ಇವತ್ತಿನ ಪ್ರಸಿದ್ಧ ವ್ಯಕ್ತಿಗಳು ಅವತ್ತು ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು..!
ಯಾರ ಲೈಫ್ ಹೆಂಗೆಗೆಲ್ಲಾ ಟರ್ನ್ ಆಗುತ್ತೆ ಅಂತ ಹೇಳೋಕೆ ಆಗಲ್ಲ..! ಇವತ್ತು ಇದ್ದಂತೆ ನಾಳೆ ಇರಲ್ಲ..! ಬದಲಾವಣೆ ಆಗ್ತಾನೆ ಇರುತ್ತೆ..! ಊಟದ ರುಚಿಯಲ್ಲಿ ಹೇಗೆಲ್ಲಾ ಬದಲಾವಣೆ ಬಯಸುತ್ತೀವೋ ಅದೇರೀತಿ ಬದಲಾವಣೆ ಜೀವನದಲ್ಲೂ ಸಹಜ..! ಯಶಸ್ಸು ಅನ್ನೋದು ಎಲ್ಲಿ? ಹೆಂಗೆ? ಯಾವಾಗ? ಸಿಗುತ್ತೆ ಅಂತ ಗೊತ್ತೇ ಆಗಲ್ಲ..! ಅದೃಷ್ಟ ದೇವತೆ ಯಶಸ್ಸನ್ನು ತಂದು ಕೊಟ್ಟುಬಿಡ್ತಾಳೆ..! ಆದ್ರೆ ಆ ಯಶಸ್ಸನ್ನು ಪಡೆಯೋ ಯೋಗ್ಯತೆ ಬೇಕೆ ಬೇಕು..!
ಇಷ್ಟೆಲ್ಲಾ ಪೀಠಿಕೆ ಹಾಕೋಕೆ ಕಾರಣ, ಇವತ್ತಿನ ಕೆಲವು ಪ್ರಸಿದ್ಧ ವ್ಯಕ್ತಿಗಳು..! ಇವರೆಲ್ಲಾ ಒಂದು ಕಾಲದಲ್ಲಿ `ಮ್ಯಾಕ್ಡೊನಾಲ್ಡ್’ನಲ್ಲಿ ಕೆಲಸ ಮಾಡಿದವರು..! ಆದ್ರೆ ಇವತ್ತು ತಮ್ಮದೇ ಆದ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ..! ಮ್ಯಾಕ್ ಡೋನಾಲ್ಡ್ ನಲ್ಲಿ ಕಷ್ಟಪಟ್ಟು ದುಡಿದು ನಂತರ ಬದುಕಿಗೆ ಬೇರೆ ಬೇರೆ ಮಾರ್ಗಗಳನ್ನು ಕಂಡು ಕೊಂಡಿದ್ದಾರೆ..! ಅವರು ಆಯ್ಕೆ ಮಾಡಿಕೊಂಡ ಮಾರ್ಗ ಅವರ ಕೈ ಹಿಡಿದು ನಡೆಸುತ್ತಿದೆ..! ಅವತ್ತು ಮ್ಯಾಕ್ಡೋನಾಲ್ಡ್ ನಲ್ಲಿ ಕೆಲಸ ಮಾಡಿದವರಲ್ಲಿ ಇವತ್ತು ಇ-ಕಾಮರ್ಸ್, ಹಾಲಿವುಡ್, ಅಮೇರಿಕಾದ ರಾಜಕೀಯ ಕ್ಷೇತ್ರಗಳವರೆಗೂ ಹೆಸರನ್ನು ಮಾಡಿ, ಗುರುತಿಸಿಕೊಂಡಿದ್ದಾರೆ..! ಅವತ್ತಿನ ಮ್ಯಾಕ್ಡೋನಾಲ್ಡ್ ನಲ್ಲಿ ಕೆಲಸ ಮಾಡಿದವರು ಇವತ್ತಿನ ಸುಪ್ರಸಿದ್ಧ ವ್ಯಕ್ತಿಗಳು..! ಇವರಿಗೆ ಇವತ್ತು ಇವರದ್ದೇ ಆದ ಐಡೆಂಟಿಟಿ ಇದೆ..!
1. ಜೇಮ್ಸ್ ಫ್ರಾಂಕೊ :
ಅಮೇರಿಕಾದ ಹೆಸರಾಂತ ನಟ ಜೇಮ್ಸ್ ಫ್ರಾಂಕೊ ಒಂದು ಕಾಲದಲ್ಲಿ ಮ್ಯಾಕ್ ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು. ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ಮ್ಯಾಕ್ ಡೋನಾಲ್ಡ್ ನಲ್ಲಿ ಕೆಲಸ ಮಾಡ್ತಾ ಇದ್ದರು..! ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು ಆಫ್-ಸ್ಕ್ರೀನ್ನಲ್ಲಿ ದುಡಿಯುತ್ತಿರುವಾಗಲೂ ತಡರಾತ್ರಿಯಲ್ಲಿ ಮ್ಯಾಕ್ ಡೊನಾಲ್ಡ್ನಲ್ಲಿ ಕೆಲಸ ಮಾಡ್ತಾ ಇದ್ದವರು..! ಪೋಷಕರು ಬೆಂಬಲ ಸಿಗದೇ ಇದ್ದಾಗ ಮ್ಯಾಕ್ ಡೊನಾಲ್ಡ್ ಸಂಸ್ಥೆ ಇವರಿಗೆ ಪ್ರೋತ್ಸಾಹ, ಬೆಂಬಲ ನೀಡಿತ್ತು..! ಇದನ್ನು ಸ್ವತಃ ಜೇಮ್ಸ್ ಅವರೇ ಹೇಳಿಕೊಂಡಿದ್ದಾರೆ. 2015ರ `ವಾಷಿಂಗ್ಟನ್ ಪೋಸ್ಟ್ ಗೆ ನೀಡಿದ ಸಂದರ್ಶನದಲ್ಲಿ “ನನಗ್ಯಾರೂ ಇಲ್ಲದೇ ಇರುವಾಗ ನನ್ನ ಪಾಲಿಗೆ ಮ್ಯಾಕ್ಡೊನಾಲ್ಡ್ ಇತ್ತು” ಎಂದು ಹೇಳಿದ್ದನ್ನು ಸ್ಮರಿಸಿಕೊಳ್ಳಬಹುದು.
2. ರಾಚೆಲ್ ಮ್ಯಾಕ್ ಆಡಮ್ಸ್ :
ಈ ಕೆನಡಿಯನ್ ಬೆಡಗಿ, ಹೆಸರಾಂತ ನಟಿಯೂ ಮ್ಯಾಕ್ಡೊನಾಲ್ಡ್ ನಲ್ಲಿ ದುಡಿದವರೇ..! ಇವರು ಶಾಲಾ-ಕಾಲೇಜು ದಿನಗಳಲ್ಲಿ ಮೂರು ವರ್ಷ ಬೇಸಿಗೆ ರಜೆಯಲ್ಲಿ ಮ್ಯಾಕ್ ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು. ಅವರ ಸೋದರ-ಸೋದರಿ ಕೂಡ ಇಲ್ಲಿ ಕೆಲಸ ಮಾಡಿದವರೇ..!
3. ಶಾನಿಯ ಟ್ವೈನ್ :
ಜನಪ್ರಿಯ ಕಲಾವಿದೆ, ಗಾಯಕಿ, ಗೀತಾರಚನಾಗಾರ್ತಿಯಾದ ಕೆನಡಾದ ಶಾನಿಯ ಟ್ವೈನ್ ಕೂಡ ಮ್ಯಾಕ್ಡೊನಾಲ್ಡ್ ನ ಮಾಜಿ ಉದ್ಯೋಗಿ..! ಇವರು ಬಾಲ್ಯವನ್ನು ಕಷ್ಟದಲ್ಲಿ ಕಳೆದವರು..! ತನ್ನ ಕುಟುಂಬಕ್ಕೆ ಸಹಾಯ ಆಗ್ಲೀ ಅಂತ 8ನೇ ವರ್ಷದಲ್ಲೇ ಬಾರ್ನಲ್ಲಿ ಹಾಡು ಹೇಳ್ತಾ ಇದ್ದವರು..! ನಂತರ ಹೈಸ್ಕೂಲ್ ವಿದ್ಯಾಭ್ಯಾಸದ ಟೈಮಲ್ಲಿ ಒಂಟಾರಿಯಾದಲ್ಲಿ ಮ್ಯಾಕ್ ಡೊನಾಲ್ಡ್ನಲ್ಲಿ ಕೆಲಸ ಮಾಡಿದವರು..! ಅಲ್ಲಿ ಕೆಲಸ ಮಾಡ್ತಾ ಮಾಡ್ತಾ ಓದನ್ನು ಮುಂದುವರೆಸಿದವರು..!
4. ಪೌಲ್ ರಯಾನ್ :
ಪೌಲ್ ರಯಾನ್ ಅಮೇರಿಕಾದ ಹೌಸ್ ಆಫ್ ರೆಪ್ರಸೆಂಟೇಟಿವ್ ನ ಈಗನ ಸ್ಪೀಕರ್..! ಇವರೂ ಕೂಡ ತನ್ನ ಪ್ರೌಢಶಾಲೆಯ ದಿನಗಳಲ್ಲಿ ಮ್ಯಾಕ್ಡೋನಾಲ್ಡ್ ನಲ್ಲಿ ಕೆಲಸ ಮಾಡಿದವರು..! ಈ ಬಗ್ಗೆ 2012ರಲ್ಲಿ ಪ್ರಚಾರದ ಸಂದರ್ಭದಲ್ಲಿ ಈ ವಿಷಯ ಹೇಳಿದ್ದರು..!
5. ಆ್ಯಂಡಿ ಮ್ಯಾಕ್ ಡೊವೆಲ್ :
ಅಮೇರಿಕಾದ ನಟಿ, ರೂಪದರ್ಶಿ ಆ್ಯಂಡಿ ಮ್ಯಾಕ್ ಡೊವೆಲ್ ಸಹ ಒಂದಾನೊಂದು ಕಾಲದಲ್ಲಿ ಮ್ಯಾಕ್ಡೋನಾಲ್ಡ್ ನಲ್ಲಿಯೇ ಕೆಲಸ ಮಾಡಿದವರು..! ಇವರು ಫಿಜ್ಹಾ ಹಟ್ ನಲ್ಲೂ ಕೆಲಸ ಮಾಡಿದ್ದಾರಂತೆ..!
6. ಕಾರ್ಲ್ ಲೆವಿಸ್ :
ಒಲಂಪಿಕ್ಸ್ ನಲ್ಲಿ 9 ಚಿನ್ನ ಸೇರಿದಂತೆ 10 ಪದಕವನ್ನು ಗೆದ್ದಿರುವ ಅಮೇರಿಕನ್ ಅಥ್ಲೀಟ್ ಕಾರ್ಲ್ ಲೆವಿಸ್ ಸಹ ಮ್ಯಾಕ್ಡೋನಾಲ್ಡ್ ನಲ್ಲಿ ವೃತ್ತಿ ಬದುಕನ್ನು ಆರಂಭಿಸಿದವರು..!
7. ಶರೋನ್ ಸ್ಟೋನ್ :
ಅಮೇರಿಕಾದ ನಟಿ, ಸಿನಿಮಾ ನಿರ್ಮಾಪಕಿ, ರೂಪದರ್ಶಿ ಶರೋನ್ ಸ್ಟೋನ್ 19 ನೇ ವಯಸ್ಸಲ್ಲಿ ಮಾಡೆಲಿಂಗ್ ಒಪ್ಪಂದದ ಮೊದಲು ಮ್ಯಾಕ್ಡೋನಾಲ್ಡ್ ನಲ್ಲಿ ಕೆಲಸ ಮಾಡಿದವರು..!
8. ಜೆಫ್ ಬೆಜೊಸ್ :
ಅಮೆಜಾನ್. ಕಾಮ್ ನ ಸಿಇಓ ಜೆಫ್ ಕೂಡ ಒಂದು ಕಾಲದಲ್ಲಿ ಮ್ಯಾಕ್ಡೋನಾಲ್ಡ್ ನಲ್ಲಿ ಮಿಯಾಮಿ ಶಾಖೆಯಲ್ಲಿ `ಗ್ರಿಲ್ ಮ್ಯಾನ್’ ಆಗಿ ಕೆಲಸ ಮಾಡಿದವರು..!
9. ಆಂಡ್ರ್ಯೂ ಡಾರ್ನನ್ ಬರ್ಗ್ :
ಜೇಮ್ಸ್ ಬಿಯರ್ಡ್ ಪ್ರಶಸ್ತಿ ವಿಜೇತರಾಗಿರುವ ಆಂಡ್ರ್ಯೂ ಡಾರ್ನನ್ ಬರ್ಗ್ ಕೂಡ ಮ್ಯಾಕ್ಡೋನಾಲ್ಡ್ ನಲ್ಲಿ ಕೆಲಸ ಮಾಡಿದವರು..!
10. ಜೇ ಲೆನೊ :
ಅಮೇರಿಕಾದ ಹಾಸ್ಯನಟ, ಬರಹಗಾರ, ನಿರ್ಮಾಪಕ, ಟೆಲಿವಿಷನ್ ಕಾರ್ಯಕ್ರಮಗಳ ನಿರೂಪಕ ಜೇ ಲೆನೊ ಕೂಡ ಮ್ಯಾಕ್ಡೋನಾಲ್ಡ್ ನಲ್ಲಿ ಮಾಜಿ ಉದ್ಯೋಗಿ.
11. ಪಿಂಕ್ :
ಅಮೇರಿಕಾದ ಗಾಯಕಿ, ಗೀತರಚನಾಗಾರ್ತಿ `ಪಿಂಕ್’ ಕೂಡ ಮ್ಯಾಕ್ ಡೊನಾಲ್ಡ್, ಫಿಜ್ಹಾ ಹಟ್ನಲ್ಲಿ ಕೆಲಸ ಮಾಡಿದವರು..!
12. ಸೀಲ್ :
ಗ್ರ್ಯಾಮಿ ಪ್ರಶಸ್ತಿ ವಿಜೇತ ಬ್ರಿಟನ ಗಾಯಕ, ಗೀತರಚನಾಗಾರ ಸೀಲ್ ಕೂಡ ಮ್ಯಾಕ್ಡೊನಾಲ್ಡ್ನಲ್ಲಿ ದುಡಿದವರು..!
13. ಆಂಡ್ರ್ಯೂ ಕಾರ್ಡ್ :
ಜಾರ್ಜ್ ಬುಷ್ರ ಅಧ್ಯಕ್ಷರಾಗಿದ್ದಾಗ 1992-93ರ ಅವಧಿಯಲ್ಲಿ ಅಮೇರಿಕಾದ ಸಾರಿಗೆ ಕಾರ್ಯದರ್ಷಿಯಾಗಿದ್ದ ಆಂಡ್ರ್ಯೂ ಕಾರ್ಡ್ 1967ರಲ್ಲಿ ದಕ್ಷಿಣ ಕೆರೊಲಿನಾದಲ್ಲಿ ಮ್ಯಾಕ್ ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು..!
ಹೀಗೆ ಇವರುಗಳೆಲ್ಲಾ ಮ್ಯಾಕ್ ಡೊನಾಲ್ಡ್ ನಲ್ಲಿ ಕೆಲಸ ಮಾಡಿದ್ದವರು..! ಇವರು ಬದುಕಿಗೆ ಚೌಕಟ್ಟು ಹಾಕಿಕೊಳ್ಳದೇ ಮುನ್ನೆಡೆದರು..! ಹೊಸತನ್ನು ಬಯಸಿ ತಮ್ಮದೇ ಐಡೆಂಟಿಯನ್ನು ಹೊಂದಿದರು..! ಇವತ್ತು ಇವರೆಲ್ಲಾ ತಮ್ಮದೇ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ..! ಯಾರು ಏನು ಬೇಕಾದ್ರೂ ಆಗಬಹುದು. ಪರಿಶ್ರಮದ ಜೊತೆಗೆ ಅದೃಷ್ಟವೂ ಬೇಕು..!