ಕೊರೋನಾ ಸೋಂಕಿತರ ಸಂದರ್ಶನ ಮಾಡಿದ್ದ ಜನಪ್ರಿಯ ಆ್ಯಂಕರ್ ಗೂ ಕೊರೋನಾ!

Date:

ಕೊರೋನಾ…ಇಡೀ ವಿಶ್ವವನ್ನು ತಲ್ಲಣಗೊಳಿಸಿರುವ ವೈರಸ್.‌ ಇಡೀ ಜಗತ್ತನ್ನು ಅಲ್ಲೋಲ ಕಲ್ಲೋಲ ಮಾಡಿ ಮರಣ ಮೃದಂಗ ಬಾರಿಸುತ್ತಿದೆ. ಬಡವರು, ಶ್ರೀಮಂತರು‌ ಎಂಬುದಿಲ್ಲದೆ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಎಷ್ಟೇ ದುಡ್ಡಿದ್ದರು ಕೂಡ ಚಿಕಿತ್ಸೆ ಕಷ್ಟಸಾಧ್ಯವಾಗಿದೆ. ಬಹುತೇಕರು ಗುಣಮುಖರಾಗುತ್ತಿದ್ದರೂ ಆತಂಕ ಮಾತ್ರ ಸಹಜವಾಗಿ ಇದ್ದೇ ಇರುತ್ತದೆ‌. 

ಇದೀಗ ಕೊರೋನಾ ಸೋಂಕಿತರ ಸಂದರ್ಶನ ಮಾಡಿದ ನಿರೂಪಕರೊಬ್ಬರಿಗೆ ಸೋಂಕು ತಗುಲಿದೆ‌.
ಹೌದು ಅಮೆರಿಕಾದಲ್ಲಿಯೂ ಕೊರೋನಾ ರುದ್ರತಾಂಡವವಾಡುತ್ತಿದೆ. ಅಲ್ಲೀಗ ಜನಪ್ರಿಯ ನಿರೂಪಕರೊಬ್ಬರಿಗೆ ಕೊರೋನಾ ಸೋಂಕು ತಗುಲಿದೆ.
ನ್ಯೂಯಾರ್ಕ್ ಗವರ್ನರ್ ಆಂಡ್ರೂ ಕ್ಯೂಮೊ ಸಹೋದರ , ಸಿಎನ್ ಎನ್ ನ ಪ್ರೈಮ್ ಟೈಮ್ ನಿರೂಪಕ ಕ್ರಿಸ್ ಕ್ಯೂಮೊಗೆ ಪಾಸಿಟಿವ್ ಇರುವುದು ದೃಢಪಟ್ಟಿದೆ.


ಮಂಗಳವಾರ ರಾತ್ರಿ‌ 9 ಕ್ಕೆ‌ ಪ್ರೈಮ್ ನ್ಯೂಸ್ ಗೆ ಬರಬೇಕಿತ್ತು. ಆದರೆ, ಅದಕ್ಕೂ ಮೊದಲು ಅವರು ಕೊರೋನಾಗೆ ತುತ್ತಾಗಿರುವುದಾಗಿ ತಿಳಿಸಿದ್ದಾರೆ. ಅವರು ಕೊರೋನಾ ಸೋಂಕಿತರ ವಿಶೇಷ ಸಂದರ್ಶನ ಮಾಡಿದ್ದರು‌.

“ಈ ಕಷ್ಟಕಾಲದಲ್ಲಿ ನನ್ನ ಪರಿಸ್ಥಿತಿ ಇನ್ನಷ್ಟು ಭೀಕರವಾಗಿ ಬದಲಾಗಿದೆ. ಕಳೆದ ಕೆಲ ದಿನಗಳಿಂದ ಕೊರೊನಾ ವೈರಸ್ ಸೋಂಕಿಗೆ ಒಳಗಾದವರನ್ನು, ಆ ಮಹಾಮಾರಿಯನ್ನು ಗೆದ್ದವರನ್ನೂ ನಿಮ್ಮ ಮುಂದೆ ತಂದಿದ್ದೆ. ಆ ಬಳಿಕ ನನಗೆ ಜ್ವರ ಶುರುವಾಯಿತು. ಪರೀಕ್ಷಿಸಿದಾಗ ಕೊರೊನಾ ಪಾಸಿಟಿವ್ ಎಂದು ಗೊತ್ತಾಗಿದೆ. ಇದನ್ನು ನನ್ನ ಮಕ್ಕಳು, ಪತ್ನಿ ಕ್ರಿಸ್ಟಿನಾಗೆ ಸೋಂಕು ಹರಡಲು ಬಿಡಲ್ಲ. ಒಂದು ವೇಳೆ ಅದೇ ಏನಾದರು ನಡೆದರೆ ಇದರಿಂದ ನಾನು ಅನುಭವಿಸುತ್ತಿರುವ ನೋವಿಗಿಂತ ಇನ್ನಷ್ಟು ವ್ಯಥೆ ಪಡಬೇಕಾಗುತ್ತದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಅಮೆರಿಕಾದಲ್ಲಿ ಕೊರೋನಾ ಪೀಡಿತರ ಸಂಖ್ಯೆ 2 ಲಕ್ಷ ತಲುಪಿದ್ದು, ಮೂರು ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 6241 ಮಂದಿ ಚೇತರಿಸಿಕೊಂಡಿರುವುದಾಗಿ ವರದಿಯಾಗಿದೆ.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...