ಮಹೇಂದ್ರ ಸಿಂಗ್ ಧೋನಿ.. ವಿಶ್ವಕ್ರಿಕೆಟ್ ಆಳಿದ ಅದ್ಭುತ ಕ್ರಿಕೆಟಿಗ..! ಧೋನಿ ಅನ್ನೋ ಹೆಸರಲ್ಲೇ ಒಂದು ಪವರ್ ಇದೆ. ಭಾರತಕ್ಕೆ ಟಿ20 ಮತ್ತು ಏಕದಿನ ವಿಶ್ವಕಪ್ ಅನ್ನು ತಂದು ಕೊಟ್ಟ ಯಶಸ್ವಿ ನಾಯಕ. ಅತ್ಯುತ್ತಮ ವಿಕೆಟ್ ಕೀಪರ್.. ಜಗತ್ತಿನ ಶ್ರೇಷ್ಠ ಮ್ಯಾಚ್ ಫಿನಿಶರ್…ಹೆಲಿಕ್ಯಾಪ್ಟರ್ ಶಾಟ್ ಸ್ಪೆಷಲಿಸ್ಟ್.. ಹೀಗೆ ಧೋನಿ ಬಗ್ಗೆ ಹೇಳುತ್ತಾ.. ಓದುತ್ತಾ ಹೋದರೆ ಒಮ್ಮೆಯಾದ್ರು ಧೋನಿ ಹಳೇ ಮ್ಯಾಚನ್ನು ಯೂಟ್ಯೂಬ್ನಲ್ಲಿ ಹುಡುಕಿ ನೋಡ್ಬೇಕು ಅನಿಸುತ್ತೆ.. ನೋಡ್ತೀವಿ ಕೂಡ!
ಇಂಥಾ ಧೋನಿ 2019ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ವರ್ಲ್ಡ್ಕಪ್ ಬಳಿಕ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ತೋರಿ ಕಮ್ ಬ್ಯಾಕ್ ಮಾಡ್ತಾರೆ ಎಂಬ ಲೆಕ್ಕಾಚಾರವೂ ಶುರುವಾಗಿತ್ತು. ಆದರೆ, ಕೊರೋನಾ ಭೀತಿಯಿಂದ ಮಾರ್ಚ್ 29ರಿಂದ ನಡಯಬೇಕಿದ್ದ ಐಪಿಎಲ್ 2020 ಸದ್ಯಕ್ಕೆ ಏಪ್ರಿಲ್ 15ಕ್ಕೆ ಮುಂದೂಡಲ್ಪಟ್ಟಿದೆ. ಆದರೆ, ನಡೆಯುವುದು ಅನುಮಾನ.. ಹೀಗಾಗಿ ಧೋನಿ ಕ್ರಿಕೆಟ್ ಭವಿಷ್ಯದ ಚರ್ಚೆ ಜೋರಾಗಿದೆ.
ಇದೀಗ ಧೋನಿ ಕಮ್ಬ್ಯಾಕ್ ಬಗ್ಗೆ ಟೀಮ್ ಇಂಡಿಯಾದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ತುಟಿ ಬಿಚ್ಚಿದ್ದಾರೆ.
ಧೋನಿ ತಂಡಕ್ಕೆ ಕಮ್ಬ್ಯಾಕ್ ಮಾಡುವುದು ಕಷ್ಟ. ಕೆ.ಎಲ್ ರಾಹುಲ್ ಮತ್ತು ರಿಷಭ್ ಪಂತ್ ಇರುವುದರಿಂದ ಧೋನಿ ವಾಪಸ್ಸಾಗುವುದು ಕಷ್ಟ ಎಂದಿದ್ದಾರೆ. ಧೋನಿ ಬರುವುದಾದರೆ ರಾಹುಲ್ ಆಡುವ ಪ್ಲೇಸ್ಗೆ ಬರಬೇಕು.. ರಾಹುಲ್ ಅದ್ಭುತ ಫಾರ್ಮ್ನಲ್ಲಿರುವುದರಿಂದ ಅವರನ್ನು ಯಾವ್ದೇ ಕಾರಣಕ್ಕೂ ತಂಡದಿಂದ ಕೈ ಬಿಡಲು ಸಾಧ್ಯ ಇಲ್ಲ. ಅಂತೆಯೇ ಯುವ ಆಟಗಾರ ಪಂತ್ ಅವರನ್ನು ಕೂಡ ತಂಡದಿಂದ ಬಿಡಲಾಗಲ್ಲ ಎಂದಿದ್ದಾರೆ.
ಹೌದು ಸದ್ಯ ಪಂತ್ ಹೇಳಿಕೊಳ್ಳುವಂಥಾ ಪ್ರದರ್ಶನ ನೀಡುತ್ತಿಲ್ಲವಾದರೂ ಅವರ ಮೇಲೆ ಭರವಸೆ ಇದೆ. ಅವರನ್ನು ಬಿಟ್ಟು ಧೋನಿಯನ್ನಾಡಿಸದರೆ ಎಷ್ಟು ವರ್ಷ ಆಡಿಸಲು ಸಾಧ್ಯ? ಹಾಗಾಗಿ ಪಂತ್ ಅಥವಾ ಬೇರೆ ಯುವ ಆಟಗಾರರಿಗೆ ಮಣೆ ಹಾಕುವುದು ಅನಿವಾರ್ಯ. ಇನ್ನು ಕನ್ನಡಿಗ ಕೆ.ಎಲ್ ರಾಹುಲ್ ಇತ್ತೀಚೆಗೆ ವಿಕೆಟ್ ಕೀಪರ್ ಆಗೊಯೂ ತಂಡಕ್ಕೆ ನೆರವಾಗುತ್ತಿರುವುದರಿಂದ ಧೋನಿ ಕಮ್ಬ್ಯಾಕ್ ನಿಜಕ್ಕೂ ಕಷ್ಟ… ವಿಕೆಟ್ ಕೀಪಿಂಗ್ ಹಾಗೂ ಯಾವ್ದೇ ಕ್ರಮಾಂಕದಲ್ಲೂ ಸಂದರ್ಭಕ್ಕೆ ತಕ್ಕಂತೆ ರಾಹುಲ್ ಬ್ಯಾಟ್ ಬೀಸುತ್ತಿರುವುದರಿಂದ ಬಿಸಿಸಿಐ ಧೋನಿ ಯೋಚನೆ ಕೈ ಬಿಟ್ಟು ಯುವ ಆಟಗಾರರಿಗೆ ಮಣೆ ಹಾಕುವ ಚಿಂತನೆ ಮಾಡಲು ನೆರವಾಗಿದೆ.