ದೆಹಲಿಯ ಸೊನಾಲಿ ಗುಲಾಟಿ. ಮಹಿಳಾವಾದಿ ಹಾಗೂ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿರುವವರು. ಇವರು ತಮ್ಮ ಅಪೂರ್ವವಾದ ಡಾಕ್ಯುಮೆಂಟರಿಗಳಿಂದ ಜನಪ್ರಿಯತೆ ಗಳಿಸಿದ್ದಾರೆ. ಅಲ್ಲದೆ ವರ್ಜಿನಿಯಾದ ಪ್ರತಿಷ್ಠಿತ ಪ್ರಶಸ್ತಿಗಳಿಗೂ ಪಾತ್ರರಾಗಿದ್ದಾರೆ.
ಸೊನಾಲಿ ಗುಲಾಟಿ ಅವರ ಕ್ಯಾಮರಾದಲ್ಲಿ ಒಂದು ಹೆಣ್ಣಿನ ಬಾಲ್ಯ, ಆಕೆಯ ಹೆತ್ತವರು ಹಾಗೂ ಆಕೆ ಎದುರಿಸಬೇಕಾದ ಎಲ್ಲಾ ಸವಾಲುಗಳನ್ನ ಎಳೆಎಳೆಯಾಗಿ ವಿವರಿಸಿದ್ದಾರೆ. ದೆಹಲಿಯಲ್ಲಿ ಬೆಳೆದ ಸೊನಾಲಿ ಗುಲಾಟಿಯವರಿಗೆ ಮಹಿಳೆಯಾಗಿ ತಾವು ಎದುರಿಸಬೇಕಾದ ಸಮಸ್ಯೆ ಹಾಗೂ ಸವಾಲುಗಳ ಬಗ್ಗೆ ಸ್ಪಷ್ಟತೆ ಇತ್ತು. ಅದನ್ನು ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ಅಭಿವ್ಯಕ್ತಿಸಿದ್ದಾರೆ.
ದೆಹಲಿಯ ಸೊನಾಲಿ ಗುಲಾಟಿ ಅವರು ಯುಎಸ್ ಗೂ ತೆರಳಿದ್ರು. ಅಲ್ಲಿ ಅವರು ಎದುರಿಸಿದ ಸಮಸ್ಯೆ ಹಾಗೂ ಸವಾಲುಗಳು ಅವರನ್ನು ಬದುಕಿನಲ್ಲಿ ಮತ್ತಷ್ಟು ಗಟ್ಟಿಗರನ್ನಾಗಿಸಿದ್ದು ವಿಶೇಷ. ಅವರಿಗೆ ಫಿಲ್ಮ್ ಮೇಕಿಂಗ್ ನಲ್ಲಿ ಅಪರಿಮಿತ ಆಸಕ್ತಿ ಇದ್ದಿದ್ರಿಂದ ವಿಜ್ಯುವಲ್ ಫೋಟೋಗ್ರಫಿ ಕೋರ್ಸ್ ಆಯ್ಕೆ ಮಾಡಿಕೊಂಡ್ರು. ಯುಎಸ್ ನಲ್ಲಿ ಕ್ರಮೇಣ ಡಾಕ್ಯುಮೆಂಟರಿಗಳ ಕಡೆ ಗಮನ ನೀಡಿದ ಅವರು ಅಲ್ಲಿನ ಜನರ ಮನಸ್ಥಿಗೆ ಅಚ್ಚರಿ ವ್ಯಕ್ತಪಡಿಸಿದ್ರು.
ಅಲ್ಲೂ ಕೂಡ ಪುರುಷ ಸಮಾಜ ಪ್ರತೀ ಹಂತದಲ್ಲಿ ಮಹಿಳೆಯರನ್ನ ಹಿಮ್ಮೆಟ್ಟಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ರು. ಹೀಗಾಗಿ ಅವರನ್ನ ಅವರೇ ಬಿಂಬಿಸಿಕೊಳ್ಳಲು ಸೊನಾಲಿ ಗುಲಾಟಿ ನಿರ್ಧರಿಸಿದ್ರು. ತಕ್ಷಣವೇ ಕ್ಯಾಮರಾ ಹೊತ್ತುಕೊಂಡು ಕಾರ್ಯ ಪ್ರವೃತ್ತರಾದ ಸೊನಾಲಿ ಗುಲಾಟಿ ಒಂದು ಉತ್ತಮ ಕಥೆ ಹೆಣೆಯೋದಿಕ್ಕೆ ಶುರು ಮಾಡಿದ್ರು.
ನಂತರದಲ್ಲಿ ಸೊನಾಲಿ ಅವರು ತಮ್ಮ ಕನಸುಗಳನ್ನು ಹೆಣೆಯುತ್ತಾ ಹೊಸ ಕಥೆಗಳಿಗೆ ಹುಡುಕಾಡ ತೊಡಗಿದಾಗ ಕೊನೆಗೂ ಒಂದು ಪ್ರಾಜೆಕ್ಟ್ ಗೆ ಜೋತು ಬಿದ್ರು.. ನಳಿನಿ ಬೈ ಡೇ .. ನ್ಯಾನ್ಸಿ ಬೈ ನೈಟ್. ಈ ಕಿರು ಚಿತ್ರದ ಕಥೆಯನ್ನ ಕೇಳಿದ ಕೆಲವರು ಮೆಚ್ಚಿಕೊಂಡ್ರೂ ಭಾರತದ ಹಳ್ಳಿ ಹಳ್ಳಿಗಳನ್ನು ತಿರುಗಾಡಿದರು. ಮಹಿಳೆಯರ ಬವಣೆಗಳನ್ನು ಹೆಕ್ಕಿ ಹೊರಗೆಡವಿದರು.
ದೆಹಲಿ ಹಾಗೂ ದಿಸ್ ಪುರದಲ್ಲಿ ಬೀಡು ಬಿಟ್ಟ ಇವರ ತಂಡ ಶೂಟಿಂಗ್ ರೂಪುರೇಷೆ ನಿರ್ಮಿಸಿ ಕಾರ್ಯಚಟುವಚಿಕೆ ಶುರುಮಾಡಿಯೇ ಬಿಟ್ಟಿತು. ಹೀಗೆ ಹಲವು ಸವಾಲುಗಳನ್ನ ಮೆಟ್ಟಿ ನಿಂತ ಸೋನಾಲಿ ಅವರು ಅಂತಿಮವಾಗಿ ತಮ್ಮ ಸಾಹಸಕ್ಕೆ 2006ರಲ್ಲಿ ಡೈರಕ್ಟರ್ ಚಾಯ್ಸ್ ಬ್ಲ್ಯಾಕ್ ಮರಿಯಾ ಫಿಲ್ಮ್ ಅವಾರ್ಡ್ ಹಾಗೂ 2006ರ ವಿಡಿಯೋ ಫೆಸ್ಟಿವಲ್ ಅವರಾಡ್ ಗಳನ್ನ ಗೆದ್ದು ಬೀಗಿದ್ರು.
ಅಲ್ಲದೆ ಇವರ ಚಿತ್ರ ಹಂಬೋಲ್ಟ್ ನಲ್ಲಿ ನಡೆದ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ ಸೇರಿದಂತೆ ವಿವಿಧ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡಿದ್ದು ಇವರ ಶ್ರೇಷ್ಠ ಕ್ಷಣಗಳಲ್ಲಿ ಒಂದು. ಹೀಗೆ ಶುರುವಾದ ಸೋನಾಲಿಯವರ ಯಶಸ್ಸಿನ ಯಾನ ಇನ್ನಷ್ಟು ಅಪರೂಪದ ಸಾಧನೆಗಳಿಗೆ ಮೂಲವಾಯ್ತು.
ಇನ್ನು ಸೊನಾಲಿಯವರ ನಂತರದ ಚಿತ್ರ ಐ ಆಮ್ ಕೆಲಸಕ್ಕೆ ಹಲವು ಪ್ರೇರಣೆಗಳು ಸಿಕ್ಕವು. ಇದು ತೃತೀಯ ಲಿಂಗದ ಕುರಿತಾದ ಚಿತ್ರ. ಅವರ ಬದುಕು ಹಾಗೂ ಭಾವನೆಗಳನ್ನ ತಮ್ಮ ಕ್ಯಾಮರಾದಲ್ಲಿ ಸುಂದರವಾಗಿ ಹಿಡಿದಿಟ್ಟ ಸೋನಾಲಿ ಅವರ ಸಮಸ್ಯೆಗಳನ್ನ ಎಳೆಎಳೆಯಾಗಿ ಬಿಚ್ಚಿಟ್ಟರು. ಪರಿಣಾಮ ಅವರ ಈ ಚಿತ್ರ 14 ಪ್ರಶಸ್ತಿಗಳು, 400ಕ್ಕೂ ಹೆಚ್ಚು ಚಿತ್ರೋತ್ಸವಗಳಲ್ಲಿ ಪ್ರದರ್ಶನಗಳು ಕಂಡವು.
ಸೊನಾಲಿಯವರ ಐ ಆಮ್ ಅಲ್ಲದೆ ಆಸ್ಟ್ರೇಲಿಯಾ, ಕೆನಡಾ, ಯುರೋಪ್ , ನ್ಯೂಜಿಲೆಂಡ್ ಸೇರಿದಂತೆ ಇತರೆ ರಾಷ್ಟ್ರಗಳಲ್ಲೂ ಇವರ ಚಿತ್ರ ಅದ್ಭುತ ಪ್ರಚಾರ ಪಡೆಯಿತು. ಹೀಗೆ ಮಹಿಳೆಯರು ಹಾಗೂ ಹಿಂದುಳಿದ ವರ್ಗದವರ ಬಗ್ಗೆ ಅಪಾರ ಕಾಳಜಿ ತೋರಿ ಅದನ್ನ ಕ್ಯಾಮರಾ ಕಣ್ಣಲ್ಲಿ ಅಪೂರ್ವವಾಗಿ ತೆರೆದಿಟ್ಟಿರುವ ಸೊನಾಲಿ ಸಾಧನೆ ನಿಜಕ್ಕೂ ಅದ್ಭುತ .