ಓದಿದ್ದು 8ನೇ ತರಗತಿ, ಮಲಗುತ್ತಿದ್ದುದು ರೈಲ್ವೆ ಸ್ಟೇಷನಲ್ಲಿ… ಇವತ್ತು..!?
ಒಂದು ಕಾಲದಲ್ಲಿ ಮಲಗಲು ಜಾಗವಿಲ್ಲದೆ, ಚೆನ್ನೈನ ಎಗ್ಮೋರ್ ರೈಲ್ವೆ ಸ್ಟೇಷನ್ ಗಳಲ್ಲಿ ಮಲಗುತ್ತಿದ್ದರು. ಇಂದು ದೇಶಿಯಾ ಹಾಗೂ ಅಂತಾರಾಷ್ಟ್ರೀಯ ಪ್ರವಾಸ ಸೇವೆಗಳ ಒದಗಿಸುವ ಇಂಟರ್ ನ್ಯಾಷನಲ್ ಟಾನ್ಸ್ ಪೋಟ್ ಅಸೋಸಿಯೇಷನ್ ಐಎಟಿಎ ನ ಬಿಗಿ ಷೇರ್ ಓಲ್ಡರ್. ಅಷ್ಟೇ ಏಕೆ? ದೇಶ-ವಿದೇಶಗಳಲ್ಲಿ ದೊಡ್ಡ ಹೆಸರು ಮಾಡಿರುವ ಮಧುರಾ ಟ್ರಾವೆಲ್ಸ್ ಮಾಲೀಕರು ಹೌದು. ಇವರ ವಾರ್ಷಿಕ ವಹಿವಾಟು ನೂರಾರು ಕೋಟಿ ರೂಪಾಯಿ.
ಎಂಟನೇ ತರಗತಿ ತನಕ ಓದಿದ್ದ ಬಾಲನ್, 19 ವರ್ಷದವರಾಗಿದ್ದಾಗ ಅವರು ತಂದೆಯನ್ನು ಕಳೆದುಕೊಂಡರಂತೆ. ತಂದೆಯವರು ಮಾಡುತ್ತಿದ್ದ ಕೆಲಸವನ್ನು ಮಾಡಲು ಏಕೋ ಮಾಡಲು ಅವರಿಗೆ ಮನ್ಸು ಇರಲಿಲ್ಲವಂತೆ. ಆ ವಯಸ್ಸಿನಲ್ಲಿ ಬಾಲನ್ ಗೆ ನಾಟಕ, ಫಿಲಂಗೀಳು ಹೆಚ್ಚಿತ್ತು. ಅದರಲ್ಲೂ ಶಿವಾಜಿ ಗಣೇಶನ್, . ಕಮಲ್ ಹಾಸನ್, ರಜನಿಕಾಂತ್ ಫಿಲಂ ಎಂದರೆ ಒಂದು ರೀತಿ ಜೀವ. ಅವರ ಫಿಲಂಗಳನ್ನ ಒಂದು ಬಿಡದಂತೆ ನೋಡುತ್ತಿದ್ದಂತೆ. ಯಾರು ಎಲ್ಲಿ ಕೇಳಿದರೂ ಅವರ ಡೈಲಾಗ್ಸ್ ಗಳನ್ನೆಲ್ಲ ಪಟ ಪಟ ಹೇಳುತ್ತಿದ್ದರಂತೆ.
ಬಾಲನ್ , ಫಿಲಂ ಗೀಳಿನಿಂದ ಒಂದು ದಿನ ಜೇಬಿನಲ್ಲಿ ಹಣವಿಲ್ಲದಿದ್ದರೂ ಹುಟ್ಟ ಬಟ್ಟೆಯಿಂದಲೇ ಸುಮಾರು 180 ಕಿಲೋಮೀಟರ್ ದೂರವಿರುವ ಚೆನ್ನೈಗೆ ರೈಲಿನಲ್ಲಿ ಟಿಕೆಟ್ ಇಲ್ಲದೆ ಬಂದುಬಿಡುತ್ತಾರೆ. ಇಲ್ಲಿಗೆ ಬಂದ ಮೇಲೆ ಎಷ್ಟೋ ದಿನ ಊಟವಿಲ್ಲದೆ ಉಪವಾಸ ಇರುತ್ತಾರೆ. ಕೊನೆಗೆ ನಾಟಕದಲ್ಲಿ ಅಭಿನಯ ಮಾಡುವವರ ಮನೆಯಲ್ಲಿ ಮನೆಗೆಲಸಕ್ಕೆ ಸೇರಿಕೊಳ್ಳುತ್ತಾರೆ. ಅವರು ಮನೆಯಲ್ಲಿ ಉಳಿದ ಆಹಾರ ಹಾಗೂ ಬಿಟ್ಟ ಬಟ್ಟೆಗಳನ್ನು ಹಾಕಿಕೊಂಡು ಬೆಳೆಯುತ್ತಾರೆ.
ಈ ನಡುವೆಯೇ ಬಾಲನ್ ಕೊಡಂಬಾಕಂನಲ್ಲಿ ರಸ್ತೆಯಲ್ಲಿ ಖ್ಯಾತ ನಟರ ಮನೆಗಳಿಗೆ ತೆರಳಿ ತಮ್ಮ ಛಾನ್ಸ್ ಕೊಡಿಸುವಂತೆ ಬೇಡಿಕೊಳ್ಳುತ್ತಾರೆ, ನೋಡಿ, ಛಾನ್ಸ್ ಇರಲಿ, ಮೀಟ್ ಕೂಡ ಮಾಡುವುದಿಲ್ಲವಂತೆ. ಈ ವೇಳೆ ಎಗ್ಮೋರ್ನಲ್ಲಿ ಹೋಟೆಲ್ ಮತ್ತು ಟೂರಿಸ್ಟ್ ನಲ್ಲಿ ಕೆಲಸ ಮಾಡಲು ಪ್ರಯತ್ನಿಸುತ್ತರಂತೆ. ಅಲ್ಲೂ ಕೂಡ ಕೆಲಸ ಸಿಗುವುದಿಲ್ಲವಂತೆ. ಕೊನೆಗೆ ಬಾಲನ್ , ಊಟವಿಲ್ಲದೆ ರಾತ್ರಿವೇಳೆ ರೀಕ್ಷಾ ಎಳೆಯುವವರು, ಭೀಕ್ಷಕರು, ಪಿಕ್ ಪ್ಯಾಕೇಟ್ ಮಾಡುವವರ ಜೊತೆ ರೈಲ್ವೆ ಸ್ಟೇಷನ್ ನಲ್ಲಿ ಮಲಗುತ್ತಿದ್ದರಂತೆ. ಆದರೆ, ಪೊಲೀಸರು ಅಲ್ಲಿಂದು ಹೊಡೆದು ಕಳಿಸುತ್ತಿದ್ದಂತೆ.
ಕೊನೆಗೆ ಚೆನ್ನೈನಲ್ಲಿರುವ ಅಮೆರಿಕ ದೂತಾವಾಸದ ಹೊರಭಾಗದಲ್ಲಿ ಮಲಗುತ್ತಿದ್ದಂತೆ. ಅಲ್ಲೇ ಸಮೀಪದಲ್ಲೇ ವೀಸಾ ಪಡೆಯುವ ಜಾಗವಿತ್ತಂತೆ. ಅಲ್ಲಿ ಮಲಗಿದ್ದ ವೇಳೆ, ಬೆಳಗಿನ ಜಾವ ಯಾರೋ ಬಂದು ಎಚ್ಚರಗೊಳಿಸಿ 2 ರೂಪ
ರೂಪಾಯಿ ಕೊಟ್ಟು ಹೋದರಂತೆ. ಏಕೆಂದರೆ, ವೀಸಾ ಪಡೆಯುವರಿಗೆ ಆ ಜಾಗವನ್ನು ಮೀಸಲಾಗಿರಿಸುತ್ತಿದ್ದಂತೆ. ಆಮೇಲೆ ಅದೇ ಜಾಗ ಪರ್ಮಿನೆಂಟ್ ಕೂಡ ಆಯಿತು. ವೀಸಾ ಪಡೆಯುವರಿಗೆ ಜಾಗ ಮಾಡಿಕೊಡುವುದು ಮತ್ತು ಅಲ್ಲಿಗೆ ಬರುವವರ ಲಗೇಜ್ ಎತ್ತಿಟ್ಟರೆ ಹಣ ಸಿಗುತ್ತಿತ್ತು ಅದರಿಂದ ಜೀವನ ಹೊರೆಯುತ್ತಿದ್ದರು.
ಹೀಗೇಯೇ ಬಾಲನ್ ಅವರ ಜೀವನ ಮುಂದುವರೆಯುತ್ತಿದ್ದಾಗ ಟೂರಿಸ್ಟ್ ಏಜೆನ್ಸಿಗಳು ಪರಿಚಯವಾಗುತ್ತದೆ. ಅವರಿಂದ ಏರ್ ಟಿಕೆಟ್ ಮಾರಿದರೆ ಕಮೀಷನ್ ಸಿಗುತ್ತದೆ ತಿಳಿಯುತ್ತದೆ. ನೋಡಿ, 1982 ರಲ್ಲಿ ರಾಮೇಶ್ವರಂ – ಕೊಲಂಬೊ ದೋಣಿಯ ಪ್ರಯಾಣಿಕರಿಗೆ ವೀಸಾ ನೀಡಲು ಏಜೆಂಟ್ಗೆ ಕೊರಿಯರ್ ಕೆಲಸ ಸಿಕ್ಕಿತಂತೆ. ಅಲ್ಲಿಂದ ಶುರುವಾಯಿತು, ಬಾಲನ್ ಅವರ ಬ್ಯುಸಿನೆಸ್ ಜರ್ನಿ, 1986 ರಲ್ಲಿ, ತನ್ನದೇ ಆದ ಇಂಟರ್ನ್ಯಾಷನಲ್ ಏರ್ ಟ್ರಾನ್ಸ್ ಪೋಟ್ ನಲ್ಲಿ ಏಜೆಂಟ್ ರಾಗಿ ಕೆಲಸ ಮಾಡುತ್ತಾರೆ.
ಬಾಲನ್ ಅವರು ತಮ್ಮ ಬಹಳ ಆಸಕ್ತಿವುಳ್ಳ ಕ್ಷೇತ್ರವಾದ ದೂರದರ್ಶನ ಮತ್ತು ಸಂಗೀತ ಕಾರ್ಯಕ್ರಮಗಳನ್ನು ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ರಾಜ್ಯ ಸರ್ಕಾರದಿಂದ ಪ್ರತಿಷ್ಠಿತ ಕಲೈಮಾಮಣಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಬಾಲನ್ ಪಡೆದಿದ್ದಾರೆ. ಇತರರಿಗೂ ಸ್ಫೂತಿಯಾಗಿದ್ದಾರೆ.