ಪರಿಸರ ಪ್ರೇಮಿ ಕಂಡಕ್ಟರ್ ಬಗ್ಗೆ ನೀವು ಓದಲೇ ಬೇಕಾದ ಸ್ಟೋರಿ ಇದು

Date:

49ವರ್ಷದ ಯೋಗನಾಥನ್ ವೃತ್ತಿಯಲ್ಲಿ ಕಂಡಕ್ಟರ್. ಕೊಯಂಬತ್ತೂರಿನಲ್ಲಿ ಖಾಸಗಿ ಬಸ್ನಲ್ಲಿ ನಿರ್ವಾಹಕನ ಕೆಲಸ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಯೋಗನಾಥನ್ ಪರಿಸರವಾದಿ.

ಆದ್ರೆ, ಯೋಗನಾಥನ್ ಎಲ್ಲರಂತೆ ಬಾಯ್ಬಡ್ಕೊಂಡು ಓಡಾಡುವುದಿಲ್ಲ. ಬದಲಾಗಿ ಪರಿಸರಕ್ಕೆ ತಾನು ಹೇಗೆ ಕೊಡುಗೆ ನೀಡುಬಹುದು ಅನ್ನೋದನ್ನ ಕೆಲಸ ಮಾಡಿ ತೋರಿಸುತ್ತಿದ್ದಾರೆ. ಕಳೆದ 30 ವರ್ಷಗಳಿಂದ ಯೋಗನಾಥನ್ ಈ ಕೆಲಸ ಮಾಡುತ್ತಿದ್ದಾರೆ. ತಮಿಳುನಾಡಿನ 32ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಮರಗಳನ್ನು ನೆಟ್ಟು ಪರಿಸರಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡುತ್ತಿದ್ದಾರೆ.


ಯೋಗನಾಥನ್ 30 ವರ್ಷಗಳಿಂದ ನಿರಂತರವಾಗಿ ಈ ಕೆಲಸ ಮಾಡಿಕೊಂಡು ಬಂದಿದ್ದಾರೆ. 1980ರ ದಶಕದಲ್ಲಿ ನೀಲ್ಗಿರಿ ಕಾಡುಗಳಲ್ಲಿ ಮರಗಳ್ಳರು ಕಡಿಯುತ್ತಿದ್ದರು. ಆದ್ರೆ, ಅದನ್ನು ಯಾರೂ ಕೂಡ ವಿರೋಧಿಸುವ ಗೋಜಿಗೆ ಹೋಗಲಿಲ್ಲ. ಆದ್ರೆ ಯೋಗನಾಥನ್ ವಿಭಿನ್ನ ರೀತಿಯಲ್ಲಿ ಮರ ಕಡಿಯುವುದರ ವಿರುದ್ಧ ಪ್ರತಿಭಟನೆ ಆರಂಭಿಸಿದ್ರು.
ಯೋಗನಾಥನ್ ಕಳೆದ 30 ವರ್ಷಗಳಲ್ಲಿ 3000ಕ್ಕೂ ಅಧಿಕ ಶಾಲೆಗಳಲ್ಲಿ, ಕಾಲೇಜುಗಳಲ್ಲಿ ಪರಿಸರ ರಕ್ಷಣೆ ಮತ್ತು ಮರಗಳ ರಕ್ಷಣೆ ಬಗ್ಗೆ ಪಾಠಗಳನ್ನು ಹೇಳಿಕೊಟ್ಟಿದ್ದಾರೆ. ಅಷ್ಟೇ ಅಲ್ಲ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳ ಕೈಯಲ್ಲೇ ಸಸಿ ನೆಟ್ಟು ಅದನ್ನು ಪೋಷಿಸುವ ಜವಾಬ್ದಾರಿಯನ್ನ ವಿದ್ಯಾರ್ಥಿಗಳಿಗೇ ವಹಿಸುತ್ತಿದ್ದರು. ವಿದ್ಯಾರ್ಥಿಗಳ ಕೈಗಳಿಂದ ಗಿಡಗಳನ್ನು ನೆಡೆಸುತ್ತಿದ್ರು. ಅದಕ್ಕೆ ಅವರ ಹೆಸರನ್ನೇ ಇಡುತ್ತಿದ್ರು.


ಇನ್ನು ಯೋಗನಾಥನ್ ಪರಿಸರ ಸಂರಕ್ಷಣೆಯ ಕೆಲಸಗಳ ವಿಚಾರದಲ್ಲಿ ಹಲವು ಬಾರಿ ರಜೆ ತೆಗೆದುಕೊಳ್ಳುತ್ತಿದ್ದರು. ಹೀಗಾಗಿ ಕಳೆದ 17 ವರ್ಷಗಳಲ್ಲಿ 40 ಬಾರಿ ವರ್ಗಾವಣೆಯ ಶಿಕ್ಷೆಯನ್ನು ಕೂಡ ಪಡೆದಿದ್ದರು. ಆದ್ರೆ ಯೋಗನಾಥನ್ ತನ್ನ ಖಾಸಗಿ ಕೆಲಸಗಳಿಗೆ ಒಂದೇ ಒಂದು ದಿನ ರಜೆಯನ್ನು ತೆಗೆದುಕೊಂಡಿಲ್ಲ ಅನ್ನೋದು ಅವರ ಪರಿಸರ ಪ್ರೇಮವನ್ನು ತೋರಿಸುತ್ತಿದೆ.
ಕಳೆದ ಕೆಲವು ವರ್ಷಗಳಿಂದ ಯೋಗನಾಥನ್ ಅವರನ್ನು ಹಲವು ಪ್ರಶಸ್ತಿ-ಪುರಸ್ಕಾರಗಳು ಹುಡುಕಿಕೊಂಡು ಬಂದಿವೆ. ಹೀಗಾಗಿ ಕಂಡಕ್ಟರ್ ಕೆಲಸ ಕೊಟ್ಟ ಮಾಲೀಕರು ಯೋಗನಾಥನ್ ವರ್ಗಾವಣೆಯನ್ನು ಸ್ಥಗಿತಗೊಳಿಸಿದ್ದಾರೆ. ಎಲ್ಲಾ ಕಡೆಗಳಿಂದ ಪ್ರಶಸ್ತಿ ಬಂದಿದ್ದರೂ ಯೋಗನಾಥನ್ ತನ್ನ ಕೆಲಸವನ್ನು ಇಂದಿಗೂ ನಿಲ್ಲಿಸಿಲ್ಲ. ಗಿಡ ನೆಡುವ ಕಾರ್ಯ ಪ್ರತಿನಿತ್ಯ ನಡೆಯುತ್ತಿದೆ.
ಒಟ್ಟಿನಲ್ಲಿ ಸದಾ ಸರ್ಕಾರಿ ಕೆಲಸದ ನಡುವೆಯೂ ಪರಿಸರ ರಕ್ಷಣೆಗೆ ಗಿಡ ನೆಡುವ ಬಸ್ ಕಂಡಕ್ಟರ್ ಕಾರ್ಯ ಪ್ರತಿಯೊಬ್ಬ ಸರ್ಕಾರಿ ನೌಕರಿಯರಿಗೂ ಆದರ್ಶನೀಯ.
==

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....