ಕೆಲಸಗಾರರಿಗೆ ಕಾರು, ಫ್ಲಾಟ್ ಕೊಟ್ಟ ಇಂಥಾ ಮಾಲೀಕರನ್ನು ನೀವು ನೋಡೇ ಇಲ್ಲ..!

Date:

ಇವರು ಸೂರತ್ನ ಸಾವ್ಜಿ ಢೋಲಕಿ ಅಂತಾ. ದೊಡ್ಡ, ವಜ್ರ ಮತ್ತು ಬಟ್ಟೆ ವ್ಯಾಪಾರಿ, ಉದ್ಯಮದಲ್ಲಿ ಭಾರೀ ಯಶಸ್ಸು ಕಂಡಿರೋ ಬಿಲಿಯನೇರ್. ಕಳೆದ ದೀಪಾವಳಿ ಬೋನಸ್ ಅಂತಾ ನೌಕರರಿಗೆ ಫ್ಲಾಟ್ ಮತ್ತು ಕಾರುಗಳನ್ನು ಕೊಟ್ಟ ಧಣಿ.

ಕಳೆದ ವರ್ಷ ಅಂದರೆ 2017ರಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಒಟ್ಟು 1726 ನೌಕರರನ್ನು ಆಯ್ಕೆ ಮಾಡಿದ್ದರು. ಯಾರ ಬಳಿ ಕಾರು ಇದೆಯೋ ಅವರಿಗೆ ಫ್ಲಾಟ್ ಕೊಟ್ಟರು. ಯಾರ ಬಳಿ ಮನೆಯಿದ್ದು, ಕಾರ್ ಇಲ್ಲವೋ ಅವರಿಗೆ ಕಾರ್ ಗಿಫ್ಟ್ ಕೊಟ್ಟಿದ್ದಾರೆ.

ದೇಶದಲ್ಲೇ ಹೆಸರಾದ ಹರೇ ಕೃಷ್ಣ ಎಕ್ಸ್ಪೋರ್ಟ್ಸ್ ಕಂಪನಿ ಮಾಲೀಕರಾದ ಸಾವ್ಜಿ ಢೋಲಕಿ ಅವರು, ಮಾಲೀಕರಂತೆ ದುಡಿಯುವ ಜನರು ಚೆನ್ನಾಗಿ ಬದುಕಬೇಕೆನ್ನುವುದು ಅವರ ಆಶಯ. ಅದನ್ನು ಪ್ರತಿವರ್ಷವೂ ತಮ್ಮ ಕಂಪನಿಯ ನೌಕರರಿಗೆ ಒಂದಲ್ಲ ಒಂದು ದೊಡ್ಡ ಮಟ್ಟದ ಗಿಫ್ಟ್ ಗಳನ್ನು ನೀಡುತ್ತಲೇ ಬರುತ್ತಿದ್ದಾರೆ.
ಸಾವ್ಜಿ ಢೋಲಕಿಯವರ ಹರೇ ಕೃಷ್ಣ ಎಕ್ಸ್ಪೋರ್ಟ್ಸ್ ಕಂಪನಿ ಕಳೆದ ವರ್ಷ ಸ್ವರ್ಣ ಮಹೋತ್ಸವದ ಸಂಭ್ರಮ ಆಚರಿಸಿಕೊಂಡಿದೆ. ಅದರ ಖುಷಿಗಾಗಿ ನೌಕರರಿಗೆ ದೀಪಾವಳಿ ಬೋನಸ್ ಕೊಡಲು ಸಾವ್ಜಿ ಢೋಲಕಿಯಾ 51 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ.
ಸಾವ್ಜಿ ಢೋಲಕಿಯಾ ಅವರ ಹರೇ ಕೃಷ್ಣ ಎಕ್ಸ್ಪೋರ್ಟ್ಸ್ನಲ್ಲಿ ಒಟ್ಟು 5 ಸಾವಿರದ 500 ಉದ್ಯೋಗಿಗಳಿದ್ದಾರೆ. ಕಂಪನಿಯ ವಾರ್ಷಿಕ ವಹಿವಾಟು 6 ಸಾವಿರದ 600 ಕೋಟಿ ರೂಪಾಯಿ. ಕಳೆದ ವರ್ಷ ಕೂಡ ಸಂಸ್ಥೆ ತನ್ನ ನೌಕರರಿಗೆ ದೀಪಾವಳಿ ಉಡುಗೊರೆಯಾಗಿ 491 ಕಾರ್ಗಳು ಮತ್ತು 200 ಫ್ಲಾಟ್ಗಳನ್ನು ನೀಡಿತ್ತು.

ವಜ್ರ ಪಾಲಿಶ್ ಮಾಡುವವರನ್ನು ನಾವು ನೌಕರರಂತೆ ನೋಡುವುದಿಲ್ಲ, ಬದಲಾಗಿ ನಮ್ಮ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತೇವೆ. ಅವರೆಲ್ಲರೂ ನಮ್ಮವರೇ, ಕಂಪನಿಯಲ್ಲಿ ಅವರ ಕಾರ್ಯತತ್ಪರತೆಗೆ ಅನುಗುಣವಾಗಿ ಗಿಫ್ಟ್ ಕೊಡುತ್ತಿದ್ದೇವೆ ಎನ್ನುವ ಅಭಿಮತ ಸಾವ್ಜಿ ಅವರದು.
ಏನೇ ಹೇಳಿ, ಇತ್ತೀಚೆಗೆ ಕೆಲ ಕಂಪನಿಗಳು ಬರೀ ಲಾಭಾಂಶವನ್ನು ಹೆಚ್ಚಿಸಿಕೊಳ್ಳಲು ಅಲ್ಲಿ ದುಡಿಯುವ ಜನರನ್ನು ದಂಡಿಸಿಕೊಳ್ಳುತ್ತಿವೆ ವಿನಾಃ ಆ ದುಡಯುವ ಜನರ ಕೈ ಬಲ ಗೋಜಿಗೆ ಹೋಗುವುದಿಲ್ಲ. ಆದರೆ, ತಮ್ಮ ನೌಕರರಿಗೆ ಖುಷಿಯಾಗಿರಲಿ ಎಂದು ಸಾವ್ಜಿ ಢೋಲಕಿಯಾ ನೀಡುತ್ತಿರುವ ಊಡುಗೊರೆ ನಿಜಕ್ಕೂ ಸಾಹುಕಾರ ಹೇಗಿರ್ಬೇಕು ಅನ್ನೋದಕ್ಕೆ ಇವರೇ ಸಾಕ್ಷಿ.

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....