ಗಂಗೆಯನ್ನು ಭೂಮಿಗೆ ತರಲು ಪ್ರಯತ್ನ ಪಟ್ಟ ಭಗೀರಥನ ಪ್ರಯತ್ನದ ಬಗ್ಗೆ ಕೇಳಿದ್ದಿರಲ್ವ. ಅದರಂತೆ ಇಲ್ಲೂ ಒಬ್ಬಮಹಾನುಭಾವರು ಭಗೀರಥನಾಗ ಹೊರಟಿದ್ದಾರೆ. ಅವರು ಯಾರು ಎಂದು ತಿಳಿಯಬೇಕಲ್ವೆ? ಅವರೆ ಶೇಕ್ ಮತೀನ್ ಮೂಸ ಭಾಯಿಯವರು. ಇವರು ಲಾತೂರ್ ಜನರ ಪಾಲಿನ ಭಗೀರಥನೇ ಸರಿ.
ಲಾತೂರ್ ಮಹಾರಾಷ್ಟ್ರದ ಬರ ಪೀಡಿತ ಪ್ರದೇಶ ಗಳಲ್ಲಿ ಒಂದು. ದಿನ ನಿತ್ಯ ಬರ ಪೀಡಿತ ಪ್ರದೇಶದಿಂದ ಸುಮಾರು ಅರ್ಧ ಮಿಲಿಯನ್ ಕ್ಕಿಂತಲೂ ಹೆಚ್ಚಿನ ಸಂಖೆಯಲ್ಲಿ ಜನರು ನೀರಿಗಾಗಿ ಅಲೆದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಗಳ ನಡುವೆ ಶೇಕ್ ಮತೀನ್ ಮೂಸ ಭಾಯಿಯವರು ತಾವಿರುವ ಸ್ಥಳದಲ್ಲೆ ಅಕ್ಕ ಪಕ್ಕದ ಪ್ರದೇಶ ಗಳಿಗೆ ಸುಮಾರು 10,000 ಲೀಟರ್ ನಷ್ಟು ನೀರನ್ನು ಸುಮಾರು 3 ತಿಂಗಳಿಂದ ಪೂರೈಸುತ್ತಿದ್ದಾರೆ. ಇದು 300ಕ್ಕೂ ಹೆಚ್ಚು ಮನೆಗಳ ಪಾಲಿಗೆ ನೆಮ್ಮದಿಯ ಉಸಿರು ಬಿಡುವಂತಾಗಿದೆ.
ಮತೀನ್ ಭಾಯಿ ಯವರು ಸರಳ ಸ್ವಭಾವದವರಾಗಿದ್ದು ಒಂದು ಶಾಲೆಯಲ್ಲಿ ಗಣಿತದ ಅಧ್ಯಾಪಕರಾಗಿದ್ದಾರೆ. ಪ್ರತೀ ದಿನ ಅವರು ತಮ್ಮ ಬೋರ್ವೆಲ್ ನಿಂದ ನೀರು ತೆಗೆದು ಸ್ವತಃ ನೀರಿಗೋಸ್ಕರ ಸಾಲಲ್ಲಿ ನಿಂತ ಅನೇಕರ ಬಕೆಟ್ ತುಂಬುತ್ತಿದ್ದಾರೆ.ಈ ಸೇವೆಗೆ ಅವರು ಒಂದು ನಯಾ ಪೈಸೆ ಯನ್ನೂ ತಗೊಳುತ್ತಿಲ್ಲ. ಮತೀನ್ ಬಾಯಿಯವರ ನಿಸ್ವಾರ್ಥ ಸೇವೆಯ ಕಥೆಯ ಬಗ್ಗೆ ಈ ನಡುವೆ ಫೇಸ್ ಬುಕ್ ನಲ್ಲಿ ಬೆಳಕು ಚೆಲ್ಲಲಾಗಿತ್ತು.
ನಿಸರ್ಗದ ಪ್ರಕೋಪಕ್ಕೆ ಗುರಿಯಾಗಿ ಬರಗಾಲದಿಂದ ತತ್ತರಿಸುತ್ತಿರುವ ಪ್ರದೇಶಗಳಲ್ಲಿ ಒಂದಾದ ಲಾತೂರ್ ಜಿಲ್ಲೆಗೆ ಸರಕಾರ ರೈಲುಗಳಲ್ಲಿ ನೀರು ಪೂರೈಸುತ್ತಿದ್ದರೂ ಅದು ಅವರಿಗೆ ಸಾಕಾಗುತ್ತಿಲ್ಲ; ಇನ್ನೂ 60 ಮಿಲಿಯನ್ ಲೀಟರ್ ನಷ್ಟು ನೀರು ಬೇಕಾಗಬಹುದು ಎಂದು ಅಂದಾಗಿಸಲಾಗಿದೆ. ಮತಿನ್ ಬಾಯ್ ಯಂತವರು ಮಾಡುವ ಸಹಾಯವು ಎಷ್ಟೋ ಜನರಿಗೆ ಆಸರೆ. “ತುತ್ತು ಅನ್ನ ತಿನ್ನೊಕೇ ಬೊಗಸೆ ನೀರು ಕುಡಿಯೊಕೆ.” ಅನ್ನೊ ಹಾಗೆ ಲಾತೂರ್ ಜನಕ್ಕೆ ಬೊಗಸೆ ತುಂಬಾ ನೀರು ಕೊಡೊ ಮತಿನ್ ಬಾಯಿ ಯವರೇ ನಿಮಗಿದೊ ನಮ್ಮದೊಂದು ಸಲಾಂ….
- ಸ್ವರ್ಣ ಭಟ್
POPULAR STORIES :
ಎಸ್.ನಾರಾಯಣ್‌ಗೆ ಕೈ ಕೊಟ್ಟ ಹುಚ್ಚಾ ವೆಂಕಟ್….!
ಮದ್ವೆಗೂ ಮುನ್ನವೇ ಮಕ್ಕಳನ್ನು ಹೆತ್ತರು..!? ಮೊದಲು ಅಮ್ಮ ಆಗ್ತೀನಿ, ಆಮೇಲೆ ಮದ್ವೆ ಎಂದಳು ಶೃತಿ..!
ಯೂಟ್ಯೂಬ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸಿಂಹದ ರಿಯಲ್ ಸ್ಟೋರಿ..!
ಒಸಾಮಾ ಬಿನ್ ಲಾಡೆನ್ ಸತ್ತಿಲ್ಲ..!? ಅಮೆರಿಕಾ ಮುಚ್ಚಿಟ್ಟ ಘೋರ ಸತ್ಯವೇನು..?
ಲವ್ ಇನ್ ಫೇಸ್ ಬುಕ್.. ಫ್ರಾನ್ಸ್ ಹುಡುಗಿ ಪುಣೆಯ ಹುಡುಗನ ರೋಮಾಂಚಕ ಸ್ಟೋರಿ