ಮದುವೆ ಎಂಬ ಮೂರಕ್ಷರದಲ್ಲಿ ಎಂಥಾ ಒಲವಿದೆ…! ಮದುವೆ ಎನ್ನುವುದು ಎರಡು ಜೀವನಗಳ ನಡುವಿನ ಪ್ರೀತಿಯ ಬೆಸುಗೆ. ನೂರಾರು ಕಾಲ ಜೋಡಿ ಸುಖವಾಗಿ ಬಾಳಲಿ..! ಪರಸ್ಪರ ಸುಖ ದುಃಖಗಳನ್ನು ಹಂಚಿಕೊಂಡು ಸುಖೀ ಸಂಸಾರ ನಡೆಸಲಿ ಅಂತ ನವ ವಧು-ವರರನ್ನು ಆರ್ಶೀವಧಿಸುತ್ತಾರೆ ಹಿರಿಯರು…!
ಆದರೆ, ಇಲ್ಲೊಂದು ಕಡೆ ಮದುವೆಯಾದ ಮರುದಿನವೇ ವಿಧವೆಯರಾಗ್ತಾರೆ…! ಇಲ್ಲಿ ವಿಧವೆ ಆಗೋರು ಯಾರು? ಯಾಕೀಗೆ ಆಗ್ತಿದೆ ಅನ್ನೋ ಕುತೂಹಲ ತಣಿಯಲು ಈ ಸ್ಟೋರಿ ಓದಿ.
ಯಸ್, ಇದು ತಮಿಳುನಾಡಿನ ವಿಲ್ಲಪುರಂ ಜಿಲ್ಲೆಯ ಉಲುಂದೂರ್ ಪಟ್ಟಿ ತಾಲೂಕಿನ ಪುಟ್ಟಹಳ್ಳಿ. ತಾಲೂಕು ಕೇಂದ್ರದಿಂದ ಸುಮಾರು 25 ಕಿಮೀ ದೂರದಲ್ಲಿರೂ ಹಳ್ಳಿಯಲ್ಲಿ ಒಂದು ಕೊತಾಂಡವರ್ ದೇವಸ್ಥಾನವಿದೆ. ಈ ದೇವಾಲಯಕ್ಕೆ ಹೆಚ್ಚಾಗಿ ಬರೋರು ಮಂಗಳಮುಖಿಯರು..! ಇಲ್ಲಿ ನಡೆಯುವ ಕೊತಾಂಡವರ್ ಉತ್ಸವಕ್ಕೆ ನಾನಾ ಕಡೆಗಳಿಂದ ಮಂಗಳಮುಖಿಯರು ಸಾವಿರಾರು ಸಂಖ್ಯೆಯಲ್ಲಿ ಬರ್ತಾರೆ…!
ನಿಮಗೆ ಗೊತ್ತಿರುವಂತೆ ಮಂಗಳಮುಖಿಯರಿಗೆ ಗಂಡನಿರೋದಿಲ್ಲ. ಇಲ್ಲಿನ ಕೊತಾಂಡವರ್ ದೇವರನ್ನೇ ತನ್ನ ಪತಿ ಎಂದು ನಂಬಿರ್ತಾರೆ ಮಂಗಳಮುಖಿಯರು. 18 ದಿನ ನಡೆಯುವ ಉತ್ಸವದಲ್ಲಿ ಫ್ಯಾಷನ್ ಶೋ ಸೇರಿದಂತೆ ಹತ್ತು ಹಲವು ಬಗೆಯ ಕಾರ್ಯಕ್ರಮಗಳಲ್ಲಿ ಮಂಗಳಮುಖಿಯರು ಭಾಗವಹಿಸ್ತಾರೆ. 17ನೇ ದಿನ ಈ ಮಂಗಳಮುಖಿಯರಿಗೆ ಮದುವೆ..! ಕೊತಾಂಡವರ್ ದೇವರ ಹೆಸರಲ್ಲಿ ಪೂಜಾರಿ ಇವರಿಗೆ ತಾಳಿ ಕಟ್ತಾರೆ…! ಮರುದಿನ ಪತಿರಾಯ ಕೊತಾಂಡವರ್ ಸಾವನ್ನಪ್ಪಿದ ಎಂದು ದುಃಖಿತರಾಗ್ತಾರೆ..! ಅಳುತ್ತಾ, ಬಳೆ ಒಡೆದುಕೊಂಡು, ಬಿಳಿ ಸೀರೆಯನ್ನುಡುತ್ತಾರೆ. ಪತಿ ಸತ್ತ ನಂತರ ನಡೆಸಬೇಕಾದ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಾರೆ. ಹೀಗೆ ಮದುವೆಯಾದ ಮರುದಿನವೇ ಇಲ್ಲಿ ಮಂಗಳಮುಖಿಯರು ವಿಧವೆಯರಾಗ್ತಾರೆ…!