ಡಾ. ಸುರೇಶ್ ಕೆ. ಪಾಂಡೆ, ಇವರು ಮೂಲತಃ ರಾಜಸ್ಥಾನದವರು. ಎಂಬಿಬಿಎಸ್ ಓದುವಾಗ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ವ್ಯಕ್ತಿ. ಇಂದು ದೇಶದ ಅತಿದೊಡ್ಡ ನೇತ್ರ ತಜ್ಞರೆಂದು ಪ್ರಖ್ಯಾತಿಯಾಗಿದ್ದಾರೆ. ರಾಜಸ್ಥಾನದ ಕೋಟಾದಲ್ಲಿ ಬಡವರು ಹಾಗೂ ಮಧ್ಯಮ ವರ್ಗದವರಿಗಾಗಿ ತಲ್ಪಾಂಡಿ ಕಣ್ಣಿನ ಆಸ್ಪತ್ರೆ ಕಟ್ಟಿಸಿ, ಅಪಾರ ಜನರ ಪಾಲಿಗೆ ನೇತ್ರದಾನಿ ಎನಿಸಿಕೊಂಡಿದ್ದಾರೆ.
ಡಾ. ಸುರೇಶ್ ಕೆ. ಪಾಂಡೆ ಅವರಿಗೆ ಸ್ಪೂರ್ತಿ ಅವರ ಅಜ್ಜ ಕಾಮ್ತಾ ಪ್ರಸಾದ್ ಪಾಂಡೆಯಂತೆ. ಇವರು ಕಣ್ಣಿನ ಶಸ್ತ್ರಚಿಕಿತ್ಸೆ ತರಬೇತಿ ಪಡೆದ ಆಯುರ್ವೇದ ವೈದ್ಯರಂತೆ. ಬ್ರಿಟಿಷರ ಕಾಲದಲ್ಲೇ ಕಣ್ಣಿನ ಶಿಬಿರಕ್ಕಾಗಿ ಉಚಿತವಾಗಿ ಭೂಮಿ ನೀಡಿದ ಮಹಾದಾನಿಯಾಗಿದ್ದರು. ಅದರೂ, ಡಾ. ಸುರೇಶ್ ಕೆ. ಪಾಂಡೆ ಬಾಲ್ಯದಲ್ಲಿ ಬೂಟು ಅಥವಾ ಚಪ್ಪಲಿ ಇಲ್ಲದೆ ಪ್ರತಿನಿತ್ಯ ಒಂದೂವರೆ ಮೈಲಿ ನಡೆದು ಸ್ಕೂಲ್ ಗೆ ಹೋಗಿಬರುತ್ತಿದ್ದ ಸ್ಥಿತಿ ಇತ್ತು.
ಸುರೇಶ್ ಕೆ. ಪಾಂಡೆಯವರು, ಹೈಯರ್ ಸೆಕೆಂಡರಿ ಎಕ್ಸಾಮಿನೇಷನ್ ನಲ್ಲಿ ಅವರ ಅತ್ಯುತ್ತಮ ಫಲಿತಾಂಶಗಳಿಗಾಗಿ ಸುಮಾರು ಎರಡು ವರ್ಷಗಳ ಕಾಲ ಮತ್ತೊಂದು ವಿದ್ಯಾರ್ಥಿ ವೇತನ ಪ್ರಕಟಣೆ ಅವರ ವಿಶ್ವಾಸವನ್ನು ಹೆಚ್ಚಿಸಿತು. 1986ರಲ್ಲಿ ರಾಣಿ ದುರ್ಗಾವತಿ ವಿಶ್ವವಿದ್ಯಾಲಯ, ನೇತಾಜಿ ಸುಭಾಷ್ ಚಂದ್ರ ಬೋಸ್ ಮೆಡಿಕಲ್ ಕಾಲೇಜ್, ಜಬಲ್ಪರ್ ಮಧ್ಯಪ್ರದೇಶದಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿ ಮತ್ತು ಯಾವುದೇ ತರಬೇತಿಯಿಲ್ಲದೆ ಪ್ರವೇಶಿಸಿದರು.
ಇನ್ನು ಎಂಬಿಬಿಎಸ್ ಕೋರ್ಸ್ ಮಾಡುವಾಗ ತುಂಬಾ ಕಷ್ಟ ಎದುರಿಸಿದರಂತೆ. ಇನ್ನು ತಿಂಗಳಿಗೆ ಪೋಷಕರು ಕಳುಹಿಸಿದ 600 ರೂಪಾಯಿಯಿಂದ 800 ರೂಪಾಯಿ ಮಾತ್ರ. ಇಂತಹ ಸಂದರ್ಭದಲ್ಲಿ ಆಗ ಒಂದು ಹೊತ್ತಿನ ಊಟಕ್ಕೆ ಕಷ್ಟಪಡುತ್ತಿದ್ದರು. 1992ರಲ್ಲಿ ಅವರು ಅದೇ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಗಾಗಿ ನೇತ್ರ ವಿಜ್ಞಾನವನ್ನು ಅರಿಸಿಕೊಂಡರು. ನಂತರ ಅವರು ಚಂಡೀಗಢದ ಪ್ರತಿಷ್ಠಿತ ಸ್ನಾತಕೋತ್ತರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ ಗೆ ಸೇರಿದರು.
ಡಾ. ಸುರೇಶ್ ಕೆ. ಪಾಂಡೆ ಅವರು 1998ರಲ್ಲಿ ಅಮೆರಿಕಕ್ಕೆ ಸ್ಕಾಲರ್ ಶಿಫ್ ನಿಂದ ಉನ್ನತ ವ್ಯಾಸಂಗ ಮಾಡಲು ಹೊರಟರು. ಅಲ್ಲಿ 22 ಸಾವಿರದಷ್ಟು ಪಾವತಿಸಿದ ಫೆಲೋಶಿಪ್ ಪಡೆದರು. 5 ವರ್ಷಗಳ ನಂತರ ಅಲ್ಲಿ ಬೋಧಕರಾಗಿ ಕೆಲಸ ಮಾಡುತ್ತಾರೆ. ಈ ವೇಳೆ, ಡಾ. ವಿದುಶಿ ಶರ್ಮ ಪಾಂಡೆ ಅವರನ್ನು ಕೈ ಹಿಡಿದರು. ಇಬ್ಬರು ನೇತ್ರ ತಜ್ಞರಾಗಿದ್ದು, ಆಸ್ಟ್ರೇಲಿಯಾಕ್ಕೆ ತೆರಳಿದರು. ಇನ್ನು ಸುರೇಶ್ ಅವರು ಕಣ್ಣಿನ ಪೊರೆಗಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಪತ್ನಿ ಡಾ. ವಿದುಶಿಯವರು ಕಣ್ಣಿನ ಪ್ಲಾಸ್ಟಿಕ್ ಸರ್ಜರಿಯಲ್ಲಿ ಕೆಲಸ ಮಾಡಿದರು.
ಆಸ್ಟ್ರೇಲಿಯಾದಿಂದ ವಾಪಸ್ ಆದಮೇಲೆ, ಆಂಧ್ರಪ್ರದೇಶದ ಹೈದ್ರಾಬಾದ್ ನಲ್ಲಿ ಕೆಲಸ ಮಾಡಿದರು. ಆದರೆ, ಕೆಲಸ ತೃಪ್ತಿ ತರಲಿಲ್ಲ. ಹೀಗಾಗಿ 2005 ಡಿಸೆಂಬರ್ ನಲ್ಲಿ ಹೈದ್ರಬಾದ್ ನಿಂದ ಹಿಂದಿರುಗಿ ಕೋಟಾದಲ್ಲಿ ತಮ್ಮ ಆದ ಸಂಸ್ಥೆಯನ್ನು ನಿರ್ಧರಿಸಿದ್ರು. ಅಂದು ಕೊಂಡಂತೆ ಕೋಟಾದಲ್ಲಿ ಕಣ್ಣಿನ ಆಸ್ಪತ್ರೆ ಕಟ್ಟಿಸಿದರು. ನಂತರ ಕೇವಲ ಮೂರು ವರ್ಷಗಳಲ್ಲಿ ಡಾಕ್ಟರ್ ದಂಪತಿ ತಮ್ಮ ಕ್ಷೇತ್ರದಲ್ಲಿ ಯಶಸ್ಸಿಯಾದರು.
ಆಮೇಲೆ, ಡಾ. ಕೆ. ಸುರೇಶ್ ಕೆ. ಪಾಂಡೆ ದಂಪತಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ನೇತ್ರ ಉಪಕರಣಗಳನ್ನು ಅಳವಡಿಸಿ, ಬಡವರು ಹಾಗೂ ಮಧ್ಯಮ ವರ್ಗದ ಜನರ ಸೇವೆಗಾಗಿ ದುಡಿಯತ್ತಿದ್ದಾರೆ. ಇವರ ಆಸ್ಪತ್ರೆಯಲ್ಲಿ ಸುಮಾರು 45ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. ಏನೇ ಹೇಳಿ ಕಷ್ಟದ ಬದುಕಿನಿಂದ ಮೇಲೆದ್ದು ಬಂದ ಡಾ. ಸುರೇಶ್ ಕೆ. ಪಾಂಡೆಯವರ ಬದುಕು ಅನೇಕರಿಗೆ ಸ್ಫೂರ್ತಿಯಾಗಿದೆ.