ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ ಒಸಾಮಾ ಬಿನ್ ಲಾಡೆನ್ ನನ್ನು ಅಮೇರಿಕಾ ಮಟ್ಟ ಹಾಕಿದ್ದು ತೀರಾ ಹಳೆಯ ವಿಚಾರ. ಅಮೇರಿಕಾ ಲಾಡೆನ್ ನನ್ನು ಸಮುದ್ರಕ್ಕೆ ಎಸೆಯಲಾಗಿದೆ ಅಂತ ಸ್ಟೇಟ್ ಮೆಂಟ್ ಕೊಟ್ಟಿತ್ತು. ಇದಾದಮೇಲೆ ಅಮೇರಿಕನ್ ಇಂಟಲಿಜೆನ್ಸ್ ನಿಂದ ಮಾಹಿತಿಯೊಂದು ಸೋರಿಕೆಯಾಗಿತ್ತು. ಆ ಮಾಹಿತಿಯ ಪ್ರಕಾರ ಲಾಡೆನ್ ನನ್ನು ಸಮುದ್ರಕ್ಕೆ ಎಸೆಯಲಾಗಿಲ್ಲ. ಅಸಲಿಗೆ ಅಂತರ್ಜಾಲದಲ್ಲಿರುವುದು ಒಸಾಮಾ ಬಿನ್ ಲಾಡೆನ್ ಡೆಡ್ ಬಾಡಿಯೇ ಅಲ್ಲ. ಆ ಡೆಡ್ ಬಾಡಿಯನ್ನು ಎಡಿಟ್ ಮಾಡಲಾಗಿದೆ ಎನ್ನಲಾಗಿದೆ. ಸೂಕ್ಷ್ಮವಾಗಿ ಗಮನಿಸಿದಾಗ ಗೂಗಲ್ನಲ್ಲಿರುವ ಒಸಾಮನ ಫೋಟೋವನ್ನು ಎಡಿಟ್ ಮಾಡಲಾಗಿದೆ ಎಂಬುದು ಖಚಿತವಾಗುತ್ತದೆ. ಹಾಗಾದ್ರೇ ಒಸಾಮ ಸತ್ತೇ ಇಲ್ವಾ..?
ಆತನ ಹೆಸ್ರು ಒಸಾಮ ಬಿನ್ ಮಹಮ್ಮದ್ ಬಿನ್ ಅವಾದ್ ಬಿನ್ ಲಾಡೆನ್…! ಪರಮ ಜಿಹಾದಿ, ಅಮೇರಿಕಾದ ಸೈನ್ಯದಲ್ಲಿದ್ದ. ಯುದ್ಧದ ಪಟ್ಟು, ಕುತಂತ್ರಗಳನ್ನು ಅಮೇರಿಕನ್ನರಿಂದ ಕಲಿತ. ಆದರೆ ಯಾವಾಗ ಅಮೇರಿಕಾ ಮುಸಲ್ಮಾನರ ಮೇಲೆ ಮುರಕ್ಕೊಂಡು ಬೀಳತೊಡಗಿತ್ತೋ ಅವನೊಳಗೊಬ್ಬ ಜಿಹಾದಿ ಹುಟ್ಟಿಕೊಂಡಿದ್ದ. ಅಮೇರಿಕಾ ಸೈನ್ಯದಿಂದ ಹೊರಬಿದ್ದ. ಕೆಲ ವರ್ಷ ನಾಪತ್ತೆಯಾದ. ಅಫ್ಘಾನ್ ನಲ್ಲಿ ಸೈನ್ಯ ಕಟ್ಟಿದ. ಪಾಕಿಸ್ತಾನದ ಬೆಂಬಲ ಪಡೆದ. ಅರಬ್ ದೇಶದಿಂದ ಹಣಕಾಸಿನ ನೆರವು ಪಡೆದ. ಬಾಂಬು, ವೆಪನ್ನು ಗಳನ್ನು ರಾಶಿ ಹಾಕಿಕೊಂಡ. ಓಮರ್, ಮುಲ್ಲಾರಂಥ ರಕ್ಕಸರನ್ನು ಜೊತೆ ಮಾಡಿಕೊಂಡ. ಎಲ್ಲಾ ಪರ್ಫೆಕ್ಟ್ ಆಗಿದೆ ಅಂತ ಅನಿಸಿದ್ದೇ ಜಗತ್ತಿನಲ್ಲಿ ಮುಸ್ಲೀಮರ ಮೇಲೆ ದೌರ್ಜನ್ಯ ಆಗುತ್ತಿದೆ ಎಂದ. ಕಟ್ಟರ್ ಮುಸ್ಲೀಮರ ಬೆಂಬಲ ಪಡೆದ. ಅಲ್ ಖೈದಾ ಎಂಬ ಖತರ್ನಾಕ್ ಉಗ್ರ ಸಂಘಟನೆಯನ್ನು ಹುಟ್ಟುಹಾಕಿದ.
ಆದರೆ ಲಾಡೆನ್ ನ ಜಿಹಾದಿ ಮಕ್ಕಳ ಕೃತ್ಯಗಳು, ಹಾವಳಿಗಳು ಅಷ್ಟೇನೂ ಸದ್ದು ಮಾಡುತ್ತಿರಲಿಲ್ಲ. ಆದರೆ ಅದ್ಯಾವಾಗ ಅಮೇರಿಕಾದ ಎರಡು ಬೃಹತ್ ಕಟ್ಟಡಗಳ ಮೇಲೆ ಲಾಡೆನ್ ವಿಮಾನ ನುಗ್ಗಿಸಿಬಿಟ್ಟನೋ ಇಡೀ ಜಗತ್ತೇ ಬೆಚ್ಚಿಬಿದ್ದಿತ್ತು. ಅಮೇರಿಕಾ ತತ್ತರಿಸಿಹೋಗಿತ್ತು. ಆದ ಅವಘಡಗಿಂತಲೂ, ಲಾಡೆನ್ ಕೊಟ್ಟ ಆಘಾತವನ್ನು ಅದು ಹಲವಾರು ವರ್ಷಗಳು ಮರೆಯಲಿಲ್ಲ. ಅದು 2001ರ ಇಸವಿ. ಜಾರ್ಜ್ ಬುಷ್ ಅಧಿಕಾರಕ್ಕೆ ಬಂದು ಕೇವಲ ಒಂಬತ್ತು ತಿಂಗಳಾಗಿತ್ತು. ಬುಷ್ ಮೊದಲೇ ಯುದ್ಧದಾಹಿ. ಅವನ ಆಡಳಿತದ ಸಮಯದಲ್ಲೇ ಲಾಡೆನ್ ಪೈಶಾಚಿಕತೆ ಮೆರೆದಿದ್ದ. ಈ ಘಟನೆ ನಡೆದ ಬೆನ್ನಿಗೆ ಬುಷ್ ಆದೇಶದಂತೆ ಅಮೇರಿಕಾ ಸೈನಿಕರು, ಅಫ್ಘಾನಿಸ್ತಾನದ ಮೇಲೆ ಬಾಂಬಿನ ಸುರಿಮಳೆಗೈದರು. ಲಾಡೆನ್ ಅವಿತಿದ್ದಾನೆ ಎನ್ನಲಾದ ಗುಡ್ಡಗಾಡುಗಳ ಮೇಲೆ ಅಮೇರಿಕಾದ ವಾಯುಸೇನೆ ಬಾಂಬುಗಳು ಸುರಿಮಳೆಗೈದಿತ್ತು. ಅನೇಕ ಸಾವು ನೋವುಗಳು ಸಂಭವಿಸಿತ್ತು. ಅವತ್ತು ಅಮೇರಿಕಾ, ಯಾವುದೇ ಕಾರಣಕ್ಕೂ ಲಾಡೆನ್ ಬದುಕಿರಲು ಸಾಧ್ಯವಿಲ್ಲ ಎಂದು ಭಾವಿಸಿ ಸುಮ್ಮನಾಯಿತು. ಆನಂತರ ಅಮೇರಿಕಾದ ಅಧ್ಯಕ್ಷರಾಗಿ ಬರಾಕ್ ಓಬಾಮ ಚುಕ್ಕಾಣಿ ಹಿಡಿದರು. ಇವರು ಅಧಿಕಾರಕ್ಕೆ ಬಂದ ಕೆಲ ತಿಂಗಳಿಗೆ ಲಾಡೆನ್ ಬದುಕಿದ್ದಾನೆ ಎಂಬ ಮಾಹಿತಿ ಬಂದಿತ್ತು. ಅಮೇರಿಕಾದಲ್ಲಿ ಹಾವಳಿಯಿಟ್ಟ, ಸಾವಿರಾರು ಜನರ ಸಾವಿಗೆ ಕಾರಣವಾದ ಲಾಡೆನ್ನನ್ನು ಯಾವುದೇ ಕಾರಣಕ್ಕೂ ಉಳಿಸುವುದಿಲ್ಲ ಅಂತ ಒಬಾಮ ಪ್ರತಿಜ್ಞೆ ಮಾಡಿದ್ದರು. ಅದು ಅಮೇರಿಕಾದ ಅಸ್ತಿತ್ವದ ವಿಚಾರ ಮಾತ್ರವಾಗಿರಲಿಲ್ಲ, ರಿವೇಂಜಿನ ಸಮಾಚಾರವಾಗಿತ್ತು. ಕೊನೆಗೂ ಲಾಡೆನ್ ಪಾಕಿಸ್ತಾನದ ಅಬೊಟ್ಟಾಬಾದ್ನಲ್ಲಿ ತಲೆ ಮರೆಸಿಕೊಂಡಿದ್ದಾನೆ ಎಂಬ ರಹಸ್ಯವನ್ನು ಭೇದಿಸಿದ ಅಮೇರಿಕಾ ಲಾಡೆನ್ ಹತ್ಯೆಗೆ ತನ್ನ ಸೇನೆಯನ್ನು ಕಳುಹಿಸಿತ್ತು.
ಅಮೇರಿಕಾ ಸೇನೆ ಲಾಡೆನ್ ಅಡಗಿದ್ದ ಮನೆಗೆ ನುಗ್ಗಿ ಸಿಕ್ಕಸಿಕ್ಕವರನ್ನೆಲ್ಲಾ ಗುಂಡಿಟ್ಟು ಕೊಂದಿತ್ತು. ಕೊನೆಗೆ ಲಾಡೆನ್ ಕೂಡ ಅಮೇರಿಕನ್ನರ ಗುಂಡಿಗೆ ಬಲಿಯಾದ..! ಹಾಗಂತ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮ ಮೇ 02, 2011ರಂದು ಘೋಷಣೆ ಮಾಡಿದ್ದರು. ಇಂಟರ್ ನೆಟ್ಟಿನಲ್ಲಿ ಲಾಡೆನ್ ಡೆಡ್ ಬಾಡಿಯ ಫೋಟೋ ಕೂಡ ಅಪ್ ಲೋಡ್ ಆಗಿತ್ತು. ಇವತ್ತಿಗೂ ಆಲ್ ಮೋಸ್ಟ್ ಜನ್ರಿಗೆ ಇದು ಲಾಡೆನ್ ಡೆಡ್ ಬಾಡಿ ಫೋಟೋ ಅಲ್ಲ ಎನ್ನುವುದು ಗೊತ್ತಿಲ್ಲ. ಎಲ್ಲರೂ ಇದನ್ನೇ ಲಾಡೆನ್ ಡೆಡ್ ಬಾಡಿ ಅಂತ ಸಂಭ್ರಮಿಸಿದ್ದಾರೆ, ಭ್ರಮಿಸಿದ್ದಾರೆ. ಮಾಧ್ಯಮಗಳು ಇದನ್ನೇ ಲಾಡೆನ್ ಮೃತದೇಹ ಅಂತ ಗಂಟೆಗಟ್ಟಳೆ, ದಿನಗಟ್ಟಳೆ ಕಾರ್ಯಕ್ರಮಗಳನ್ನು ತೋರಿಸಿದೆ. ಇಲ್ಲಿರುವ ಎರಡು ಭಾವಚಿತ್ರಗಳನ್ನು ಸರಿಯಾಗಿ ಗಮನಿಸಿ. ಅವುಗಳಲ್ಲಿ ಒಂದು ಭಾವಚಿತ್ರ ಲಾಡೆನ್ ಬದುಕಿದ್ದಾಗ ತೆಗೆದಿರುವುದು, ಇನ್ನೊಂದನ್ನು ಲಾಡೆನ್ ಮೃತದೇಹ ಎಂದು ಬಿಂಬಿಸಲಾಗಿರುವಂತಹದ್ದು..!. ಎರಡರ ಗಲ್ಲವನ್ನು ಸೂಕ್ಷ್ಮವಾಗಿ ಗಮನಿಸಿ. ಎರಡು ಒಂದೇ ತೆರನಾಗಿದೆ. ಗ್ರಾಫಿಕ್ಸ್ ಬಳಸಿ ಲಾಡೆನ್ ಮೃತದೇಹವನ್ನು ಸೃಷ್ಟಿ ಮಾಡಿದ ಅಮೇರಿಕಾ, ಅನಾಮತ್ತಾಗಿ ಕಾಗೆ ಹಾರಿಸಿದೆಯಾ..? ನಾಟ್ ಶ್ಯೂರ್.
(Web image)
ಹಾಗಾದ್ರೇ ಬಿನ್ ಲಾಡೆನ್ ಸತ್ತೇ ಇಲ್ವಾ..? ಸತ್ತಿದ್ದರೇ ಅವನ ಮೃತದೇಹವನ್ನು ಅಮೇರಿಕಾ ಯಾಕೆ ಸೃಷ್ಟಿ ಮಾಡುತ್ತಿತ್ತು..? ಒಂದುವೇಳೆ ಅವನು ಸತ್ತಿದ್ದೇ ನಿಜವಾದರೇ ಅವನ ದೇಹವನ್ನು ಅಮೇರಿಕಾ ಜಗತ್ತಿಗೆ ತೋರಿಸಬೇಕಿತ್ತಲ್ವಾ..? ಆದರೂ ಅಮೇರಿಕಾ ಸುಳ್ಳು ಹೇಳಿ ಸುಮ್ಮನಾಗಿತ್ತು. ವಿಶ್ವದ ದೊಡ್ಡಣ್ಣನಿಗೆ ಬೇರೆ ದೇಶಗಳ ಮೇಲೆ ಯುದ್ಧ ಮಾಡುವ ಖಯಾಲಿ ಮೊದಲಿನಿಂದಲೂ ಇದೆ. ಆ ಮೂಲಕ ಮಿಕ್ಕ ದೇಶಗಳ ಮೇಲೆ ಪಾರುಪತ್ಯ ಸಾಧಿಸುವ ಹುನ್ನಾರವಿದೆ. ಆದರೆ ಲಾಡೆನ್ ನಂಥ ಲಾಡೆನ್ ನ್ನು ಹೊಡೆದರೂ ಅವನ ಶವ ಪ್ರದರ್ಶನ ಮಾಡದೇ ಸಮುದ್ರಕ್ಕೆ ಬಿಸಾಕಿದ್ದೇವೆ ಅಂತ ರಹಸ್ಯ ಕಾಪಾಡುತ್ತದೆ ಅಂದರೇ `ಏನೋ ಇದೆ..” ಎಂದೇ ಅರ್ಥ.
ಆರಂಭದಲ್ಲಿ ರಷ್ಯಾ ವಿರುದ್ಧ ಹೋರಾಟಕ್ಕಾಗಿ ಅಮೆರಿಕಾ ಮುಸ್ಲಿಂ ತೀವ್ರಗಾಮಿಗಳನ್ನು ಎತ್ತಿಕಟ್ಟಿತು. ಆ ಸಂದರ್ಭ ದೂರದ ಊರುಗಳಿಂದ ಅಫ್ಘಾನ್ ಗೆ ಬಂದವರಲ್ಲಿ ಸೌದಿ ಅರೇಬಿಯಾದ ಒಸಾಮ ಬಿನ್ ಲಾಡೆನ್ ಕೂಡ ಒಬ್ಬ. ತನ್ನೆಲ್ಲಾ ವ್ಯವಹಾರವನ್ನ ಬಿಟ್ಟು ಲಾಡೆನ್ ಯುದ್ಧ ಭೂಮಿಗಿಳಿದ. ಅಮೆರಿಕಾದ ಸಂಪೂರ್ಣ ಬೆಂಬಲ ರಷ್ಯಾ ವಿರುದ್ಧ ಮುಸ್ಲಿಂ ಹೋರಾಟಗಾರರನ್ನು ಒಂದಾಗಿಸಿತ್ತು. ಅಮೆರಿಕಾ ಎಲ್ಲಾ ರೀತಿಯ ಸೌಲಭ್ಯಗಳನ್ನ ತಾಲಿಬಾನಿಗಳಿಗೆ ನೀಡಿದರೇ ಲಾಡೆನ್ ನಾಯಕತ್ವ ನೀಡುತ್ತಾ ಹೋದ. ಮುಂದೆ ಬಲಾಢ್ಯ ಶಕ್ತಿಯಾಗಿ ಬೆಳೆದ ತಾಲಿಬಾನಿಗಳು ಜಗತ್ತಿನ ಸೂಪರ್ ಪವರ್ ರಷ್ಯಾವನ್ನೇ ಮಣ್ಣುಮುಕ್ಕಿಸಿದ್ರು. ಅಫ್ಘಾನ್ ನಿಂದ ಆಡಳಿತ ರಷ್ಯಾ ಕಾಲ್ಕಿತ್ತಿತ್ತು. ಇದೇ ಲಾಡೆನ್ ಮುಂದೆ ಅಮೇರಿಕಾದ ಮೇಲೆಯೇ ತಿರುಗಿಬಿದ್ದ. ಅವತ್ತು ಅಮೇರಿಕಾದ ಸೈನಿಕರು ಲಾಡೆನ್ ಅಡಗುತಾಣದ ಮೇಲೆ ಅನಾಮತ್ತಾಗಿ ನುಗ್ಗಿ ಅವನನ್ನು ಮಟ್ಟ ಹಾಕುತ್ತಿದ್ದ ವಿಡಿಯೋವನ್ನು ಲೈವ್ ಆಗಿ ನೋಡುತ್ತಿದ್ದರು ಒಬಾಮ. ಅವನು ಸತ್ತಿದ್ದಾನೆ ಅಂತ ಘೋಷಣೆ ಮಾಡಿದ ಒಬಾಮ ಅವರ ಹಣೆಯಲ್ಲೂ ಎಂದಿನಂತೆ ಮೂರು ಗೆರೆಗಳು ಇದ್ದಿದ್ದು ಸುಳ್ಳಲ್ಲ. ಅವರಲ್ಲೇ ಏನೋ ಗೊಂದಲ. ಅಷ್ಟಕ್ಕೂ ಲಾಡೆನ್ ಸತ್ತೇ ಇಲ್ಲಾ ಎಂಬ ವಾದವಿದಲ್ಲ. ಆದರೆ ಅವತ್ತೆ ಸತ್ತಿದ್ದಾನಾ..? ಅಸಲಿಗೆ ಅಮೇರಿಕನ್ನರ ಕೈಯ್ಯಲ್ಲಿ ಸತ್ತಿದ್ದಾನಾ..? ಇಲ್ಲಾ ಅಮೇರಿಕಾದ ಬೃಹತ್ ಕಟ್ಟಡದ ಮೇಲೆ ದಾಳಿ ನಡೆದ ತರುವಾಯ ನಡೆದ ಜೆಟ್ ದಾಳಿಗೆ ಸಿಕ್ಕು ಮೃತಪಟ್ಟಿದ್ದಾನಾ..? ಗೊತ್ತಿಲ್ಲ.
ಅಷ್ಟಕ್ಕೂ ಅಮೇರಿಕ ಇಡೀ ವಿಶ್ವದ ಕಣ್ಣಿಗೆ ಮಣ್ಣೆರಚುವ ಅಗತ್ಯವಿರಲಿಲ್ಲ. ಯಾಕಂದ್ರೇ ಜಗತ್ತಿನ ಎಲ್ಲಾ ರಾಷ್ಟ್ರಗಳಿಗೆ ದೊಡ್ಡಣ್ಣ ಅಂತ ಕರೆಸಿಕೊಂಡಿರುವ ಅಮೇರಿಕಾ, ತನ್ನ ಅಸಮರ್ಥತೆಗೆ ಗ್ರಾಫಿಕ್ಸ್ ಬಳಸುವ ಅಥವಾ ಸುಳ್ಳು ಹೇಳುವ ಅಗತ್ಯವೇನಿತ್ತು..? ಲಾಡೆನ್ ಅಮೇರಿಕಾದ ಮಟ್ಟಿಗೆ ಅಸ್ತಿತ್ವದ ವಿಚಾರ ಎನ್ನುವುದನ್ನು ಒಪ್ಪಲೇಬೇಕಿತ್ತು. ಹಾಗಂತ ನಾಟಕ ಮಾಡುವುದು ಸರಿಯೇ..?. ಅಮೇರಿಕಾ ಸುಳ್ಳು ಹೇಳಿದೆ, ಲಾಡೆನ್ ಬದುಕಿದ್ದಾನೆ ಅಂತ ಹೇಳುವುದಕ್ಕಾಗುವುದಿಲ್ಲ. ಹಾಗೊಂದು ವೇಳೆ ಆತ ಬದುಕಿದ್ದಿದ್ದರೇ ಈ ಹೊತ್ತಿಗೆ ಆತ ಆಕ್ಟೀವ್ ಆಗಿಬಿಡುತ್ತಿದ್ದ. ಟೀವಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ. ಆದರೆ ಅಮೇರಿಕಾ ಅವತ್ತು ಅಬಟೋಬಾದ್ ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಲಾಡೆನ್ ನನ್ನು ಹೊಡೆದಿಲ್ಲ ಎಂಬುದು ಅತ್ಯಂತ ನಿಖರ ಎನ್ನಲಾಗುತ್ತಿದೆ.
ಯಾವತ್ತಿಗೂ ಇಡೀ ಜಗತ್ತನ್ನು ತನ್ನ ಕೈಯ್ಯಳತೆಯಲ್ಲಿಟ್ಟುಕೊಳ್ಳಬೇಕೆಂದು ಬಯಸುವ ಅಮೆರಿಕಾಕ್ಕೆ ಲಾಡೆನ್ ನಂಥ ಶತ್ರುಗಳ ಬೇಟೆ ಹೆಮ್ಮೆಯ ಸಂಗತಿ. ಶವ ಮೆರವಣಿಗೆ ಮಾಡಿ, ಅದನ್ನು ಸಾರ್ವಜನಿಕರ ಪ್ರದರ್ಶನಕ್ಕಿಟ್ಟು ಉಗ್ರರಿಗೆ ಸ್ಪಷ್ಟವಾದ ಸಂದೇಶವನ್ನು ಕೊಟ್ಟು ಬಿಡುತ್ತಿತ್ತು. ಆದರೆ ಅಮೇರಿಕಾ ಲಾಡೆನ್ ಪ್ರಕರಣವನ್ನು ನಿಗೂಢ ಮಾಡಿತು. ಸಮುದ್ರಕ್ಕೆ ಎಸೆಯಲಾಗಿದೆ ಎಂದಿತು. ಅದೊಂದು ದಿನ ಎಸೆದಿದ್ದೇವೆ ಅಂತ ಒಬಾಮ ಪ್ರೆಸ್ ಕಾನ್ಫರೆನ್ಸ್ ನಲ್ಲಿ ಹೇಳಿಬಿಟ್ಟರು. ಅಲ್ಲಿಗೆ ಲಾಡೆನ್ ಪ್ರಹಸನ ಮುಗಿದಿತ್ತು. ಆಮೇಲೆ ಅಮೆರಿಕಾದ ಇಂಟಲಿಜೆನ್ಸ್ ನಿಂದ ರಹಸ್ಯ ಹೊರಬಿದ್ದಿತ್ತು. ಲಾಡೆನ್ ಶವವನ್ನು ಸಮುದ್ರಕ್ಕೆ ಎಸೆಯಲಾಗಿಲ್ಲ. ಅಮೇರಿಕಾದ ಗುಪ್ತ ಸ್ಥಳದಲ್ಲಿ ಸುಡಲಾಗಿದೆ. ಇವೆಲ್ಲಾ ಗೊಂದಲಗಳು ಲಾಡೆನ್ನನ್ನು ಅಧಿಕೃತವಾಗಿ ಅಮೇರಿಕಾ ಕೊಂದಿಲ್ಲ ಎನ್ನುವುದನ್ನು ಹೇಳುತ್ತಿದೆ. ಒಸಾಮ ಒಂದೋ ತಾನೇ ಸತ್ತಿದ್ದಾನೆ..! ಇಲ್ಲ ಅವತ್ತಿನ ಯುದ್ಧದ ಸಮಯದಲ್ಲಿಯೇ ಬಲಿಯಾಗಿದ್ದಾನೆ..! ಇಲ್ಲವೇ ಅಕಸ್ಮಾತ್ ಬದುಕಿದ್ದರೂ ಅಚ್ಚರಿಯಿಲ್ಲ..!. ಹೀಗೊಂದು ಶಂಕೆ ಮೂಡಿದೆ. ಒಂದು ವೇಳೆ ಲಾಡೆನ್ ಬದುಕಿದ್ದರೇ, ಕೆಲ ವರ್ಷಗಳ ಕಾಲ ನಿಗೂಢವಾಗಿದ್ದು, ಮತ್ತೊಂದು ಭಯಾನಕ ಕೃತ್ಯದ ಮೂಲಕ ಅಖಾಢಕ್ಕೆ ಧುಮುಕುವ ಹುನ್ನಾರದಲ್ಲಿದ್ದಾನಾ..? ಹೇಳಲಾಗುವುದಿಲ್ಲ. ಆದರೆ ತಾಲಿಬಾನಿಗಳ ಹಿಡಿತದಲ್ಲಿದ್ದ ಅಫ್ಗಾನಿಸ್ಥಾನವನ್ನು ಮುಕ್ತಿ ಮಾಡಿದ ಕೀತರ್ಿ ಅಮೇರಿಕಾಕ್ಕೆ ಸಲ್ಲುತ್ತದೆ. ಆದರೆ ಅವರ ಒಂದು ಸುಳ್ಳು ಜಗತ್ತಿನ ಕಣ್ಣಿಗೆ ಮಣ್ಣೆರೆಚಿರುವುದು ಮಾತ್ರ ಅವರ ಅಸಮರ್ಥತೆಯನ್ನು ತೋರಿಸುತ್ತದೆ.
ಒಸಮಾ ಬಿನ್ ಲಾಡೆನ್ ಈತ ಹುಟ್ಟಿ ಬೆಳೆದದ್ದೆಲ್ಲಾ ಸೌದಿ ಅರೇಬಿಯಾದಲ್ಲಿ. ಈತನ ತಂದೆ ಹೆಸರು ಮಹಮ್ಮದ್ ಲಾಡೆನ್, ತಾಯಿ ಹೆಸರು ಹಮೀದಾ ಅಲ್ ಅತ್ತಾಸ್. ಮಹಮ್ಮದ್ ಲಾಡೆನ್ ಗೆ ಒಟ್ಟು ಹತ್ತು ಮಂದಿ ಪತ್ನಿಯರು. ಒಸಾಮಾ ಅವರ ಕಡೆಯ ಪತ್ನಿಯ ಮಗ. ಜೆಡ್ಡಾದ ಅಲ್ ತಗೇರ್ ಶಾಲೆಯಲ್ಲಿ ಓದಿದ. 70ರ ದಶಕದ ಅಂತ್ಯದಲ್ಲಿ ಕಿಂಗ್ ಅಬ್ದುಲ್ ಆಝೀಝ್ ವಿಶ್ವ ವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಹಾಗೂ ಆಡಳಿತ ನಿರ್ವಹಣೆಯಲ್ಲಿ ಪದವಿ ಪಡೆದ. ಲಾಡೆನ್ ಮಿತಭಾಷಿ. ಭಯಾನಕ ಭಾವಜೀವಿ. ಅಂತರ್ಮುಖಿ. ಇಸ್ಲಾಂ ಧಾರ್ಮಿಕ ಗ್ರಂಥದಲ್ಲಿ ಅಪಾರ ಆಸಕ್ತಿ ಹೊಂದಿದ್ದ. ಕಾಲೇಜಿನಲ್ಲಿ ಇಸ್ಲಾಂ ಧರ್ಮದ ಬಗ್ಗೆ ಪಾಠ ಮಾಡುತ್ತಿದ್ದ ಮಹಮದ್ ಕುತುಬ್ ಅವರಿಂದ ಸಾಕಷ್ಟು ಪ್ರಭಾವಿತನಾಗಿದ್ದ. `ಮುಸ್ಲಿಂ ಬ್ರದರ್ ಹುಡ್’ ಸಂಘಟನೆಯ ನಿಕಟವರ್ತಿಯಾಗಿದ್ದ. ಮಹಮ್ಮದ್ ಕುತುಬ್ ನ ನೆಚ್ಚಿನ ಶಿಷ್ಯನಾಗಿದ್ದ. ಈ ಮಧ್ಯೆ ಕಾಲೇಜು ಶಿಕ್ಷಣ ಅರ್ಧಕ್ಕೆ ಬಿಟ್ಟ.
ಕಾಲೇಜ್ ಗೆ ಶರಣು ಹೊಡೆದನಂತರ ಲಾಡನ್ ಅಮೇರಿಕಾದ ಅಣತಿಯಂತೆ ಪಾಕಿಸ್ತಾನಕ್ಕೆ ಹೋದ. ಅಲ್ಲಿನ ಪ್ರಮುಖ ಸಂಘಟನೆಯಾದ `ಜಮಾತೆ ಇಸ್ಲಾಮಿಯ’ ಚಿಂತಕ ಬುರ್ಹಾನುದ್ದೀನ್ ರಬಾನಿಯನ್ನು ಭೇಟಿಯಾದ. ಅಫ್ಘಾನಿಸ್ಥಾನದಲ್ಲಿ ಸೋವಿಯತ್ ಒಕ್ಕೂಟದ ವಿರುದ್ಧ ಜಿಹಾದ್ ಘೋಷಿಸಿದ್ದ ಒಕ್ಕೂಟದ 7 ಕಮಾಂಡರ್ ಗಳಲ್ಲಿ ಒಬ್ಬನಾದ. ಈ ಸಂಘಟನೆಗೆ ರೂಪುಕೊಟ್ಟ ಅಝಾಮ್ ಇಸ್ಲಾಮಾಬಾದ್ ನ ಅಂತರಾಷ್ಟ್ರೀಯ ಇಸ್ಲಾಮಿಕ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ವೃತ್ತಿ ಆರಂಭಿಸಿದ. ಆಗ ಪಾಕಿಸ್ತಾನದಲ್ಲಿ ಜಿಹಾದ್ ಶಿಕ್ಷಣಗಳಿಸಿದ ಕೆಲವೇ ಮುಜಾಹಿದ್ದೀನ್ ಗಳು ಅಫ್ಘಾನಿಸ್ತಾನಕ್ಕೆ ಹೋಗಿ ಗೆರಿಲ್ಲಾ ದಾಳಿಯಲ್ಲಿ ರಷ್ಯನ್ ಸೇನೆಗಳ ವಿರುದ್ಧ ಯುದ್ಧ ಮಾಡುತ್ತಿದ್ದರು. ಮುಂದೆ ಪಾಕಿಸ್ಥಾನ ಗುಪ್ತಚರ ಸಂಸ್ಥೆ ಐಎಸ್ಐ ಮುಖ್ಯಸ್ಥ ಹಮೀದ್ ಗುಲ್ನನ್ನು ಒಸಾಮಾ ಭೇಟಿಯಾದ. ಅವಾಗ ಅಮೇರಿಕದ ಗುಪ್ತಚರ ಸಂಸ್ಥೆ ಪರೋಕ್ಷವಾಗಿ ಆಫ್ಘಾನಿಸ್ತಾನದಲ್ಲಿ ನಡೆಸಿದ್ದ ಆಪರೇಷನ್ ಸೈಕ್ಲೋನ್ ಕಾರ್ಯಾಚರಣೆಯಲ್ಲಿ ಸಿಐಎ ಹಾಗೂ ಮುಜಾಹಿದ್ದೀನ್ ಸಂಘಟನೆಗಳ ಮಧ್ಯೆ ಐಎಸ್ಇ ಮಧ್ಯವರ್ತಿಯಾಗಿ ಪಾತ್ರವಹಿಸಿತ್ತು. ಸಿಐಎ ಪಡೆಗಳು ಪರೋಕ್ಷವಾಗಿ ಮುಜಾಹಿದ್ದೀನ್ಗಳಿಗೆ ಪಾಕಿಸ್ತಾನದಲ್ಲಿ ಸೈನ್ಯ ತರಬೇತಿ ಕೊಟ್ಟು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸಿ ಅಫ್ಘಾನಿಸ್ತಾನಕ್ಕೆ ಹೋಗಿ ಕದನ ಮಾಡಲು ಪ್ರೇರೇಪಿಸುತ್ತಿದ್ದವು.
ಲಾಡೆನ್ ತನ್ನನ್ನು ಪರಮ ಜಿಹಾದಿ ಎಂದು ಘೋಷಿಸಿಕೊಂಡರೂ ಅವನ ಮಕ್ಕಳನ್ನು ಇತ್ತ ತಲೆ ಹಾಕದಂತೆ ನೋಡಿಕೊಂಡ. ಹಾಗಂತ ಆತ ಈ ಮೊದಲೇ ಬರೆದಿಟ್ಟಿದ್ದ ಮರಣ ಪತ್ರದಲ್ಲಿ ಸ್ಪಷ್ಟವಾಗಿ ನಮೂದಿಸಿದ್ದ. `ತನ್ನ ಅಜೆಂಡಾ ಈಡೇರಬೇಕು, ಅದಕ್ಕಾಗಿ ಜೀವನವನ್ನೆಲ್ಲಾ ಇಸ್ಲಾಂ ಧರ್ಮದ ಉಳಿವಿಗೆ ಮೀಸಲಿಟ್ಟಿದ್ದೇನೆ. ಆದ್ದರಿಂದ ಮಕ್ಕಳ ಹಾಗೂ ಪರಿವಾರದ ಬಗ್ಗೆ ಗಮನ ಹರಿಸಲಾಗಲಿಲ್ಲ. ಅದಕ್ಕೆ ಕ್ಷಮೆಯಿರಲಿ’ ಎಂದು ಬರೆದಿದ್ದ. ತನ್ನ ಹೆಂಡತಿಯರಿಗೆ, ತನ್ನ ಮರಣನಂತರ ಮಕ್ಕಳ ಯೋಗಕ್ಷೇಮವನ್ನು ಮುಖ್ಯವಾಗಿ ಪರಿಗಣಿಸಬೇಕು, ಬೇರೆ ಮದುವೆಯಾಗಕೂಡದು ಎಂದು ಹೇಳಿದ್ದ. ಆ ಮೂಲಕ ತನ್ನ 24 ಮಕ್ಕಳನ್ನು ಚೆನ್ನಾಗಿ ಪೋಷಿಸುವಂತೆ ಪತ್ನಿಯರಿಗೆ ತಾಕೀತು ಮಾಡಿದ್ದ. ಆದರೆ ತಾನು ಬಿಟ್ಟು ಹೋದ 18 ಮಿಲಿಯನ್ ಡಾಲರ್ ಆಸ್ತಿಯನ್ನು ಏನು ಮಾಡಬೇಕೆಂದು ಹೇಳಿರಲಿಲ್ಲ. ಮಕ್ಕಳು ರಾಜಕೀಯಕ್ಕೆ ಹೋಗಬಾರದು, ಧಾರ್ಮಿಕ ಕೆಲಸಗಳಲ್ಲಿ ಭಾಗಿಯಾಗಬಾರದು ಎಂದಿದ್ದ. ಆದರೆ ತಾನು ಮಾತ್ರ ಶುದ್ಧ ಜಿಹಾದಿಯಾಗಿ, ಇಸ್ಲಾಂ ಧರ್ಮದ ರಕ್ಷಣೆಗೆ ನಿಂತುಬಿಟ್ಟಿದ್ದ..! ಅವನಿಗೆ ಅಮೆರಿಕಾ ಸಾಥ್ ಕೊಟ್ಟಿತ್ತು. ಮುಂದೆ ಅಮೆರಿಕಾವನ್ನೇ ನಡುಗಿಸಿದ. ಬಾಂಬಿಟ್ಟ. ಆಮೇಲೆ ಅಮೇರಿಕಾ ಲಾಡೆನ್ ನನ್ನು ಕೊಂದಿದ್ದೇವೆ ಅಂತ ಜಗತ್ತಿನ ಮುಂದೆ ಪೌರುಷ ಹೇಳಿಕೊಂಡಿತು. ಆದರೆ ಲಾಡೆನ್ ಹೆಣ ತೋರಿಸದೇ ಇವತ್ತಿಗೂ ನಿಗೂಢವನ್ನು ಉಳಿಸಿಕೊಂಡಿದೆ. ವಿಶ್ವದ ದೊಡ್ಡಣ್ಣನ ನಡೆ ಕೆಲವೊಮ್ಮೆ ಅನೇಕ ಸಂಶಯಕ್ಕೀಡುಮಾಡುತ್ತದೆ. ಅವುಗಳಲ್ಲಿ ಲಾಡೆನ್ ವಿಚಾರವೂ ಒಂದು.
POPULAR STORIES :
ಯೂಟ್ಯೂಬ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸಿಂಹದ ರಿಯಲ್ ಸ್ಟೋರಿ..!
ಲವ್ ಇನ್ ಫೇಸ್ ಬುಕ್.. ಫ್ರಾನ್ಸ್ ಹುಡುಗಿ ಪುಣೆಯ ಹುಡುಗನ ರೋಮಾಂಚಕ ಸ್ಟೋರಿ
ತಲೆ ಮೇಲೆ ಮೂಡಿದೆ ಕೊಂಬು..!? ಏನಿದು ಅಚ್ಚರಿ..!
ಬೇಸಿಗೆ ರ(ಸ) ಜೆ – ಮಕ್ಕಳಿಗೊ? ಪೋಷಕರಿಗೋ ?
ನಾಗರಹಾವಿಗೆ ಎರಡು ಕಾಲು..! ಜನರು ದಂಗುಬಡಿದು ಹೋದರು..!
ನಿಮ್ಮ ಮಗು ಬಳಿ ಸ್ಮಾರ್ಟ್ ಫೋನ್ ಇದೆಯಾ ಹುಷಾರ್..!!
ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ







