ಅಮೇಜಾನ್ ಡೆಲಿವರಿ ಬಾಯ್ ಯಶಸ್ವಿ ಉದ್ಯಮಿಯಾಗಿದ್ದು ಹೇಗೆ?

Date:

ಅಮೇಜಾನ್ ಡೆಲಿವರಿ ಬಾಯ್ ಯಶಸ್ವಿ ಉದ್ಯಮಿಯಾಗಿದ್ದು ಹೇಗೆ?

ಜೈಪುರದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬದಲ್ಲಿ ಜನಿಸಿದ ರಘುವೀರ್ ಸಿಂಗ್ ಚೌಧರಿ ಎಂಬ ಯುವಕನ ಯಶೋಗಾಥೆ ಇಂದು ನಮ್ಮ ಕಣ್ಣ ಮುಂದಿದೆ. ಶಿಕ್ಷಣ ಪಡೆಯಲು ಆಸೆಯಿದ್ದರೂ, ಸಹ ಬಡತನದ ಕಾರಣದಿಂದ ಶಿಕ್ಷನ ಪೂರೈಸಲು ಸಾಧ್ಯವಾಗದ ರಘುವೀರ್ ಸಿಂಗ್ ಚೌಧರಿ ಎಂದು ಮಹತ್ವಾಕಾಂಕ್ಷಿ ಇಂದು ಲಕ್ಷಕ್ಕೂ ಹೆಚ್ಚು ಹಣಗಳಿಸುವ ತನ್ನದೇ ಒಂದು ಉದ್ಯಮವನ್ನು ಸ್ಥಾಪಿಸಿ ಯುವಕರಿಗೆ ಮಾದರಿಯಾಗಿದ್ದಾನೆ.
ಮಾಸಿಕ ವೇತನ ಕೇವಲ 9 ಸಾವಿರ ರೂಪಾಯಿಗಳಿಗೆ ಅಮೆಜಾನ್ನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ರಘುವೀರ್ ಸಿಂಗ್ ಚೌಧರಿ ಅವರು ಈಗ ಯಶಸ್ಸಿನ ದಾರಿ ತುಳಿದಿದ್ದಾರೆ. ಒಂದು ಕಾಲದಲ್ಲಿ ಬೈಕ್ ಪೆಟ್ರೋಲ್ ಉಳಿಸುವ ಸಲುವಾಗಿ ಸೈಕಲ್ ಮೂಲಕ ಮನೆ ಮನೆಗೆ ವಸ್ತುಗಳನ್ನು ನೀಡುತ್ತಿದ್ದ ರಘುವೀರ್ ಅವರ ಇಂದಿನ ಜೀವನ ಸುಖಮಯವಾಗಿದೆ. ಬದುಕಲು ಕೂಡ ಸಿಗದಷ್ಟು ಹಣದ ಕಷ್ಟದ ಪರಿಸ್ಥಿಯಲ್ಲಿದ್ದ ರಘುವೀರ್ ಸಿಂಗ್ ಚೌಧರಿ ಅವರು ಮಾರುಕಟ್ಟೆಯನ್ನು ಅರ್ಥ ಮಾಡಿಕೊಂಡು ತನ್ನದೇ ಚಿಕ್ಕದೊಂದು ಉದ್ಯಮ ಶುರು ಮಾಡಿದರು.
ಇಂದಿನ ತಾಂತ್ರಿಕ ಯುಗದಲ್ಲಿ ವಿಧ್ಯಾಭ್ಯಾಸ ಇಲ್ಲದಿದ್ದರೆ ಕಷ್ಟ ಅನ್ನುವುದು ನಿಜ. ಆದರೆ, ವಿಧ್ಯಾಭ್ಯಾಸವನ್ನು ಪಡೆಯದಿದ್ದರು ಸಹ ಅನುಭವವನ್ನೇ ವಿಧ್ಯೆಯನ್ನಾಗಿ ಪಡೆದ ರಘುವೀರ್ ಸಿಂಗ್ ಚೌಧರಿ ಅವರು ಸ್ವಂತ ಉದ್ಯಮದಲ್ಲಿ ಯಶಸ್ವಿಯಾದರು. ತನಗೆ ಸಿಕ್ಕ ಸಿಕ್ಕ ಸಂಬಳದಲ್ಲಿಯೇ ಸಾಕಷ್ಟು ಹಣ ಉಳಿಸಿದ ಅವರು ಸ್ವಂತ ಉದ್ಯಮಕ್ಕೆ ಸಜ್ಜಾಗಿ ನಿಂತರು. ಈಗ ‘ಟೀ ಸ್ಟಾರ್ಟ್ ಆಪ್’ ಒಂದನ್ನು ಶುರು ಮಾಡಿ ಬೆಳೆಯುವ ಸಿರಿ ಮೊಳೆಕೆಯಲ್ಲಿಯೇ ಎಂಬುದನ್ನು ಸಾಧಿಸಿ ತೋರಿದರು.
ಹೌದು, ನೀವು ಕೇಳುತ್ತಿರುವುದು ನಿಜ. ಇಂದು ರಘುವೀರ್ ಸಿಂಗ್ ಚೌಧರಿ ಅವರು ಸ್ವಂತ ಉದ್ಯಮ ಕಂಡುಕೊಂಡಿರುವುದು ಬಿದಿ ಬದಿಯಲ್ಲಿ ಮಾರುವ ಟೀ ಮಾರುವ ಯೋಜನೆಯಿಂದಲೇ. ಆದರೆ, ಇವರು ಮಾರುಕಟ್ಟೆಯನ್ನು ಬಲ್ಲಬರಾಗಿದ್ದರು. ಹಾಗಾಗಿ, ಯಾವುದೋ ಒಂದು ಸ್ಥಳದಲ್ಲಿ ಟೀ ಅಂಗಡಿಯನ್ನೇ ತೆರೆಯದೇ, ಟೀ ಡೆಲಿವರಿ ನೀಡುವ ಸ್ಟಾರ್ಟ್ಆಪ್ ಒಂದನ್ನು ಹುಟ್ಟುಹಾಕಿದರು. ಇಲ್ಲಿ ಅಮೆಜಾನ್ ಡೆಲಿವರಿ ಕೆಲಸ ಅವರಿಗೆ ಹೆಚ್ಚು ಅನುಭವವನ್ನು ನೀಡಿತು.


ರಘುವೀರ್ ಸಿಂಗ್ ಚೌಧರಿ ಅವರು ಅಮೆಜಾನ್ ಉತ್ಪನ್ನಗಳನ್ನು ವಿತರಿಸುವಾಗ ಚಹಾವನ್ನು ಸೇವಿಸುವ ಸೂಕ್ತ ತಾಣವನ್ನು ಕಂಡುಕೊಳ್ಳುವುದು ಕಷ್ಟಕರವಾಗಿತ್ತು. ಜೊತೆಗೆ ಕೆಲ ಕಂಪೆನಿಗಳಲ್ಲಿ ಉತ್ತಮ ಚಹಾ ಸಿಗುವುದಿಲ್ಲ ಎಂಬ ಉದ್ಯೋಗಿಗಳ ಮಾತು ಅವರ ಕಿವಿಗೆ ಬಿದ್ದವು. ಇದನ್ನೇ ಅವಕಾಶವನ್ನಾಗಿ ಮಾಡಿಕೊಳ್ಳಬೇಕು ಎಂದು ನಿಶ್ಚಯಿಸಿದ ರಘುವೀರ್ ತಾನು ಉಳಿಸಿದ ಹಣದಲ್ಲಿಯೇ ಸ್ನೇಹಿತರ ಸಹಾಯದಿಂದ ‘ಟೀ ಸ್ಟಾರ್ಟ್ ಆಪ್’ ಒಂದನ್ನು ಶುರು ಮಾಡಿದರು.
ತಾನು ಉಳಿಸಿದ ಹಣದಲ್ಲಿ ಜೈಪುರದಲ್ಲಿಯೇಒಂದು ಸ್ಥಳವನ್ನು ಬಾಡಿಗೆಗೆ ತೆಗೆದುಕೊಂಡ ರಘುವೀರ್ ಸಿಂಗ್ ಚೌಧರಿ, ತನ್ನ ಮೂವರ ಸ್ನೇಹಿತರ ಸಹಾಯದಿಂದ ‘ಟೀ ಸ್ಟಾರ್ಟ್ ಆಪ್’ ಅನ್ನು ಶುರು ಮಾಡಿದರು. ನಂತರ ಓರ್ವ ಯುವನನ್ನು ಕೆಲಸಕ್ಕೆ ಇಟ್ಟುಕೊಂಡ ರಘುವೀರ್ ದೂರವಾಣಿ ಮತ್ತು ವಾಟ್ಸ್ಆಪ್ ಮೂಲಕ ಚಹಾ ಡೆಲಿವರಿ ಮಾಡುವ ಕೆಲಸಕ್ಕೆ ಕೈ ಹಾಕಿ ಈಗ ಕೆಲವೇ ತಿಂಗಳುಗಳಲ್ಲಿ ಯಶಸ್ವಿಯಾಗಿದ್ದಾರೆ.
ಈಗ ತನ್ನೇದೇ ಸ್ಟಾರ್ಟ್ಆಪ್ ಮೂಲಕ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಚಹಾವನ್ನು ನೀಡುತ್ತಿರುವ ರಘುವೀರ್ ಸಿಂಗ್ ಚೌಧರಿ ಅವರು ಈಗ ಲಕ್ಷಕ್ಕೂ ಹೆಚ್ಚು ಆದಾಯವನ್ನು ಪಡೆಯುತ್ತಿದ್ದಾರೆ. ಸ್ನೇಹಿತರನ್ನೂ ಸಹ ಉದ್ಯಮಕ್ಕೆ ಜೊತೆಗೂಡಿಸಿಕೊಂಡಿರುವಅವರ ಉದ್ಯಮದಲ್ಲಿ ಈಗ ಚಹಾ ವಿತರಣೆಗೆಂದೇ ನಾಲ್ಕು ಬೈಕುಗಳಿವೆ. ಪ್ರತಿದಿನ 500 ರಿಂದ 700 ಟೀ ಆರ್ಡರ್ಗಳನ್ನು ಅವರ ಚಹಾ ಕಂಪೆನಿ ಪಡೆದುಕೊಳ್ಳುತ್ತದೆ.
ಚಹಾ ಮಾರಿ ಉದ್ದಾರವಾಗಲು ಸಾಧ್ಯವಿವೇ ಎನ್ನುವವರಿಗೆ ರಘುವೀರ್ ಸಿಂಗ್ ಚೌಧರಿ ಮಾದರಿಯಾಗಿದ್ದಾರೆ. ಚಹಾ ಮಾರುವುದರಿಂದ ಹಣ ಸಂಪಾದನೆಯಾಗುತ್ತದೆ. ಆದರೆ, ಚಹಾವನ್ನು ಹೇಗೆ ಮಾರಬೇಕು ಎನ್ನುವ ಕಲೆ ಅವರನ್ನು ಉದ್ಯಮಿಯಾಗಿರಿಸಿದೆ ಎಂದರೆ ಅತಿಶಯೋಕ್ತಿಯಲ್ಲ. ಹಾಗಾಗಿ, ನಾವು ಏನನ್ನೇ ಮಾಡಲು ಹೊರಟರೂ ಅದನ್ನು ಸಾಧಿಸುವ ಚಲ ಇರಬೇಕು. ಸಾಧಿಸುವ ಚಲವಿದ್ದರೆ, ಸಾಧನೆ ಎಂಬುದು ನಮ್ಮ ಕಾಲಿನ ಕೆಳಗೆ ಇರುತ್ತದೆ.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...