ಕೊರೋನಾಗೆ ಅಮೆರಿಕಾ ತತ್ತರ ; 24 ಗಂಟೆಯಲ್ಲಿ 1800 ಮಂದಿ ಸಾವು ..!

Date:

ಕೊರೋನಾಗೆ ಅಮೆರಿಕಾ ತತ್ತರ ; 24 ಗಂಟೆಯಲ್ಲಿ 1800 ಮಂದಿ ಸಾವು ..!

ಕೊರೋನಾ ಎಂಬ ಮಹಾಮಾರಿ ಜಗತ್ತಿನಲ್ಲಿ ತನ್ನ ಅಟ್ಟಹಾಸವನ್ನು ಮೆರೆಯುತ್ತಿದೆ . ಕೊರೋನಾ ಹೆಮ್ಮಾರಿಯ ಹಾವಳಿಗೆ ಇಡೀ ವಿಶ್ವ ನಲಗುತ್ತಿದೆ . ಕಂಪನಿಗಳು ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ,‌ಮನೆಯಲ್ಲೇ ಕೆಲಸ ಮಾಡಿ ಎಂದಿವೆ . ಸರ್ಕಾರಿ ಕೆಲಸಗಾರರಿಗೆ ರಜೆ ಘೋಷಣೆಯಾಗಿದೆ . ಕೆಲಸಕ್ಕೆಂದು ದೊಡ್ಡ ದೊಡ್ಡ ನಗರ ಸೇರಿದವರಿಗೆ ಹುಟ್ಟೂರು ನೆನಪಾಗಿದೆ . ತಮ್ಮ ತಮ್ಮ ಊರಿನತ್ತ ಮುಖಮಾಡಿದ್ದಾರೆ . ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸೇವೆಗಳು ಸ್ಥಗಿತಗೊಂಡಿವೆ . ಭಾರತ ಕೂಡ ಮಹಾ ಮಾರಿ ವಿರುದ್ಧ ಸಮರ ಸಾರಿ ಲಾಕ್ ಡೌನ್ ಮೊರೆ ಹೋಗಿದೆ‌ .

ಇನ್ನು ಕೊರೋನಾದಿಂದ ವಿಶ್ವದಲ್ಲೇ ಅತೀ ಹೆಚ್ಚು ಸಂಕಷ್ಟಕ್ಕೆ ಸಿಲುಕಿರುವ ದೇಶ ವಿಶ್ವದ ದೊಡ್ಡಣ್ಣ ಎಂದು ಕರೆಯಲ್ಪಡುವ ಅಮೆರಿಕಾ . ಜಗತ್ತಿನ ಹಿರಿಯಣ್ಣ ಅಮೆರಿಕಾ ಕೊರೋನಾ ದಿಂದ ಜರ್ಜರಿತವಾಗಿದೆ . ಅತೀ ಹೆಚ್ಚು ಸೋಂಕಿತರು ಇದ್ದಾರೆ . ಮರಣ ಮೃದಂಗ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ .

ಹೌದು ಅಮೆರಿಕಾದಲ್ಲಿ ಕೊರೋನಾ ಸೋಂಕಿನಿಂದ ಸಾವಿರಾರು ಜನ ಮೃತಪಡುತ್ತಿದ್ದು , ದಿಕ್ಕು ಕಾಣದೆ ಆ ದೇಶ ಮಂಕಾಗಿದೆ . ಕೊರೋನಾ ಮರಮೃದಂಗ ದಿನೇ ದಿನೇ ಹೆಚ್ಚುತ್ತಲೇ ಇದೆ‌ .

ಕಳೆದ 24 ಗಂಟೆಗಳಲ್ಲಿ 1800 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ . ಹೀಗಾಗಿ ಆತಂಕ ಹೆಚ್ಚಿದೆ . ಅಷ್ಟೇ ಅಲ್ಲದೆ 42 ಸಾವಿರ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 4. 46 ಲಕ್ಷ ದಾಟಿದೆ . ಸತ್ತವರ ಸಂಖ್ಯೆ ಬರೋಬ್ಬರಿ 14 ಸಾವಿರ ..!

ಈ ನಡುವೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಕೊರೋನಾ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ವಿಶ್ವ ಆರೋಗ್ಯ ಸಂಸ್ಥೆ ( WHO ) ಎಚ್ಚರಿಕೆಯನ್ನು ನೀಡಿದೆ .

ವಿಶ್ವ ಆರೋಗ್ಯ ಸಂಸ್ಥೆ ಚೀನಾಕ್ಕೆ ಹತ್ತಿರವಾಗಿದೆ ಎಂಬ ಟ್ರಂಪ್ ಹೇಳಿಕೆಗೆ WHO ಗರಂ ಆಗಿ ಪ್ರತಿಕ್ರಿಯೆ ನೀಡಿದೆ .
” ಮತ್ತಷ್ಟು ಹೆಣ ಉರುಳುವುದು ಬೇಡ ಎಂದಾದರೆ ಕೊರೋನಾ ವೈರಸ್ ವಿಚಾರದಲ್ಲಿ ಎಲ್ಲರೂ ಒಂದಾಗಬೇಕಿದೆ . ಈ ಕೊರೋನಾ ವಿರುದ್ಧ ಹೋರಾಡಲು ಚೀನಾ ಮತ್ತು ಅಮೆರಿಕಾ ಒಂದಾಗಿ ಮುಂದೆ ಬರಬೇಕಿ‌ದೆ ” ಎಂದು ಕಿವಿ ಹಿಂಡಿದೆ .

” ಅಮೆರಿಕಾ ವಿಶ್ವ ಆರೋಗ್ಯ ಸಂಸ್ಥೆಗೆ ಹೆಚ್ಚು ಪ್ರಮಾಣದಲ್ಲಿ ಹಣ ನೀಡುತ್ತದೆ . ಆದಾಗ್ಯೂ WHO ಚೀನಾ ಕಡೆ ಹೆಚ್ಚು ಒಲವು ತೋರುತ್ತಿದೆ . ಚೀನಾದವರಿಗೆ ಬರಲು ಅವಕಾಶ ನೀಡಿ ಎಂದು WHO ಹೇಳಿತ್ತು . ಅದೃಷ್ಟವಶಾತ್ ನಾವು ಆ ರೀತಿ ಮಾಡಿರಲಿಲ್ಲ . ಈ ರೀತಿ ದಾರಿ ತಪ್ಪಿಸುವ ನಿರ್ದೇಶನಗಳನ್ನು ಯಾಕೆ ನೀಡಬೇಕು ಎಂದಿದ್ದರು .

ಕೊರೋನಾ ಕಾಣಿಸಿಕೊಂಡಾಗ ಅಮೆರಿಕಾದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಿಲ್ಲ . ನ್ಯೂಯಾರ್ಕ್ ಮೊದಲಾದ ಜನನಿಬಿಡ ನಗರಗಳಲ್ಲಿ ಕಾಣಿಸಿಕೊಂಡ ವೈರಸ್ ಕಾಡ್ಗಿಚ್ಚಿನಂತೆ ಹರಡಿತು ಎನ್ನಲಾಗಿದೆ .

ದಿ ನ್ಯೂ ಇಂಡಿಯನ್ ಟೈಮ್ಸ್ ನಿಂದ ಹಿಮಾಲಯ ಡ್ರಗ್ಸ್ ಸಹಯೋಗದಲ್ಲಿ ಮಿತ್ರರಿಗೆ ಸ್ಯಾನಿಟೈಸರ್ ವಿತರಣೆ

ಈ ಗೂಗಲ್ ಟ್ರಿಕ್ಸ್ ಗಳು ನಿಮಗೆ ಗೊತ್ತಾ..?

ವೆಂಗ್ ಸರ್ಕಾರ್ ಮಾಡಿರೋ ಆ ರೆಕಾರ್ಡ್ ಸಚಿನ್ ಮುರಿದಿಲ್ಲ ; ಕೊಹ್ಲಿಯಿಂದಲೂ ಇದುವರೆಗೆ ಸಾಧ್ಯವಾಗಿಲ್ಲ …!

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....