2012ರಲ್ಲಿ ‘ಅದ್ದೂರಿ’ಯಾಗಿ ಚಂದನವನಕ್ಕೆ ಎಂಟ್ರಿಕೊಟ್ಟ ನಟ ಧ್ರುವ ಸರ್ಜಾ 2014ರಲ್ಲಿ `ಬಹದ್ದೂರ್’ ಹುಡ್ಗನಾಗಿ ಜನಮನಗೆದ್ರು. 2017ರ ಹೊತ್ತಿಗೆ ‘ಭರ್ಜರಿ’ ಸ್ಟಾರ್ ಆಗಿ ಮಿಂಚಿದ್ರು!
ಹೀಗೆ ಅದ್ದೂರಿ, ಬಹದ್ದೂರ್ ಮತ್ತು ಭರ್ಜರಿ ಸಿನಿಮಾಗಳ ಮೂಲಕ ಮೊದಲ ಮೂರು ಸಿನಿಮಾಗಳಲ್ಲೇ ಹ್ಯಾಟ್ರಿಕ್ ಬಾರಿಸಿ ಸ್ಟಾರ್ ಪಟ್ಟ ಅಲಂಕರಿಸಿದವರು ಧ್ರುವ.
ಆರಂಭದಲ್ಲೇ ಸಾಲು ಸಾಲು ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಅವರು ಮೇಲೆ ಸಹಜವಾಗಿ ನಿರೀಕ್ಷೆ ಭಾರ ಹೆಚ್ಚಿರುತ್ತೆ.
ಅಂತೆಯೇ ಎರಡು ವರ್ಷದ ಬಳಿಕ ಪೊಗರು ಮೂಲಕ ಮತ್ತೆ ಹೊಸ ಗೆಟಪ್ನಲ್ಲಿ ಮತ್ತಷ್ಟು ಕುತೂಹಲ, ನಿರೀಕ್ಷೆಯೊಂದಿಗೆ ಬರಲು ರೆಡಿಯಾಗಿದ್ದಾರೆ. 4ನೇ ಸಿನಿಮಾ ಪೊಗರು ರಿಲೀಸ್ ಆಗುವ ಟೈಮಲ್ಲಿ ಅವರ ಹೊಸ ಸಿನಿಮಾ ಫಿಕ್ಸ್ ಆಗಿದೆ.
ಮುಂಬರುವ ಸಿನಿಮಾ ತೆಲುಗು ರಿಮೇಕ್ ಆಗಿದ್ದು, ಶರಣ್ ಅಭಿನಯದ ಅಧ್ಯಕ್ಷ ಇನ್ ಅಮೆರಿಕಾ ನಿರ್ಮಿಸಿದ್ದ ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ಎಂಬ ಸಿನಿಮಾ ನಿರ್ಮಾಣ ಸಂಸ್ಥೆಗೆ ಧ್ರುವಾ ಕಾಲ್ಶೀಟ್ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಆ ನಿರ್ಮಾಣ ಸಂಸ್ಥೆ ನಿನ್ನು ಕೋರಿ ಎಂಬ ತೆಲುಗು ಸಿನಿಮಾವನ್ನು ಆ ಸಂಸ್ಥೆ ನಿರ್ಮಾಣ ಮಾಡಿತ್ತು. ನಾನಿ ಅಭಿನಯದ ಆ ಸಿನಿಮಾ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಆ ಸಿನಿಮಾವನ್ನೇ ಕನ್ನಡದಲ್ಲಿ ಮಾಡಲಾಗುತ್ತಿದೆ. ಪೊಗರು ಡೈರೆಕ್ಟರ್ ನಂದ ಕಿಶೋರ್ ಅವರೇ ಈ ಸಿನಿಮಾಕ್ಕೂ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಈ ಯಾವುದರ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬಂದಿಲ್ಲ.