ಫಸ್ಟ್ ಡೇ ಫಸ್ಟ್ ಜರ್ನಿಗೆ ಮುಗಿಬಿದ್ದ ಸಿಲಿಕಾನ್ ಸಿಟಿ ಮಂದಿ..!

Date:

ಬೆಂಗಳೂರು ಜನರ ಸುರಂಗ ಮಾರ್ಗದ ಮೆಟ್ರೋ ಜರ್ನಿ ಹೇಗಿರಬಹುದು ಅನ್ನೋ ಕುತೂಹಲಕ್ಕೆ ತೆರೆ ಬಿದ್ದಿದೆ. ಹೌದು ಇವತ್ತು ಅಂಡರ್ ಗ್ರೌಂಡ್ ಟ್ರಿಪ್ ನ ಫಸ್ಟ್ ಡೇ ಆದ ಕಾರಣ ಮೆಟ್ರೋ ರೈಲಿನಲ್ಲಿ ಜನ ತುಂಬಿ ತುಳುಕುತ್ತಿದ್ರು. ಈ ಮೆಟ್ರೋ ಸುರಂಗ ಮಾರ್ಗದ ಪ್ರಯಾಣ ಮಾಡಿ ಅದರ ಥ್ರಿಲ್ಲಿಂಗ್ ಅನುಭವ ಪಡೆದ್ರು.
ಮುಂಜಾನೆಯಿಂದಲೇ ಮೆಟ್ರೋ ಸ್ಟೇಷನ್ ನಲ್ಲಿ ಜನ ಸಖತ್ ಕ್ಯೂರಿಯಾಸಿಟಿಯಿಂದ ಕಾಯುತ್ತಿದ್ದರು. ಇನ್ನು ರೈಲ್ ಹತ್ತುತ್ತಿದ್ದಂತೆ ಸುರಂಗ ಪ್ರಯಾಣ ಹೇಗಿರುತ್ತೆ ಅನ್ನೋ ಕಾತುರ ಜನ್ರ ಕಣ್ಣಲ್ಲಿತ್ತು.. ಒಮ್ಮೆ ಸುರಂಗ ಎಂಟ್ರಿ ಆಗ್ತಿದಂತೆ ಏನೋ ಖುಷಿ ಪಟ್ರೆ ಒಳಗೊಳಗೆ ಸಣ್ಣ ಭಯವನ್ನು ಅನುಭವಿಸಿದ್ರು.
ನಿನ್ನೆ ಬಹು ನಿರೀಕ್ಷಿತ ದಕ್ಷಿಣ ಭಾರತದ ಮೊಟ್ಟ ಮೊದಲ 5 ಕಿಲೋಮೀಟರ್ ಉದ್ದದ ನಾಯಂಡಹಳ್ಳಿ ಟು ಬೈಯಪ್ಪನಹಳ್ಳಿ ಮೆಟ್ರೋ ಸುರಂಗ ಮಾರ್ಗ ಲೋಕಾರ್ಪಣೆ ಗೊಂಡಿದೆ. ನಿನ್ನೆ ಮೆಟ್ರೋ ಸುರಂಗ ಉದ್ಘಾಟನೆ ಯಾದ್ರೂ ಪ್ರಯಾಣದ ಅವಕಾಶ ಸಾರ್ವಜನಿಕರಿಗೆ ಸಿಕ್ಕಿದ್ದು ಮಾತ್ರ ಇಂದು. ಹಾಗಾಗಿ ಇಂದು ಜನ ಮೆಟ್ರೋದಲ್ಲಿ ಸಂಚರಿಸಲು ನಾ ಮುಂದು ತಾ ಮುಂದು ಅಂತ ಮುಗಿಬಿದ್ರು. ಮೆಟ್ರೋ ಸ್ಟೇಷನ್ ಗಳೆಲ್ಲ ತುಂಬಿ ತುಳುಕುತ್ತಿತ್ತು.
ಸಮ್ಮರ್ ನಲ್ಲೂ ನಮ್ಮ ಜನ ಮೆಟ್ರೋ ಸುರಂಗ ಜರ್ನಿ ಮಾಡೋ ಮೂಲಕ ಕೂಲ್ ಮತ್ತು ಥ್ರಿಲ್ಲಿಂಗ್ ಅನುಭವ ಪಡೆದ್ರು. ಇನ್ನೂ ಕೆಲವರು ಮೆಟ್ರೋದಲ್ಲಿ ಸೆಲ್ಫಿಗೆ ಫೋಸ್ ಕೊಟ್ಟು ಖುಷಿ ಪಟ್ರು. ಒಟ್ಟಾರೆ ಬೇಸಿಗೆ ಬೇಗೆಗೆ ಬೇಸತ್ತಿದ್ದ ನಮ್ಮ ಜನ, ಫುಲ್ ಎಸಿ, ಜೀರೋ ಟ್ರಾಫಿಕ್, ಟೈಮ್ ಸೇವಿಂಗ್ ಪ್ರಯಾಣವನ್ನ ಫುಲ್ ಎಂಜಾಯ್ ಮಾಡಿದ್ರು.

  • ಶ್ರೀ

POPULAR  STORIES :

ಮದ್ವೆಗೂ ಮುನ್ನವೇ ಮಕ್ಕಳನ್ನು ಹೆತ್ತರು..!? ಮೊದಲು ಅಮ್ಮ ಆಗ್ತೀನಿ, ಆಮೇಲೆ ಮದ್ವೆ ಎಂದಳು ಶೃತಿ..!

ಯೂಟ್ಯೂಬ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸಿಂಹದ ರಿಯಲ್ ಸ್ಟೋರಿ..!

ಒಸಾಮಾ ಬಿನ್ ಲಾಡೆನ್ ಸತ್ತಿಲ್ಲ..!? ಅಮೆರಿಕಾ ಮುಚ್ಚಿಟ್ಟ ಘೋರ ಸತ್ಯವೇನು..?

ಲವ್ ಇನ್ ಫೇಸ್ ಬುಕ್.. ಫ್ರಾನ್ಸ್ ಹುಡುಗಿ ಪುಣೆಯ ಹುಡುಗನ ರೋಮಾಂಚಕ ಸ್ಟೋರಿ

Share post:

Subscribe

spot_imgspot_img

Popular

More like this
Related

ಡಿ.26ರಿಂದ ರೈಲು ಟಿಕೆಟ್ ದರ ಏರಿಕೆ: ದೀರ್ಘದೂರ ಪ್ರಯಾಣ ದುಬಾರಿ

ಡಿ.26ರಿಂದ ರೈಲು ಟಿಕೆಟ್ ದರ ಏರಿಕೆ: ದೀರ್ಘದೂರ ಪ್ರಯಾಣ ದುಬಾರಿನವದೆಹಲಿ: ಡಿಸೆಂಬರ್...

ಹಾನಗಲ್ ಗ್ಯಾಂಗ್ ರೇಪ್ ಆರೋಪಿಗಳ ಗಡಿಪಾರು

ಹಾನಗಲ್ ಗ್ಯಾಂಗ್ ರೇಪ್ ಆರೋಪಿಗಳ ಗಡಿಪಾರು 2024ರ ಜನವರಿಯಲ್ಲಿ ಹಾವೇರಿ ಜಿಲ್ಲೆಯ ಹಾನಗಲ್...

ರಾಜ್ಯದಲ್ಲಿ ಸೀಸನಲ್ ಫ್ಲೂ ಭೀತಿ – ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ

ರಾಜ್ಯದಲ್ಲಿ ಸೀಸನಲ್ ಫ್ಲೂ ಭೀತಿ – ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಕರ್ನಾಟಕದಲ್ಲಿ...

ಮಾಂತ್ರಿಕ ನಾಣ್ಯದ ಹೆಸರಲ್ಲಿ ಮೋಸ: ನಾಗಮಂಗಲದಲ್ಲಿ ವಂಚಕನಿಗೆ ಗೂಸಾ!

ಮಾಂತ್ರಿಕ ನಾಣ್ಯದ ಹೆಸರಲ್ಲಿ ಮೋಸ: ನಾಗಮಂಗಲದಲ್ಲಿ ವಂಚಕನಿಗೆ ಗೂಸಾ! ಮಂಡ್ಯ: ಮಾಂತ್ರಿಕ ಶಕ್ತಿಯುಳ್ಳ...