತ್ಯಾಜ್ಯದಿಂದ್ಲೇ ಆದಾಯ ಗಳಿಸಲು ಮುಂದಾದ್ರು. 2005ರಲ್ಲಿ ಪತ್ನಿ ಹೆಸರಿನಲ್ಲಿ ಪ್ರೀತಿ ಇಂಟರ್ನ್ಯಾಶನಲ್ ಅನ್ನೋ ಕಂಪನಿಯನ್ನು ಆರಂಭಿಸಿದ್ರು. ಈ ಕಂಪನಿಯಲ್ಲಿ ತ್ಯಾಜ್ಯಗಳಿಂದಲೇ ವಿವಿಧ ವಸ್ತುಗಳನ್ನು ತಯಾರಿಸಲಾಗುತ್ತದೆ. ಯಂತ್ರಗಳನ್ನು ಬಳಸದೆ ಇವನ್ನೆಲ್ಲ ಕೈಯಲ್ಲೇ ಮಾಡುವುದು ವಿಶೇಷ. ಹಳೆಯ ಗೋಣಿಚೀಲದಿಂದ ಹ್ಯಾಂಡ್ಬ್ಯಾಗ್ ತಯಾರಿಸ್ತಾರೆ. ಜೊತೆಗೆ ಮಿಲಿಟರಿ ಟೆಂಟ್ಗಳು, ಡೆನಿಮ್ ಪ್ಯಾಂಟ್ಗಳು ಸೇರಿದಂತೆ ಹಲವಾರು ವಸ್ತುಗಳನ್ನು ಇಲ್ಲೇ ತಯಾರಿಸಲಾಗುತ್ತೆ.


ಕೆಲಸಕ್ಕೆ ಬಾರದ ಟಿನ್, ಡ್ರಮ್, ಹಳೆಯ ಮಿಲಿಟರಿ ಜೀಪ್, ಟ್ರ್ಯಾಕ್ಟರ್ ಬಿಡಿ ಭಾಗಗಳು, ಯಂತ್ರಗಳ ಬಿಡಿಭಾಗಗಳು, ಹಳೆ ಸ್ಕೂಟರ್ ಹಾಗೂ ಬೈಕ್ಗಳ ಲೈಟ್ಗಳನ್ನೆಲ್ಲ ಬಳಸಿ ಪೀಠೋಪಕರಣಗಳನ್ನು ತಯಾರಿಸುವುದು ವಿಶೇಷ. ಚೀನಾ, ಅಮೆರಿಕ, ಆಸ್ಟ್ರೇಲಿಯಾ ಹಾಗೂ ಯುರೋಪಿಯನ್ ರಾಷ್ಟ್ರಗಳಿಗೆ ಇವನ್ನು ರಫ್ತು ಮಾಡಲಾಗ್ತಿದೆ. ಇದು ಚೀನಾಕ್ಕೆ ಉತ್ಪನ್ನಗಳನ್ನು ರಫ್ತು ಮಾಡುತ್ತಿರುವ ಏಕೈಕ ಕಂಪನಿ.
ಸದ್ಯ ಪ್ರೀತಿ ಇಂಟರ್ನ್ಯಾಶನಲ್ ಸಂಸ್ಥೆ 8 ಮಿಲಿಯನ್ ಡಾಲರ್ ವಹಿವಾಟು ಮಾಡ್ತಿದೆ. 36 ದೇಶಗಳಲ್ಲಿ ಗ್ರಾಹಕರನ್ನು ಹೊಂದಿದೆ. ಮೂರು ಕಾರ್ಖಾನೆಗಳಿದ್ದು, 400 ಮಂದಿ ಕೆಲಸ ಮಾಡ್ತಿದ್ದಾರೆ. ಚೀನಾದಲ್ಲಿ ಪ್ರೀತಿ ಇಂಟರ್ನ್ಯಾಶನಲ್ ಕಂಪನಿಯ ಉತ್ಪನ್ನಗಳಿಗೆ ಭಾರೀ ಬೇಡಿಕೆಯಿದ್ದು, ಅಲ್ಲಿನ ಮಾರುಕಟ್ಟೆಯತ್ತಲೇ ಹ್ರಿತೇಶ್ ಹೆಚ್ಚು ಗಮನಹರಿಸಿದ್ದಾರೆ. 2018ರ ವೇಳೆಗೆ ವಹಿವಾಟು 25 ಮಿಲಿಯನ್ ಡಾಲರ್ ತಲುಪುವ ನಿರೀಕ್ಷೆ ಹ್ರಿತೇಶ್ ಅವರಿಗಿದೆ.


ಸತತ ಸೋಲುಗಳಿಂದ ಕಂಗೆಟ್ಟಾಗ ಮತ್ತೆ ಹೊಸ ಸಾಹಸಕ್ಕೆ ಕೈಹಾಕುವುದು ಸುಲಭವಲ್ಲ ಎನ್ನುತ್ತಾರೆ ಹ್ರಿತೇಶ್ ಅವರು. ಯೋಜನೆಯನ್ನೆಲ್ಲ ಸಾಕಷ್ಟು ಜನರಿಗೆ ಹ್ರಿತೇಶ್ ವಿವರಿಸಿದ್ರಂತೆ. ಆದ್ರೆ ಹೂಡಿಕೆ ಮಾಡಲು ಯಾರೊಬ್ಬರೂ ಮುಂದೆ ಬಂದಿರ್ಲಿಲ್ಲ. ಹಣಕಾಸಿನ ಮುಗ್ಗಟ್ಟಿನಿಂದಾಗಿ ತಮ್ಮ ಪತ್ನಿಯ ಆಭರಣಗಳನ್ನೂ ಮಾರಬೇಕಾಯ್ತು ಎನ್ನುತ್ತಾರೆ ಅವರು. ಬಳಿಕ ಗ್ರಾಹಕರಿಂದ ಮೊದಲ ಆರ್ಡರ್ ಪಡೆಯಲು ಹ್ರಿತೇಶ್ 2 ವರ್ಷ ಕಷ್ಟಪಡಬೇಕಾಯ್ತು.
ಅದೇನೇ ಆದ್ರೂ ಸದ್ಯ ಪ್ರೀತಿ ಇಂಟರ್ನ್ಯಾಶನಲ್ ಭಾರೀ ಯಶಸ್ಸು ಗಳಿಸಿದೆ. ಅಹಂ ಬ್ರಹ್ಮಾಸ್ಮಿ ಅನ್ನೋದ್ರಲ್ಲೇ ಹ್ರಿತೇಶ್ ನಂಬಿಕೆ ಇಟ್ಟಿದ್ದಾರೆ. ಪರಿಶ್ರಮವೊಂದಿದ್ದರೆ ಎಂತಹ ಚಮತ್ಕಾರವೂ ಸಾಧ್ಯ ಅನ್ನೋದಕ್ಕೆ ಇವರೇ ಸಾಕ್ಷಿ.

Share post:

Subscribe

spot_imgspot_img

Popular

More like this
Related

ಮೋದಿ ತಾಯಿಯ ಕುರಿತಾದ ಎಐ ವಿಡಿಯೋ ತೆಗೆದು ಹಾಕುವಂತೆ ಕಾಂಗ್ರೆಸ್​​ʼಗೆ ಹೈಕೋರ್ಟ್ ಸೂಚನೆ

ಮೋದಿ ತಾಯಿಯ ಕುರಿತಾದ ಎಐ ವಿಡಿಯೋ ತೆಗೆದು ಹಾಕುವಂತೆ ಕಾಂಗ್ರೆಸ್​​ʼಗೆ ಹೈಕೋರ್ಟ್...

SBI ಬ್ಯಾಂಕಿನಲ್ಲಿ 21 ಕೋಟಿ ದರೋಡೆ: ಎಸ್ಪಿ ಲಕ್ಷ್ಮಣ ನಿಂಬರಗಿ

SBI ಬ್ಯಾಂಕಿನಲ್ಲಿ 21 ಕೋಟಿ ದರೋಡೆ: ಎಸ್ಪಿ ಲಕ್ಷ್ಮಣ ನಿಂಬರಗಿ ವಿಜಯಪುರ:- SBI...

ಬಿಳಿ ಕೂದಲಿಗೆ ಮನೆಮದ್ದು: ನ್ಯಾಚುರಲ್ ಹೋಮ್ ಮೇಡ್ ಹೇರ್ ಆಯಿಲ್ ಇಲ್ಲಿದೆ

ಬಿಳಿ ಕೂದಲಿಗೆ ಮನೆಮದ್ದು: ನ್ಯಾಚುರಲ್ ಹೋಮ್ ಮೇಡ್ ಹೇರ್ ಆಯಿಲ್ ಇಲ್ಲಿದೆ ತಾತ್ಕಾಲಿಕ...

ವಿಪಕ್ಷಗಳಿಗೆ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರಿಲೀಸ್ ಮಾಡಿದ ಸಿಎಂ ಸಿದ್ದರಾಮಯ್ಯ!

ವಿಪಕ್ಷಗಳಿಗೆ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರಿಲೀಸ್ ಮಾಡಿದ ಸಿಎಂ ಸಿದ್ದರಾಮಯ್ಯ! ಬೆಂಗಳೂರು:...