ಒಂದೇ ಒಂದು ಒಡಿಐ ಶತಕ ಸಿಡಿಸದ 5 ಸ್ಟಾರ್ ಬ್ಯಾಟ್ಸ್ ಮನ್ ಗಳು …! ಈ ಐವರಲ್ಲಿ ಒಬ್ಬರು ಭಾರತೀಯರು ‌..!

Date:

ಒಂದೇ ಒಂದು ಒಡಿಐ ಶತಕ ಸಿಡಿಸದ 5 ಸ್ಟಾರ್ ಬ್ಯಾಟ್ಸ್ ಮನ್ ಗಳು …! ಈ ಐವರಲ್ಲಿ ಒಬ್ಬರು ಭಾರತೀಯರು ‌..!

ಕ್ರಿಕೆಟ್ ಬಹುತೇಕರ ಆರಾದ್ಯ ಕ್ರೀಡೆ . 1971 ರಲ್ಲಿ ಏಕದಿನ ಕ್ರಿಕೆಟ್ ಆರಂಭವಾಯಿತು . ಅದಕ್ಕೂ ಮೊದಲು ಬರೀ ಟೆಸ್ಟ್ ಕ್ರಿಕೆಟ್ ಇತ್ತು . ಒಂದು ದಿನದ ಕ್ರಿಕೆಟ್ ಎಂಬ ಹೊಸ ಮಾದರಿ ಪರಿಚಯ ಆಯಿತು . ನಂತರದ ದಿನಗಳಲ್ಲಿ ಟಿ20 ಕ್ರಿಕೆಟ್ ಕೂಡ ಪರಿಚಯವಾಯಿತು . ಈಗ ಮೂರೂ ಮಾದರಿಯ ಕ್ರಿಕೆಟ್ ಇದೆ .

ಇನ್ನು ಏಕದಿನ ಕ್ರಿಕೆಟಲ್ಲಿ ಅನೇಕ ದಾಖಲೆಗಳು ಸೃಷ್ಟಿಯಾಗಿವೆ . ವಿಶ್ವ ಕ್ರಿಕೆಟ್ ನಲ್ಲಿ ಅನೇಕ ಸ್ಟಾರ್ ಆಟಗಾರರು ಮಿಂಚಿದ್ದಾರೆ . ಅವರಲ್ಲಿ ಸ್ಟಾರ್ ಆಟಗಾರರೇ ಏಕದಿನ ಮಾದರಿಯಲ್ಲಿ ಶತಕ ಸಿಡಿಸಿಲ್ಲ …! ಅಂಥಾ ಐದು ಸ್ಟಾರ್ ಬ್ಯಾಟ್ಸ್ ಮನ್ ಗಳಲ್ಲಿ ಭಾರತದ ಕ್ರಿಕೆಟಿಗ ಕೂಡ ಇದ್ದಾರೆ . ಆ ಪಂಚ ಸ್ಟಾರ್ ಆಟಗಾರರ ಪಟ್ಟಿ ಇಲ್ಲಿದೆ .

ವೆಸ್ಟ್ ಇಂಡೀಸ್ ಸ್ಟಾರ್ ಸ್ಮಿತ್ :

ಏಕದಿನ ಕ್ರಿಕೆಟಲ್ಲಿ ಶತಕ ಸಿಡಿಸಿದ ಸ್ಟಾರ್ ಬ್ಯಾಟ್ಸ್ ಮನ್ ಗಳಲ್ಲಿ ಮೊದಲ ಸ್ಥಾನ ವೆಸ್ಟ್ ಇಂಡೀಸ್ ಆಲ್ ರೌಂಡರ್ ಡ್ವೇನ್ ಸ್ಮಿತ್ ಅವರದ್ದಾಗಿದೆ . 2004 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಮೂಲಕ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು .
105 ಏಕದಿನ ಮ್ಯಾಚ್ ಗಳನ್ನು ಆಡಿರುವ ಅವರು 18.57 ಸರಾಸರಿ ಮತ್ತು 92.69 ಸ್ಟ್ರೈಕ್ ರೇಟ್ ನಲ್ಲಿ 1560ರನ್ ಬಾರಿಸಿದ್ದಾರೆ . ಒಂದೇ ಒಂದು ಶತಕ ಸಿಡಿಸಿಲ್ಲ .

ಫಿರೋಜ್ ಶಾ ಕೋಟ್ಲಾದಲ್ಲಿ ಭಾರತದ ವಿರುದ್ಧ ಶತಕದ ಅಂಚಿನಲ್ಲಿ ಎಡವಿದರು . 97 ರನ್ ಬಾರಿಸಿದ್ದರು. ಆ ವೇಳೆ ಮೊಹಮ್ಮದ್ ಶಮಿ ಬೌಲಿಂಗ್ ನಲ್ಲಿ ಔಟಾದರು .

ಬಾಂಗ್ಲಾ ಆಟಗಾರ ಹಬೀಬುಲ್ ಬಾಶರ್ :


ಬಾಂಗ್ಲಾದೇಶ ಕ್ರಿಕೆಟ್‌ನ ಮಾಜಿ ನಾಯಕ ಮತ್ತು ಟಾಪ್ ಆರ್ಡರ್ ಬ್ಯಾಟ್ಸ್‌ಮನ್ ಹಬೀಬುಲ್ ಬಾಶರ್ ಕೂಡ ಏಕದಿನ ಕ್ರಿಕೆಟಲ್ಲಿ ಶತಕ ಬಾರಿಸಿಲ್ಲ . ಹಬಿಬುಲ್ ಬಾಶರ್ ತಮ್ಮ ರಾಷ್ಟ್ರೀಯ ಕ್ರಿಕೆಟ್ ತಂಡದ ಪರವಾಗಿ 111 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಆದರೆ ವೃತ್ತಿಜೀವನದಲ್ಲಿ ಒಂದೇ ಒಂದು ಶತಕ ಗಳಿಸಿಲ್ಲ . ಅವರ ವೃತ್ತಿಜೀವನದ ಅವಧಿಯಲ್ಲಿ, ಹಬೀಬುಲ್ 21.68ರ ಸರಾಸರಿಯಲ್ಲಿ 2168 ರನ್ ಗಳಿಸಿದರು ಮತ್ತು ಸ್ಟ್ರೈಕ್ ರೇಟ್ 60.65. ವೃತ್ತಿ ಜೀವನದಲ್ಲಿ ಬಾಶರ್ 14 ಅರ್ಧಶತಕ ಇನ್ನಿಂಗ್ಸ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 78 ಆಗಿತ್ತು. ಹಬೀಬುಲ್ 2007 ರಲ್ಲಿ ಹರಾರೆ ಮೈದಾನದಲ್ಲಿ ಜಿಂಬಾಬ್ವೆ ವಿರುದ್ಧ ಈ ಆಟ ಆಡಿದ್ದರು .

ಇಂಗ್ಲೆಂಡ್ ನ ಮೈಕೆಲ್ ವಾನ್ :

ಏಕದಿನ ಶತಕಕ ವಂಚಿತ ಇನ್ನೊಬ್ಬ ಸ್ಟಾರ್ ಆಟಗಾರ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕೆಲ್ ವಾನ್. ಅಚ್ಚರಿಯಾದ್ರೂ ಇದು ಸತ್ಯ .
ಮೈಕೆಲ್ ವಾನ್ ಏಕದಿನ ಕ್ರಿಕೆಟ್‌ನಲ್ಲಿ ಒಂದೇ ಒಂದು ಶತಕವನ್ನು ಹೊಂದಿಲ್ಲ .

ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ಗೆ ಸಾಕಷ್ಟು ಹೆಸರು ತಂದುಕೊಟ್ಟ ಆಟಗಾರ ಮೈಕೆಲ್ ವಾನ್ ತಮ್ಮ ವೃತ್ತಿಜೀವನದಲ್ಲಿ 86 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಸರಾಸರಿ 27.15 ರ ಸರಾಸರಿ ಹೊಂದಿದ್ದು 68.39 ಸ್ಟ್ರೈಕ್ ರೇಟ್ ನಲ್ಲಿ 1982ರನ್ನು ಗಳಿಸಿದ್ದಾರೆ . ಆದರೆ ಶತಕ ಬಾರಿಸಿಲ್ಲ . ಜಿಂಬಾಬ್ವೆ ವಿರುದ್ಧ ಗಳಿಸಿದ 90 ರನ್ನೇ ಅಗತ್ಯ .

ಪಾಕಿಸ್ತಾನದ ಮಿಸ್ಬಾ ಉಲ್ ಹಕ್ :

ಪಾಕಿಸ್ತಾನ ಮಾಜಿ ನಾಯಕ ಮಿಸ್ಬಾ ಉಲ್ ಹಕ್ ತಮ್ಮ ವೃತ್ತಿಜೀವನದಲ್ಲಿ 162 ಏಕದಿನ ಪಂದ್ಯಗಳನ್ನು ಆಡಿದ್ದಾರೆ ಮತ್ತು 43.40 ಸರಾಸರಿಯಲ್ಲಿ 5122 ರನ್ ಗಳಿಸಿದ್ದಾರೆ, ಆದರೆ ಈ ಮಧ್ಯೆ ಅವರು ಒಂದೇ ಶತಕ ಗಳಿಸಿಲ್ಲ. 42 ಅರ್ಧಶತಕ ಬಾರಿಸಿದ್ದರು.

ಭಾರತದ ದಿನೇಶ್ ಕಾರ್ತಿಕ್

ಭಾರತದ ದಿನೇಶ್ ಕಾರ್ತಿಕ್ ಕೂಡ ಚಿರಪರಿಚಿತ ಹೆಸರು . ವಿಕೆಟ್ ಕೀಪರ್ , ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಭಾರತದ ಪರ 94 ಏಕದಿನ ಪಂದ್ಯಗಳನ್ನು ಆಡಿದ್ದಾರೆ . ಆದರೆ ಒಂದೇ ಒಂದು ಸೆಂಚುರಿ ಸಿಡಿಸಿಲ್ಲ .
ವೃತ್ತಿಜೀವನದ 94 ಏಕದಿನ ಪಂದ್ಯಗಳಲ್ಲಿ 30.20 ಸರಾಸರಿಯಲ್ಲಿ 1752 ರನ್ ಗಳಿಸಿದ್ದಾರೆ. 9 ಅರ್ಧಶತಕಗಳನ್ನು ಗಳಿಸಿದ್ದಾರೆ. 79 ಅವರ ಅತ್ಯಧಿಕ ಸ್ಕೋರ್. 2019ರ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದಲ್ಲಿ ಅವಕಾಶವನ್ನು ಪಡೆದುಕೊಳ್ಳುವಲ್ಲಿ ಕಾರ್ತಿಕ್ ಯಶಸ್ವಿಯಾಗಿದ್ದರು.ಆದರೆ ಸಿಕ್ಕ ಅವಕಾಶದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಕಾರ್ತಿಕ್ ವಿಫಲರಾಗಿದ್ದನ್ನು ಕೂಡ ಇಲ್ಲಿ ಸ್ಮರಿಸಬಹುದು.

ಮಲ ಅತಿಯಾದ ದುರ್ವಾಸನೆ ಬರುತ್ತಿದ್ರೆ ಎಚ್ಚರ .. ಎಚ್ಚರ ‌.. ಕ್ಯಾನ್ಸರ್ ಲಕ್ಷಣವಿರಬಹುದು ..!

ಇನ್ ಸ್ಟಾಗ್ರಾಂ ಡೈರೆಕ್ಟ್ ಮೆಸೇಜ್ ಡೆಸ್ಕ್ ಟಾಪ್ ಗೂ ಲಭ್ಯ ..!

ಇನ್ಮುಂದೆ ಬೆಡ್ ರೂಂ, ಮುತ್ತಿನ ದೃಶ್ಯ ಚಿತ್ರೀಕರಣ ಹೇಗೆ ? ಬಾಲಿವುಡ್ ಡೈರೆಕ್ಟರ್ ಹೀಗೊಂದು ಪ್ರಶ್ನೆ ಎತ್ತಿದ್ದೇಕೆ ..?

ಮೆಗಾಸ್ಟಾರ್ ಚಿರಂಜೀವಿ ಸಿನಿಮಾಕ್ಕೆ ನೋ ಅಂದ್ರಾ ಅನುಷ್ಕಾ ಶೆಟ್ಟಿ …? ಅನುಷ್ಕಾ ಬದಲಿಗೆ ಯಾರು ?

ಬಂದೇ ಬಿಟ್ಟಿತು ಸ್ಯಾಮ್‌ಸಂಗ್ 5G ಸ್ಮಾರ್ಟ್‌ಫೋನ್ ….!

ನಾಪತ್ತೆ ಆಗಿದ್ದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಪ್ರತ್ಯಕ್ಷ …! ಎಲ್ಲಿ ? ಏನ್ ವಿಷ್ಯ ? ಏನಂದ್ರು ?

ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡುವ ವಿಶ್ವಾಸದಲ್ಲಿ ಕನ್ನಡಿಗ …!

ಲಾಕ್ ಡೌನ್ ನಲ್ಲಿ ರೋರಿಂಗ್ ಸ್ಟಾರ್ ಶ್ರೀಮುರುಳಿಯಿಂದ ಜೀವನ ಪಾಠ …!

ಕೊರೋನಾ ಎಮರ್ಜೆನ್ಸಿ ನಡುವೆಯೇ ಸದ್ದಿಲ್ಲದೆ IPL ಆಯೋಜನೆಗಾಗಿ BCCI ಚಿಂತನೆ ..!

2011ರ ವರ್ಲ್ಡ್ ಕಪ್ ಗೆಲುವಿನ ಹಿಂದಿನ ಆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಧೋನಿ ಅಲ್ಲ …!

ಕೆಟ್ಟದಾಗಿ ಸ್ಪರ್ಶಿಸಿದ್ದ ಆ ಕ್ರಿಕೆಟರ್ ಗೆ ಪ್ರಿಯಾಮಣಿ ಕಪಾಳಮೋಕ್ಷ ಮಾಡಿದ್ದು ಸತ್ಯನಾ?

2011 ರ ವಿಶ್ವಕಪ್ ನಲ್ಲಿ ಸಚಿನ್ ಪುತ್ರ ಅರ್ಜುನ್ ಜೊತೆ ಮ್ಯಾಚ್ ನೋಡಿದ್ದ ಪೋರ ಇವತ್ತು ಟೀಮ್ ಇಂಡಿಯಾ ಆಟಗಾರ…!

ಇದು ಕಾಳಿಂಗ ಸರ್ಪಗಳ ರಾಜಧಾನಿ…! ಇದು ನಿಮಗೂ ಚಿರಪರಿಚಿತ ..!

ಮನಸ್ಸು ಗಾಯಗೊಳಿಸಿ ಕ್ಷಮೆ ಎಂಬ ಮುಲಾಮು ಹಚ್ಚುವುದಲ್ಲ…

ಧೋನಿ ನಾಯಕತ್ವದ ವಿಶ್ವ ಏಕದಿನ ತಂಡ ಪ್ರಕಟಿಸಿದ ವಾಸಿಮ್ ಜಾಫರ್ ..!

ದಿ ನ್ಯೂ ಇಂಡಿಯನ್ ಟೈಮ್ಸ್ ನಿಂದ ಹಿಮಾಲಯ ಡ್ರಗ್ಸ್ ಸಹಯೋಗದಲ್ಲಿ ಮಿತ್ರರಿಗೆ ಸ್ಯಾನಿಟೈಸರ್ ವಿತರಣೆ

ನೀವಿಬ್ಬರು ಹೀಗಿದ್ದರೆ ನಿಮ್ಮ ನಡುವೆ ಇರೋದು ಬರೀ ಫ್ರೆಂಡ್ಶಿಪ್ ಅಲ್ಲ…!

ಫ್ರೀ ಟಾಕ್ ಟೈಮ್ ಆಫರ್ , ವ್ಯಾಲಿಡಿಟಿ ವಿಸ್ತರಣೆ ನೀಡುತ್ತಿವೆ‌ ಟೆಲಿಕಾಂ ಕಂಪನಿಗಳು‌..!

ಬಾಸ್ ನೀನೇನು ಮಾಡ್ತಿದ್ಯಾ … ? ಸಿಕ್ಸರ್ ಸಿಡಿಸಿದ ಅಯ್ಯರ್ ಗೆ ದ್ರಾವಿಡ್ ಕೂಲ್ ವಾರ್ನಿಂಗ್ ..!

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...