ಐದೇ ಐದು ದಿನಗಳಲ್ಲಿ 2 ಬಾರಿ ಮೌಂಟ್​ ಎವರೆಸ್ಟ್ ಏರಿದ ವೀರ ನಾರಿ!

Date:

ಇವರು ಅಂಶು ಜಂಸೆನ್ಪ, ಮೌಂಟ್ ಎವರೆಸ್ಟ್ ಅನ್ನು 5 ದಿನಗಳ ಅಂತರದಲ್ಲಿ 2 ಬಾರಿ ಏರಿ ದಾಖಲೆ ಬರೆದ ವೀರ ವನಿತೆ. 38 ವರ್ಷದ ಅಂಶು ಅರುಣಾಚಲ ಪ್ರದೇಶದ ಬೊಮ್ಡಿಲಾ ಪ್ರದೇಶದವರು.

ಇವರು 8 ಸಾವಿರದ 848 ಮೀಟರ್ ಅಥವಾ 29 ಸಾವಿರದ 28 ಫೀಟ್ ಎತ್ತರದಲ್ಲಿರುವ ಮೌಂಟ್ ಎವರೆಸ್ಟ್ ಅನ್ನು ಮೇ 16ರಂದು ಮೊದಲ ಬಾರಿಗೆ ಏರಿದ್ದರು. ಆದ್ರೆ ಸಾಧನೆಯ ಕನಸು ಮತ್ತೆ ದೊಡ್ಡದಾಗಿತ್ತು. ಹೀಗಾಗಿ ಕೊಂಚ ವಿರಾಮದ ನಂತರ ಮತ್ತೆ ಮೌಂಟ್ ಎವರೆಸ್ಟ್ ಏರುವ ಸಾಹಸಕ್ಕೆ ಕೈ ಹಾಕಿದರು. ಮೇ 19ರಂದು ಮೌಂಟ್ ಎವರೆಸ್ಟ್ ಅನ್ನು ಮತ್ತೊಮ್ಮೆ ಏರುವ ಸಾಹಸಕ್ಕೆ ಮುಂದಾಗಿದ್ರು.
ಅಂಶು ಅವರು, ನೇಪಾಳಿ ಪರ್ವತಾರೋಹಿ ಫ್ಯೂರಿ ಶೆರ್ಪಾ ಜೊತೆ ಸೇರಿಕೊಂಡು ಸಾಹಸ ಕಾರ್ಯ ಆರಂಭಿಸಿದಳು. ಅಷ್ಟೇ ಮೇ 21ರ ಬೆಳಗ್ಗೆ 8 ಗಂಟೆಗೆ ಮೌಂಟ್ ಎವರೆಸ್ಟ್ ಶಿಖರದ ತುತ್ತ ತುದಿ ತಲುಪಿ ದಾಖಲೆ ಬರೆದರು. ಮಹಿಳೆಯೊಬ್ಬರು ಕೇವಲ 5 ದಿನದ ಅಂತರದಲ್ಲಿ ಮೌಂಟ್ ಎವರೆಸ್ಟ್ ಶಿಖರವನ್ನು 2 ಬಾರಿ ಏರಿದ್ದು ಇದೇ ಮೊದಲಾಯಿತು.

ಅಂದಹಾಗೇ, ಅಂಶು ಎರಡು ಮಕ್ಕಳ ತಾಯಿ ಅನ್ನುವುದು ಮತ್ತೊಂದು ವಿಶೇಷ. ಸಾಹಸ ಕೈಗೊಳ್ಳುವ ಮುನ್ನ ಅಂಶು ಬೌದ್ಧ ಗುರು ದಲೈಲಾಮ ಆಶೀರ್ವಾದವನ್ನು ಕೂಡ ಪಡೆದುಕೊಂಡಿದ್ದರು. ಅಂಶು ಇದೇ ಮೊದಲ ಬಾರಿಗೆ ಮೌಂಟ್ ಎವರೆಸ್ಟ್ ಹತ್ತಿಲ್ಲ. ಈ ಬಾರಿಯ ಸಾಹಸವೂ ಸೇರಿದಂತೆ ಒಟ್ಟು 5 ಬಾರಿ ಅಂಶು ಜಗತ್ತಿನ ಅತೀ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಅನ್ನು ಏರಿದ ದಾಖಲೆ ಬರೆದಿದ್ದಾರೆ. ಆಂಶು ಈಶಾನ್ಯ ರಾಜ್ಯಗಳ ಪ್ರವಾಸೋದ್ಯಮದ ರಾಯಭಾರಿಯೂ ಆಗಿದ್ದಾರೆ ಅನ್ನುವುದು ವಿಶೇಷ.
ಈ ಹಿಂದೆ ಒಂದೇ ಸೀಸನ್ನಲ್ಲಿ ಮೌಂಟ್ ಎವರೆಸ್ಟ್ ಅನ್ನು 2 ಬಾರಿ ಏರಿದ ಗಿನ್ನೆಸ್ ದಾಖಲೆ ನೇಪಾಳಿ ಪರ್ವತಾರೋಹಿ, ಚುರಿಮ್ ಶೆರ್ಪಾ ಹೆಸರಿನಲ್ಲಿತ್ತು. ಚುರಿಮ್ 2012ರಲ್ಲಿ ಈ ಸಾಧನೆ ಮಾಡಿದ್ದರು. ಆದ್ರೆ ದಿನಗಳ ಲೆಕ್ಕಾಚಾರದಲ್ಲಿ ಹೆಚ್ಚು ಅಂತರವಿತ್ತು. ಆದ್ರೆ ಈಗ ಅಂಶು ಕೇವಲ 5 ದಿನಗಳ ಅಂತರದಲ್ಲಿ ಈ ಸಾಧನೆ ಮಾಡಿದ್ದಾರೆ.

ಈ ವರ್ಷ ಸುಮಾರು 120ಕ್ಕೂ ಅಧಿಕ ಪರ್ವತಾರೋಹಿಗಳು ಮೌಂಟ್ ಎವರೆಸ್ಟ್ ಶಿಖರವನ್ನು ಏರುವ ಪ್ರಯತ್ನ ಮಾಡಿದ್ದರು. ಆದ್ರೆ ಅತಿಯಾದ ವೇಗದಿಂದ ಬೀಸಿದ ಗಾಳಿ, ಹಿಮಪಾತ ಮತ್ತು ಶೀತ ವಾತಾವರಣ ಪರ್ವತಾರೋಹಿಗಳ ಉತ್ಸಾಹಕ್ಕೆ ತಣ್ಣೀರೆರಚಿತ್ತು. ಕಳೆದ ವಾರ ನೇಪಾಳಿ ಪರ್ವತಾರೋಹಿ ಮಹಿಳೆ ಲಕ್ಪಾ ಶೆರ್ಪಾ 8ನೇ ಬಾರಿಗೆ ಮೌಂಟ್ ಎವರೆಸ್ಟ್ ಶಿಖರವನ್ನು ಏರಿ ಅವರದ್ದೇ ದಾಖಲೆಯನ್ನು ಉತ್ತಮ ಪಡಿಸಿಕೊಂಡರು.
ಅಂಶು ಜಂಸೆನ್ಪ ಅವರದು ಎವರೆಸ್ಟ್ ಏರುವ ಸಾಧನೆಯೇ ಜೀವಿತಾವಧಿಯ ಶ್ರೇಷ್ಟ ಸಾಧನೆ ಅನ್ನುವುದರಲ್ಲಿ ಸಂಶಯವಿಲ್ಲ. ಹೀಗಾಗಿ ಅಂಶು ಮಾಡಿರುವ ಸಾಹಸ ನಿಜಕ್ಕೂ ಎಲ್ಲರೂ ಮೆಚ್ಚಿಕೊಳ್ಳುವಂತಹದ್ದೇ. ಭಾರತೀಯ ಮಹಿಳೆಯೊಬ್ಬಳು ಹೊಸ ದಾಖಲೆ ಮಾಡಿದ ಸಂಭ್ರಮವಿದು. ಒಟ್ಟಾರೆ, ವಿಶ್ವದ ಅತೀ ಎತ್ತರವನ್ನು ಒಂದೇ ಸೀಸನ್ನಲ್ಲಿ ಎರಡು ಬಾರಿ ಏರಿದ ಹೊಸ ದಾಖಲೆ ಇದು.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...