ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಭಾರತದ ಆಟಗಾರನಾಗಿರುವ ಹರೀಶ್ ಕುಮಾರ್, ತಮ್ಮ ಜೀವನ ಸಾಗಿಸಲು ಟೀ ಮಾರಾಟ ಮಾಡುತ್ತಿದ್ದಾರೆ. ಕಂಚಿನ ಪದಕ ವಿಜೇತ ಹರೀಶ್ ಕುಮಾರ್ ಅವರು ಬಡ ಕುಟುಂಬದವರಾಗಿದ್ದು, ಇವರ ತಂದೆ ಕುಟುಂಬದ ಆದಾಯಕ್ಕಾಗಿ ದೆಹಲಿಯಲ್ಲಿ ಒಂದು ಟೀ ಮಾರುವ ಅಂಗಡಿಯನ್ನು ನಡೆಸುತ್ತಿದ್ದಾರೆ.
ಡೆಲ್ಲಿಯ ಹರೀಶ್ ಕುಮಾರ್ ಅವರು‘ಸೆಪಕ್ ತಕ್ರವ್’ ಆಟದಲ್ಲಿ ಕಂಚಿನ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದರೂ, ಅವರ ಜೀವನ ಮಾತ್ರ ಕಷ್ಟಕರವಾಗಿದೆ. ಇವರ ಕುಟುಂಬ ದೊಡ್ದದಾಗಿದ್ದು, ಆದಾಯ ಮಾತ್ರ ಕಡಿಮೆ ಇದೆ. ಹೀಗಾಗಿ ಕುಟುಂಬದ ನಿರ್ವಹಣೆಗೆ ವಿಜೇತ ಹರೀಶ್ ಕುಮಾರ್ ತಂದೆಯ ಜೊತೆ ಟೀ ಮಾರುತ್ತಿದ್ದಾರೆ.
ಮೊದಲು ನಾವು ಈ ಆಟವನ್ನು ಟೈಯರ್ ನಲ್ಲಿ ಆಡುತ್ತಿದ್ದು, ಸೆಪಕ್ ತಕ್ರವ್ ಆಟಕ್ಕೆ ನಮ್ಮನ್ನು ಗಮನಿಸಿ ಕರೆತಂದಿದ್ದು ಕೋಚ್ ಹೇಮ್ ರಾಜ್ ರವರು.ಇವರು ನಮ್ಮ ಆಟವನ್ನು ಗಮನಿಸಿ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ನನ್ನನ್ನು ನೋಂದಾಯಿಸಿದರು. ನಂತರ ನನಗೆ ಧನಸಹಾಯದ ಜೊತೆಗೆ ಆಟದ ಕಿಟ್ ಕೂಡ ದೊರೆಯಿತು.
ನಾನು ಟೀ ಮಾರುವುದರ ಜೊತೆಗೆ ಪ್ರತಿದಿನ 2 ರಿಂದ 6 ಗಂಟೆ ವರೆಗೆ ಸತತ ಅಭ್ಯಾಸ ಮಾಡುತ್ತೇನೆ. ನಮ್ಮ ದೇಶಕ್ಕೆ ಪ್ರಶಸ್ತಿಗಳನ್ನು ತಂದು ಕೊಡುವುದರ ಜೊತೆಗೆ ಉತ್ತಮ ಕೆಲಸ ಮಾಡುವುದು ಕೂಡ ನನ್ನ ಮುಂದಿನ ಗುರಿಯಾಗಿದೆ ಎಂದು ಹೇಳುತ್ತಾರೆ ಭಾರತದ ಹೆಮ್ಮೆಯ ಸೆಪಕ್ ತಕ್ರವ್’ಹರೀಶ್ ಕುಮಾರ್.
ಇಂತಹ ಪ್ರತಿಭೆಗಳಿಗೆ ಒಂದು ನೌಕರಿಯನ್ನಾದರೂ ಕೊಟ್ಟು ಜೀವನೋಪಾಯಕ್ಕೆ ಸಹಾಯ ಮಾಡಿ ಪ್ರೋತ್ಸಾಹ ಕೊಟ್ರೆ, ಇವರು ಮುಂದೆ ನಮ್ಮ ದೇಶಕ್ಕೆ ಅನೇಕ ಪ್ರಶಸ್ತಿಗಳನ್ನು ಗೆಲ್ಲುವ ಮುಖಾಂತರ ಕೀರ್ತಿಯನ್ನು ತರುತ್ತಾರೆ ಆಲ್ವಾ. ಅದರೂ ಇವರ ಸಾಧನೆ ಪ್ರತಿಯೊಬ್ಬ ಯುವ ಜನರಿಗೂ ಸ್ಫೂರ್ತಿ.