ವಿಶ್ವಕಪ್​​ ಗೆಲ್ಲದಿದ್ದರೂ ಜನಮನ ಗೆದ್ದ ವನಿತೆಯರು..! ಮಹಿಳಾ ವರ್ಲ್ಡ್​​ಕಪ್​ ಇತಿಹಾಸ ಗೊತ್ತಾ?

Date:

ಆಸ್ಟ್ರೇಲಿಯಾದಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್​ನಲ್ಲಿ ಭಾರತ ಸೋಲನುಭವಿಸಿದೆ. ಲೀಗ್​ನಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದು ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿತ್ತು ಹರ್ಮನ್ ಪ್ರೀತ್ ಕೌರ್ ನೇತೃತ್ವದ ಟೀಮ್ ಇಂಡಿಯಾ! ಸೆಮಿಫೈನಲ್​ನಲ್ಲಿಗೆ ಮಳೆ ಅಡ್ಡಿಯಾಗಿದ್ದರಿಂದ ಲೀಗ್​ ಇಂಗ್ಲೆಂಡ್ ವಿರುದ್ಧ ನಡೆಯಬೇಕಿದ್ದ ಸೆಮಿಫೈನಲ್ ನಡೀಲಿಲ್ಲ. ಲೀಗ್ ಅಂಕಪಟ್ಟಿ ಆಧಾರದಲ್ಲಿ ನೇರವಾಗಿ ಭಾರತ ಫೈನಲ್​ ಪ್ರವೇಶಿಸಿತ್ತು. ಫೈನಲ್​ನಲ್ಲಿ ಅತಿಥೇಯ ಆಸ್ಟ್ರೇಲಿಯಾ ವಿರುದ್ಧದ ಭಾರತ ಸೆಣೆಸಿತ್ತು. ಮೊದಲ ಲೀಗ್ ಪಂದ್ಯದಲ್ಲಿ ಆಸೀಸನ್ನು ಸೋಲಿಸಿದ್ದ ಭಾರತ ಫೈನಲ್​ನಲ್ಲಿ ಮುಗ್ಗರಿಸಿತು. ಇದರೊಂದಿಗೆ ಚೊಚ್ಚಲ ಬಾರಿಗೆ ವಿಶ್ವಕಪ್ ಎತ್ತಿ ಹಿಡಿಯುವ ಅವಕಾಶ ತಪ್ಪಿಸಿಕೊಂಡಿತು.

ಭಾರತ ತಂಡ ವಿಶ್ವಕಪ್ ಸೋತರೇನಂತೆ ನಮ್ಮ ಹೆಮ್ಮೆಯ ಸಹೋದರಿಯರು ನಮ್ಮೆಲ್ಲರ ಮನಗೆದ್ದಿದ್ದಾರೆ. ಅವರ ಹೋರಾಟ, ಕ್ರೀಡಾಸ್ಫೂರ್ತಿ ಮಾದರಿ. ಮುಂದೆ ಸಾಲು ಸಾಲು ಟ್ರೋಫಿಗಳಿಗೆ ಮುತ್ತಿಕ್ಕುತ್ತಾರೆ ಅನ್ನೋದರಲ್ಲಿ ಅನುಮಾನವಿಲ್ಲ.
ಅದೇನೇ ಇರಲಿ ಮಹಿಳಾ ವಿಶ್ವಕಪ್ ಇತಿಹಾಸವನ್ನು ನೋಡುವುದಾದರೆ.. 1973ರಲ್ಲಿ ಮಹಿಳಾ ಏಕದಿನ ವಿಶ್ವಕಪ್ ಆರಂಭವಾಯಿತು. ಚೊಚ್ಚಲ ವಿಶ್ವಕಪ್ ಆಯೋಜಿಸಿದ್ದ ಇಂಗ್ಲೆಂಡ್ ಚಾಂಪಿಯನ್ ಆಯಿತು. ಬಳಿಕ 1978, 1982, 1988ರಲ್ಲಿ ಸತತ ಮೂರು ವರ್ಷ ಆಸ್ಟ್ರೇಲಿಯಾ ಚಾಂಪಿಯನ್ ಆಯಿತು. 1993ರಲ್ಲಿ ಪುನಃ ಇಂಗ್ಲೆಂಡ್ ಗೆದ್ದಿತು. 1997ರಲ್ಲಿ ಮತ್ತೆ ಆಸ್ಟ್ರೇಲಿಯಾ 2000ರಲ್ಲಿ ನ್ಯೂಜಿಲೆಂಡ್, 2005ರಲ್ಲಿ ಪುನಃ ಆಸೀಸ್, 2009ರಲ್ಲಿ ಇಂಗ್ಲೆಂಡ್ ಪುನಃ 2013ರಲ್ಲಿ ಆಸೀಸ್, ಮತ್ತೆ 2017ರಲ್ಲಿ ಇಂಗ್ಲೆಂಡ್ ಚಾಂಪಿಯನ್ ಆಯಿತು. ಏಕದಿನ ವಿಶ್ವಕಪ್​ನಲ್ಲಿ ಬರೀ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ ನದ್ದೇ ದರ್ಬಾರು. 11ರಲ್ಲಿ 6 ಬಾರಿ ಆಸ್ಟ್ರೇಲಿಯಾ 4 ಬಾರಿ ಇಂಗ್ಲೆಂಡ್ ಹಾಗೂ ಒಮ್ಮೆ ಮಾತ್ರ ನ್ಯೂಜಿಲೆಂಡ್ ಚಾಂಪಿಯನ್ ಆಗಿದೆ. ಭಾರತ (2005) ಒಂದು ಬಾರಿ ರನ್ನರಪ್ ಆಗಿದೆ.


ಇನ್ನು ಮಹಿಳಾ ಟಿ20 ವರ್ಲ್ಡ್​ಕಪ್ ಇತಿಹಾಸವನ್ನು ನೋಡುವುದಾದರೆ, 2009ರಿಂದ ಈ ವರ್ಷದ ವಿಶ್ವಕಪ್​ವರೆಗೆ 7ಬಾರಿ ವಿಶ್ವಕಪ್ ನಡೆದಿದೆ. ಈ 7ರಲ್ಲಿ ಬರೋಬ್ಬರಿ 5 ಬಾರಿ ಆಸ್ಟ್ರೇಲಿಯಾ ಚಾಂಪಿಯನ್ ಆಗಿದೆ, ಒಮ್ಮೆ ಇಂಗ್ಲೆಂಡ್ (2009) ಮತ್ತು ಒಮ್ಮೆ ವೆಸ್ಟ್​ಇಂಡೀಸ್ (2016) ಚಾಂಪಿಯನ್ ಆಗಿದೆ. 2010, 2012, 2014, 2016, 2018 ಮತ್ತು 2020ರಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಆಗಿದೆ.

Share post:

Subscribe

spot_imgspot_img

Popular

More like this
Related

ಮನೆ ಬಾಗಿಲು ಒಡೆದು ಚಿನ್ನಾಭರಣ ಕಳ್ಳತನ: 300 ಗ್ರಾಂ ಚಿನ್ನ ದೋಚಿದ ಆರೋಪಿಗಳು

ಮನೆ ಬಾಗಿಲು ಒಡೆದು ಚಿನ್ನಾಭರಣ ಕಳ್ಳತನ: 300 ಗ್ರಾಂ ಚಿನ್ನ ದೋಚಿದ...

ಗೋಲ್ಡನ್ ಅವರ್‌ನಲ್ಲಿ 2.16 ಕೋಟಿ ರೂ. ರಕ್ಷಿಸಿದ ಸೈಬರ್ ಕ್ರೈಮ್ ಪೊಲೀಸರು

ಗೋಲ್ಡನ್ ಅವರ್‌ನಲ್ಲಿ 2.16 ಕೋಟಿ ರೂ. ರಕ್ಷಿಸಿದ ಸೈಬರ್ ಕ್ರೈಮ್ ಪೊಲೀಸರುಬೆಂಗಳೂರು:ಸೈಬರ್...

ಶಬರಿ ಮಲೆಯಲ್ಲಿ ಚಿನ್ನ ಕಳವು ಪ್ರಕರಣ: ಹಲವು ಕಡೆ ಇಡಿ ದಾಳಿ

ಶಬರಿ ಮಲೆಯಲ್ಲಿ ಚಿನ್ನ ಕಳವು ಪ್ರಕರಣ: ಹಲವು ಕಡೆ ಇಡಿ ದಾಳಿಬೆಂಗಳೂರು:ಶಬರಿ...

ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಫ್ರಿಡ್ಜ್‌ನಲ್ಲಿ ಇಡ್ತೀರಾ? ಹಾಗಾದ್ರೆ ಈ ಮಾಹಿತಿ ತಪ್ಪದೇ ಓದಿ

ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಫ್ರಿಡ್ಜ್‌ನಲ್ಲಿ ಇಡ್ತೀರಾ? ಹಾಗಾದ್ರೆ ಈ ಮಾಹಿತಿ ತಪ್ಪದೇ...