ಈಗಾಗಲೇ ಒಂದು ಬಲಿ ಪಡೆದ ಹ್ಯಾಂಟ..!
ಬೀಜಿಂಗ್ : ಕೊರೋನಾ ವೈರಸ್ ಈಗಾಗಲೇ ಇಡೀ ವಿಶ್ವದಲ್ಲಿ ಆತಂಕ ಸೃಷ್ಟಿಸಿದೆ. ಅನೇಕ ಸಾವು- ನೋವುಗಳು ಸಂಭವಿಸುತ್ತಿವೆ. ಈ ಹೆಮ್ಮಾರಿಯ ಬೆನ್ನಲ್ಲೇ ಮತ್ತೊಂದು ವೈರಸ್ ವಕ್ಕರಿಸಿದೆ! ಅದೇ ಹ್ಯಾಂಟ..
ಹೌದು, ಕೊರೋನಾದಿಂದ ಬೆಂಡಾಗಿರುವ ಚೀನಾದಲ್ಲಿಯೇ ಈ ಹ್ಯಾಂಟ ಕಾಣಿಸಿಕೊಂಡಿದೆ. ಈಗಾಗಲೇ ಒಂದು ಬಲಿಯನ್ನು ತೆಗೆದುಕೊಂಡಿದೆ. ಚೀನಾದ ಯುನ್ನಾನ್ ಪ್ರಾಂತ್ಯದಲ್ಲಿ ಹ್ಯಾಂಟದಿಂದ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಶಂಡಾಂಗ್ ಪ್ರಾಂತ್ಯಕ್ಕೆ ಕೆಲಸಕ್ಕೆಂದು ಹೋಗುವಾಗ ಅವರು ಬಸ್ಸಲ್ಲೇ ಸಾವನ್ನಪ್ಪಿದ್ದಾರೆ. ಒಟ್ಟಾರೆ 32 ಮಂದಿಗೆ ಹ್ಯಾಂಟಾ ತಗುಲಿದೆ ಎಂದು ಚೀನಾದ ಗ್ಲೋಬಲ್ ಟೈಮ್ಸ್ ಎಂಬ ಪತ್ರಿಕೆ ವರದಿ ಮಾಡಿದೆ.
ಕೊರೋನಾ ಜೊತೆಗೆ ಹ್ಯಾಂಟ ವೈರಸ್ ಹಾವಳಿ..!
Date: